ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯರಾಧನೆ ಮತ್ತು ನುಡಿನಮನ

ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯರಾಧನೆ ಮತ್ತು ನುಡಿನಮನ

ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯರಾಧನೆ ಮತ್ತು ನುಡಿನಮನ

ನಾಗರಾಜ್ ದಂಡಾವತಿ ವರದಿ

ಶಹಾಬಾದ: ಹಾಲುಮತದ ಧರ್ಮವನ್ನು ಇಡೀ ನಾಡಿಗೆ ಪರಿಚಯಿಸಿದ ಕೀರ್ತಿ ತಿಂಥಣಿ ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದ ಸ್ವಾಮೀಜಿಗೆ ಅವರಿಗೆ ಸಲ್ಲುತ್ತದೆ ಎಂದು ಕುರುಬ ಸಮಾಜದ ತಾಲೂಕಾ ಮಾಜಿ ಅಧ್ಯಕ್ಷ ಮಲಕಣ್ಣ ಮುದ್ದಾ ಹೇಳಿದರು.

ಅವರು ಸೋಮವಾರ ನಗರದ ಶ್ರೀ ಬೀರಪ್ಪ ಬೆಟ್ಟ ಟ್ರಸ್ಟ ವತಿಯಿಂದ ಬೆಟ್ಟದ ಶ್ರೀ ಬೀರಲಿಂಗೆಶ್ವರ ದೇವಸ್ಥಾನದಲ್ಲಿ

ಹಾಲುಮತ ರತ್ನ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠಾಧ್ಯಕ್ಷರಾದ ಶಿವೈಕ್ಯರಾದ ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಾಲು ಮತದ ಸಂಸ್ಕೃತಿಯನ್ನು ಪರಿಚಯಸಿಸಲು ಪಾದರಸದಂತೆ ಒಡಾಡಿ ಹಾಲುಮತದ ಕಲೆ ಸಾಹಿತ್ಯ ಮತ್ತು ಸಂಸ್ಕೃತಿಕ ಸಮ್ಮೇಳನವನ್ನು ಯಶಸ್ವಿಯಾಗಿ ಪೂರ್ಣ ಗೊಳಿಸಿ ಇತಿಹಾಸವನ್ನು ತಿಳಿಸುವ ನಿಟ್ಟಿನಲ್ಲಿ ಅತಿ ದೊಡ್ಡ ಕೆಲಸವನ್ನು ಮಾಡಿದ್ದರು. ಕುರುಬ ಸಮಾಜವನ್ನು ಮಲಿಷ್ಠಗೊಳಿಸಿ, ಅವರಲ್ಲಿ ಸಂಸ್ಕಾರಿ 'ಯುವ ಜೀವನದ ಸಂದೇಶವನ್ನು ನೀಡಿದವರು.ಸಮಾಜದ ಏಳಿಗಾಗಿ

ಹಗಲಿರುಳು ಶ್ರಮಿಸಿದ ಸ್ವಾಮೀಜಿಯವರು ಇಲ್ಲದಿದ್ದರೂ ಅವರ ಬಿಟ್ಟು ಹೋದ ನಿತ್ಯ ನಿರಂತರವಾದ ವಿಚಾರಗಳು ಎಂದಿಗೂ ಜನಮಾನಸದಲ್ಲಿ ಬೇರೂರಿವೆ ಎಂದು ಹೇಳಿದರು. ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ ಕಂಠಿಕರ್ ಮಾತನಾಡಿ, ಆಧ್ಯಾತ್ಮದ ಜೊತೆಗೆ ಶಿಕ್ಷಣ, ಸಾಹಿತ್ಯ ಮತ್ತು ಧಾರ್ಮಿಕ ಕ್ಷೇತ್ರಗಳಿಗೆ ಗಣನೀಯ ಕೊಡುಗೆ ನೀಡಿದ್ದರು.

ಅವರ ಅಗಲಿಕೆಯಿಂದ ನಾಡಿನ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ವಲಯಕ್ಕೆ ದೊಡ್ಡ ನಶ್ಚಿವಾಗಿದೆ. ಸಮಾಜದಲ್ಲಿ ಜನರನ್ನು

ಶಹಾಬಾದ: ನಗರದ ಶ್ರೀ ಬೀರಪ್ಪ ಬೆಟ್ಟ ಟ್ರಸ್ಟ ವತಿಯಿಂದ ಆಯೋಜಿಸಲಾದ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರು ಪೀಠಾಧ್ಯಕ್ಷರಾದ ಶಿವೈಕ್ಯರಾದ ಶ್ರೀ ಸಿದ್ದರಮಾನಂದ ಸ್ವಾಮೀಜಿಯವರ ಪುಣ್ಯರಾಧನೆ ಮತ್ತು ನುಡಿನಮನ ಕಾರ್ಯಕ್ರಮದಲ್ಲಿ ವಿಜಯಕುಮಾರ ಕಂಠಿಕರ್ ಮಾತನಾಡಿದರು.

ಜಾಗೃತಗೊಳಿಸಿ, ಕುರುಬ ಸಮಾಜವನ್ನು ಸರಿಯಾದ ದಿಕ್ಕಿನಲ್ಲಿ ನಡೆಯುವತ್ತ ಕಾರಣೀಭೂತ 'ರಾಗಿದ್ದರು.ಎಲ್ಲಾ ಸಮಾಜ ದೊಂದಿಗೆ ನಿಕಟ ಸಂಪರ್ಕ ದೊಂದಿಗೆ ಒಡನಾಟವನ್ನು ಹೊಂದಿದವರು.ಅಲ್ಲದೇ ಸಮಾಜದಲ್ಲಿ ಸೌಹಾರ್ದತೆ ವಾತಾವರಣವನ್ನು ನಿರ್ಮಾಣ ಮಾಡುವಲ್ಲಿ ಅವಿರತವಾಗಿ ಕೆಲಸ ಮಾಡಿದ್ದರು ಎಂದರು.

ಕಡಣಿಯ ಖಂಡೋಬಾ ದೇವಸ್ಥಾನದ ಪೀಠಾಧಿಪತಿ ಗಣಪತಿ ಮುತ್ಯಾ ಪೂಜಾರಿ, ಬೀರಪ್ಪ ಬೆಟ್ಟ ಟ್ರಸ್ಟನ ಅಧ್ಯಕ್ಷ ಶಿವಾನಂದ ಪೂಜಾರಿ, ಗುತ್ತಿಗೆದಾರ ಮಲ್ಲಿಕಾರ್ಜುನ.ಎಲ್.ಪೂಜಾರಿ,

ಶಿವಯೋಗಿ ಪಟ್ಟಣಕರ ವೇದಿಕೆಯ ಮೇಲಿದ್ದರು.

ಕಾರ್ಯಕ್ರಮದಲ್ಲಿ ಮುಖಂಡರಾದ ಸಿದ್ದು.ಎಸ್.ಪೂಜಾರಿ, ಶಾಂತಪ್ಪ ಪೂಜಾರಿ, ರಾಜು ಕುಂಬಾರ, ಅರುಣ ಜಾಯಿ, ಶರಣಪ್ಪ ಪೂಜಾರಿ, ನಾಗೇಂದ್ರ ಕುಂಟನ,ಯಲ್ಲಾಲಿಂಗ ಕರಗರ, ಗುರುರೇವಣಸಿದ್ದ ಕೊಡಚಿ, ಮಲ್ಲಿಕಾರ್ಜುನ. ಸಿ. ಪೂಜಾರಿ ನಿರೂಪಿಸಿದರು. ಬಸವರಾಜ ಕುಂಟನ ಸ್ವಾಗತಿಸಿದರು, ಶಾಂತಪ್ಪ ಹಡಪದ ವಂದಿಸಿದರು.ಈ ಸಂದರ್ಭದಲ್ಲಿ ನೂರಾರು ಮಹಿಳೆಯರು ಮತ್ತು ಪುರುಷರು ಸೇರಿದಂತೆ ಭಕ್ತಾಧಿಗಳು ಹಾಜರಿದ್ದರು