ನರೆಗಾ ಹೆಸರಿನಲ್ಲಿ8 ಲಕ್ಷ ಅವ್ಯವಹಾರ ಸೂಕ್ತ ತನಿಖೆಗೆ ಜಮಾದಾರ ಆಗ್ರಹ
ನರೆಗಾ ಹೆಸರಿನಲ್ಲಿ8 ಲಕ್ಷ ಅವ್ಯವಹಾರ ಸೂಕ್ತ ತನಿಖೆಗೆ ಜಮಾದಾರ ಆಗ್ರಹ
ಅಫಜಲಪುರ: ತಾಲೂಕಿನ ಮಲ್ಲಾಬಾದ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಬರುವ ಚಿಂಚೋಳಿ ಗ್ರಾಮದ ಸರಕಾರಿ ಶಾಲೆಯ ಆಟದ ಮೈದಾನ ಮಾಡುವ ನೆಪದಲ್ಲಿ ಸುಮಾರು 8.40 ಲಕ್ಷ ರೂಪಾಯಿ ಹಣ ಅವ್ಯವಹಾರವಾಗಿದೆ ಎಂದು ಕರ್ನಾಟಕ ರಾಜ್ಯರೈತ ಸಂಘ ಹಾಗೂ ಹಸಿರು ಸೇನೆ ಅಧ್ಯಕ್ಷ ಮಹಾಂತೇಶ ಜಮಾದಾರ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ನಂತರ ಮಾತನಾಡಿದ ಅವರು 2023-24 ನೇ ಸಾಲಿನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ
ಸರಕಾರಿ ಪ್ರೌಢ ಶಾಲೆಯ ಎಸ್.ಡಿ.ಎಮ್.ಸಿ ಅಧ್ಯಕ್ಷರು ಹಾಗೂ ಗ್ರಾಮ ಪಂಚಾಯತಿ ಸದಸ್ಯರು ಸೇರಿ ಒಟ್ಟು 8.40 ಲಕ್ಷ ರೂಪಾಯಿ ಹಣದ ಎನ್.ಎಮ್.ಆರ್.ತಗೆದು ಯಾವುದೇ ಒಬ್ಬ ಕೂಲಿ ಕಾರ್ಮಿ ಕರಿಗೆ ಕೆಲಸ ನೀಡದೆ ನಕಲಿ ಪೋಟೋ ಚಿತ್ರಿಸಿ ಸರಕಾರದ ಕಣ್ಣಿಗೆ ಮಣ್ಣುಪೆರಚಿ ಹಣ ಗುಳುಂ ಮಾಡಿದ್ದಾರೆ.
ಉದ್ಯೋಗಖಾತ್ರಿ ಯೋಜನೆಯ ನಿಯಮಗಳನ್ನು ಗಾಳಿಗೆ ತುರಿ ಯಾವುದೇ ಕೆಲಸ ಮಾಡದೇ ಅವ್ಯವಹಾರವಾಗಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.
ಕೂಡಲೇ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸ್ಥಳ ಪರಿಶಿಲನೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಪ್ರೌಢ ಶಾಲೆಯಲ್ಲಿ ಮಕ್ಕಳಿಗೆ ಆಟವಾಡಲು ಖೋ-ಖೋ ಮತ್ತು ಕಬ್ಬಡಿ ಆಠದ ಮೈದಾನ ಮಾಡುವುದಾಗಿ ಹಣ ದುರುಪಯೋಗ ಮಾಡಿಕೊಂಡಿ ದ್ದಾರೆ. ಎಂದು ಆರೋಪಿಸಿದ್ದಾರೆ.
ಕೂಡಲೇ ಈ ಕಾಮಗಾರಿಯ ಅವ್ಯವಹಾರದಲ್ಲಿ ಭಾಗಿಯಾದವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಜೈಲಿಗಟ್ಟಬೇಕು ಇಲ್ಲವಾದರೆ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳ ಕಛೇರಿಯ ಮುಂದೆ ಉಪವಾಸ ಸತ್ಯಾಗ್ರಹ ಮಾಡಲಾಗುವುದು ಎಂದರು.
ಇದೆ ಸಂದರ್ಭದಲ್ಲಿ ಮುಖಂಡರಾದ ಶ್ರೀಶೈಲ ಗುಳೆ,ಮಲಿಕ್ ಕೊಳ್ಳಿ,ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವರದಿ ಮಂಜುನಾಥ ಹಡಪದ