ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯ : ಸಿದ್ದಲಿಂಗ ಬಾಳಿ.

ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯ : ಸಿದ್ದಲಿಂಗ ಬಾಳಿ.

ಎಲ್ಲಾ ಸಂಪತ್ತಿಗಿಂತ ಆರೋಗ್ಯ ಸಂಪತ್ತು ಬಹಳ ಮುಖ್ಯ : ಸಿದ್ದಲಿಂಗ ಬಾಳಿ.

ಮನುಷ್ಯನ ಜೀವನದಲ್ಲಿ ಎಲ್ಲಾ ಸಂಪತ್ತು ಇದ್ದು. ಅದನ್ನು ಅನುಭವಿಸಲು ಆರೋಗ್ಯ ಇರದಿದ್ದರೆ ಏನು ಪ್ರಯೋಜನ ಆದ್ದರಿಂದ ಆರೋಗ್ಯವೇ ಶ್ರೇಷ್ಠ ಸಂಪತ್ತು ಎಂದು ಸಂಪನ್ಮೂಲ ಶಿಕ್ಷಕ ಸಿದ್ದಲಿಂಗ ಬಾಳಿ ರಾವೂರ ಹೇಳಿದರು. ಅವರು ನಾಲವಾರ ಸರಕಾರಿ ಪ್ರೌಢ ಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಹಾಗೂ ಅಖೀಲ ಕರ್ನಾಟಕ ಜನಜಾಗೃತಿ ವೇದಿಕೆ ವತಿಯಿಂದ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ಇಂದಿನ ಯುವಪೀಳಿಗೆ ದೂಮಪಾನ, ಮದ್ಯಪಾನ, ಗುಟಕಾ, ಗಾಂಜಾ ಮುಂತಾದ ದುಶ್ಚಟಗಳಿಗೆ ಬಲಿಯಾಗುತ್ತಿದೆ. ಅತಿಯಾದ ಮೊಬೈಲ್ ಬಳಕೆಯಿಂದ 18 ರಿಂದ 21 ವಯಸ್ಸಿನ ಹಾದಿಹರೆಯದ ಯುವಕರು ಅತ್ಯಾಚಾರ, ಕೊಲೆ, ದರೋಡೆ, ಅಪಹರಣ ದಂತಹ ಅಪರಾಧಿ ಕೃತ್ಯಗಳಲ್ಲಿ ಭಾಗಿಯಾಗುತ್ತಿರುವುದು ಆತಂಕ ಮುಡಿಸುತ್ತಿದೆ. ಕ್ಯಾನ್ಸರ್, ಹೃದಯಾಘಾತ, ಪಾರ್ಶ್ವವಾಯುನಂತಹ ಮಾರಕ ಖಾಯಿಲೆಗಳು ಹೆಚ್ಚಾಗುತ್ತಿವೆ. ಆದ್ದರಿಂದ ಉತ್ತಮ ವ್ಯಾಯಾಮ, ಉತ್ತಮ ಆಹಾರ, ಉತ್ತಮ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮಾದಕ ವಸ್ತುಗಳಿಂದ, ದುಶ್ಚಟಗಳಿಂದ ದೂರವಿರಿ ಸ್ವಸ್ಥ ಸಮಾಜ ನಿರ್ಮಾಣಕ್ಕೆ ಸಹಕರಿಸಿ ಎಂದು ಹೇಳಿದರು.

ಪ್ರಶ್ನೆಗಳಿಗೆ ಸರಿ ಉತ್ತರ ನೀಡಿದ ವಿದ್ಯಾರ್ಥಿಗಳನ್ನು ಪೆನ್ನು ನೀಡಿ ಪ್ರೋತ್ಸಾಹಿಸಲಾಯಿತು.

ವೇದಿಕೆ ಮೇಲೆ ಮುಖ್ಯಗುರು ಬುದ್ದಿವಂತ, ಶಿಕ್ಷಕ ಮಲ್ಲಿನಾಥ ಸಂಸ್ಥೆಯ ಮೇಲ್ವಿಚಾರಕ ಶಿವಕುಮಾರ, ವಿಎಲ್ ಇ ಸಿದ್ದರಾಜ ಉಪಸ್ಥಿತರಿದ್ದರು. 

ಶಾಲೆಯ ಶಿಕ್ಷಕರು ಮಕ್ಕಳು ಉಪಸ್ಥಿತರಿದ್ದರು.