ನೇತ್ರ ತಪಾಸಕರ ಸಂಘದ ಐದನೇ ವಾರ್ಷಿಕೋತ್ಸವ

ನೇತ್ರ ತಪಾಸಕರ ಸಂಘದ ಐದನೇ ವಾರ್ಷಿಕೋತ್ಸವ
ಕಲಬುರಗಿ: ನಗರದ ರಾಮ ಮಂದಿರ ಹತ್ತಿರ ಖಾಸಗಿ ಸಭಾಗಣದಲ್ಲಿ ನವ ಭಾರತ ನೇತ್ರ ತಪಾಸಕರ ಹಾಗೂ ಕನ್ನಡಕ ಮಳಿಗೆಗಳ ಮಾಲಿಕರ ಸಂಘದ ಅಧ್ಯಕ್ಷರಾದ ಆನಂದ ವಾರಿಕ ಅವರ ನೇತೃತ್ವದಲ್ಲಿ ನವ ಭಾರತ ಓಪ್ಟೊಮೆಟ್ರಿಸ್ಟ ಮತ್ತು ಆಪ್ಟಕಲ್ ಮಾಲೀಕರ ಸಂಘ ಟ್ರಸ್ಟ್ನ 5ನೇ ವಾರ್ಷಿಕೋತ್ಸವ ಕಾರ್ಯಕ್ರವನ್ನು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಅಂಬಾರಾಯ ರುದ್ರವಾಡಿ, ಜಿಲ್ಲಾ ಆರ ಸಿ ಎಚ್ ಡಾ. ಸಿದ್ದು ಪಾಟೀಲ್ ಯಾದಗಿರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ ಪ್ರಭುಲಿಂಗ ಮಾನಕರ ಇವರು ಉದ್ಘಾಟಿಸಿದರು.
ಅನುಗ್ರಹ ಕಣ್ಣಿನ ಆಸ್ಪತ್ರೆಯ ನೇತ್ರ ತಜ್ಞರಾದ ಡಾ. ವಿನೀತ ಭೀಮಶೆಟ್ಟಿ, ಡಾ ಸೌರಭ ಶಹಾ, ನಿಕಟಪೂರ್ವ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ.ವಿಶ್ವನಾಥ ಬಿರಾದಾರ ಸೇಡಂ ತಾಲ್ಲೂಕಾ ಆರೋಗ್ಯ ಅಧಿಕಾರಿ ಡಾ. ಸಂಜೀವ ಪಾಟೀಲ ಧನ್ವಂತರಿ ನಾರಾಯಣ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ ಅಂಬಾರಾಯ ರುದ್ರವಾಡಿ ಮಾತನಾಡಿ ಸಂಘದ ವತಿಯಿಂದ ಆನಂದ ವಾರಿಕ ಅವರು ಹಲವಾರು ಉಚಿತ ನೇತ್ರ ತಪಾಸಣಾ ಶಿಬಿರ ಹಾಗೂ ಉಚಿತ ಕಣ್ಣಿನ ಶಸ್ತ್ರ ಚಿಕಿತ್ಸಾ ಶಿಬಿರಗಳನ್ನು ಮಾಡುತ್ತಿದ್ದು ಕೋವಿಡ ಸಂದರ್ಭದಲ್ಲಿ ಸಂಘದವರು ಸರ್ಕಾರದ ಸಹಯೋಗದೊಂದಿಗೆ ಮಾಡಿದ್ದು ಇತರರಿಗೆ ಮಾದರಿಯಾಗಿದೆ ಎಂದು ಹೇಳಿದರು.
ಜಿಲ್ಲಾ ಆರ್ ಸಿ ಎಚ್ ಅಧೀಕಾರಿ ಸಿದ್ದು ಪಾಟೀಲ್ ಮಾತನಾಡಿ ಆನಂದ ವಾರಿಕ ಒಬ್ಬ ಉತ್ತಮ ಸಮಾಜ ಸೇವಕ ನಾನು ಕಳೆದ ಇಪ್ಪತ್ತು ವರ್ಷಗಳಿಂದ ಅವರ ವೈದ್ಯಕೀಯ ಸೇವೆ ಪ್ರಾಮಾಣಿಕವಾಗಿದ್ದು ಇವರ ನೇತೃತ್ವದಲ್ಲಿ ಸಂಘವು ರಾಜ್ಯಾದ್ಯಂತ ಸಂಘಟನೆಯಾಗಲಿದೆ ಎಂದರು.
ಅಧ್ಯಕ್ಷ ಆನಂದ ವಾರಿಕ ಮಾತನಾಡಿ ನಮ್ಮ ಸಂಘ ವತಿಯಿಂದ ಜಿಲ್ಲಾದ್ಯಂತ ಉಚಿತ ಆರೋಗ್ಯ ತಪಾಸಣಾ ಶಿಬಿರಗಳು ಹಮ್ಮಿಕೊಳ್ಳಲು ನಿಮ್ಮೆಲ್ಲರ ಸಹಕಾರ ಅಗತ್ಯ ಸಂಘಕ್ಕೆ ನಗರದಲ್ಲಿ ಸಿ ಎ ನಿವೇಶನ ನೀಡುವ ಕುರಿತು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಿಗೆ ಮನವಿ ಮಾಡಲಾಗುವುದು ಎಂದರು.
ಇದೆ ಸಂದರ್ಭದಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರದ ಕುಲಕರ್ಣಿ ,ಚಂದ್ರಶೇಖರ ಸ್ವಾಮಿ, ಅಣವೀರ ಗದಗಿ ಗಿರಿಧರ ಕುಲಕರ್ಣಿ , ಕವಿತಾ ಸ್ವಪ್ನಾ, ಸುಧಾಬಾಯಿ, ಶರಣಬಸಪ್ಪ ತಳವಾರ, ಈರಣ್ಣ ಜಳಕೋಟಿ ಪ್ರಭು ಮೂಲಿಮನಿ ಭೀಮಾಶಂಕರ ಅನೇಕರು ಉಪಸ್ಥಿತರಿದ್ದರು. ಶರದ ಕುಲಕರ್ಣಿ ನಿರೂಪಿಸಿದರು ಅನೀಲ ಗದಗಿ ವಂದನಾರ್ಪಣೆ ಮಾಡಿದರು. ಜಿಲ್ಲೆಯ ಎಲ್ಲಾ ಕನ್ನಡಕ ಮಳಿಗೆಗಳ ಮಾಲಿಕರಿಗೆ ಮುಖ್ಯ ಅತಿಥಿಗಳಿಗೆ ಸಂಘದ ವತಿಯಿಂದ ಸಂವಿಧಾನದ ಪೀಠಿಕೆ ಉಡುಗೊರೆಯಾಗಿ ನೀಡಲಾಯಿತು.