ಈಡಿಗ - ಬಿಲ್ಲವರ ಶಕ್ತಿ ಪ್ರದರ್ಶನಕ್ಕೆ ಸ್ಪಂದಿಸಿದ ಸರಕಾರ: ಸಚಿವ ಶಿವರಾಜ್ ತಂಗಡಗಿ ಸಂಧಾನ
ಈಡಿಗ - ಬಿಲ್ಲವರ ಶಕ್ತಿ ಪ್ರದರ್ಶನಕ್ಕೆ ಸ್ಪಂದಿಸಿದ ಸರಕಾರ: ಸಚಿವ ಶಿವರಾಜ್ ತಂಗಡಗಿ ಸಂಧಾನ
ಡಾ.ಪ್ರಣವಾನಂದಶ್ರೀ ನೇತೃತ್ವದ ಐವರ ನಿಯೋಗ ಫೆ.28ರ ಮೊದಲು ಸಿಎಂ ಭೇಟಿ ನಿರ್ಧಾರ
ಬೆಂಗಳೂರು : ಡಾ. ಪ್ರಣವಾನಂದ ಶ್ರೀಗಳ ಏಳು ಕಿಲೋಮೀಟರ್ ಐತಿಹಾಸಿಕ ಪಾದಯಾತ್ರೆಗೆ ರಾಜ್ಯ ಸರ್ಕಾರ ಸ್ಪಂದನೆ ನೀಡಿ ಫೆಬ್ರವರಿ 28ರ ವರೆಗೆ ಮುಖ್ಯಮಂತ್ರಿಗಳ ಜೊತೆ ಮಾತುಕತೆಗೆ ವ್ಯವಸ್ಥೆ ಮಾಡುವುದಾಗಿ ಮುಖ್ಯಮಂತ್ರಿಗಳ ನಿರ್ದೇಶನದಂತೆ ಮುಷ್ಕರ ಸ್ಥಳಕ್ಕೆ ಆಗಮಿಸಿದ ರಾಜ್ಯದ ಹಿಂದುಳಿದ ವರ್ಗಗಳ ಹಾಗೂ ಕನ್ನಡ ಮತ್ತು ಸಂಸ್ಕೃತಿ ಖಾತೆಯ ಸಚಿವರಾದ ಶಿವರಾಜ್ ತಂಗಡಗಿ ತಿಳಿಸಿದರು. ಈ ಹಿನ್ನೆಲೆಯಲ್ಲಿ ಸುದೀರ್ಘ 38 ದಿನಗಳ ಪಾದಯಾತ್ರೆ ಅಂತ್ಯಗೊಂಡಿದೆ.
ಜ.6 ರಿಂದ ಕಲಬುರಗಿಯ ಚಿತ್ತಾಪುರ ತಾಲೂಕು ಕರದಾಳ ಬ್ರಹ್ಮಶ್ರೀ ನಾರಾಯಣ ಗುರು ಶಕ್ತಿಪೀಠದಿಂದ ಆರಂಭಿಸಿದ ಪಾದಯಾತ್ರೆ 708 ಕೀ.ಮೀ 38 ದಿನಗಳಲ್ಲಿ ಕ್ರಮಿಸಿ ಫೆ.12ಗುರುವಾರ ಇಲ್ಲಿನ ಫ್ರೀಡಂ ಪಾರ್ಕ್ ಗೆ ಆಗಮಿಸಿ ಈಡಿಗ - ಬಿಲ್ಲವ ಸೇರಿದಂತೆ 26 ಪಗಡೆಗಳ ಶಕ್ತಿ ಪ್ರದರ್ಶನದಲ್ಲಿ ಸ್ವಾಮೀಜಿ ಅವರ ಜೊತೆ ಸಚಿವ ತಂಗಡಗಿಯವರು ಮುಖ್ಯಮಂತ್ರಿಗಳು ನೀಡಿದ ನಿರ್ದೇಶನದಂತೆ ಎರಡು ಬಾರಿ ಸಂಧಾನವನ್ನು ನಡೆಸಿ ಸ್ವಾಮೀಜಿಗಳು ಮುಂದಿಟ್ಟ18 ಬೇಡಿಕೆಗಳಲ್ಲಿ ಆರು ಬೇಡಿಕೆಗಳನ್ನು ಶೀಘ್ರದಲ್ಲೇ ಬಗೆಹರಿಸಲು ಸೂತ್ರ ಕಂಡುಕೊಳ್ಳಲಾಯಿತು. ಫೆ. 28ರ ಒಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಜೊತೆಗೆ ಡಾ. ಪ್ರಣವಾನಂದ ಶ್ರೀ ನೇತೃದಲ್ಲಿ ಮಾಜಿ ಸಚಿವ ಮಾಲಿಕಯ್ಯ ಗುತ್ತೇದಾರ, ಎಚ್ ಆರ್ ಶ್ರೀನಾಥ್ ಧಣಿ ಸೇರಿದಂತೆ ಐದು ಮಂದಿಯ ನಿಯೋಗ ಕೊಂಡೊಯ್ಯಲು ಜವಾಬ್ದಾರಿ ನಿರ್ವಹಿಸುವುದಾಗಿ ಸಚಿವ ತಂಗಡಗಿ ಹೇಳಿದರು. ನಂತರ ಸ್ವಾಮೀಜಿಯವರಿಗೆ ಸಚಿವ ತಂಗಡಗಿಯವರು ಬುಧುವಾರ ಮಧ್ಯರಾತ್ರಿಯಿಂದ ಉಪವಾಸ ಧರಣಿ ಮಾಡಿದ ಸ್ವಾಮೀಜಿಯವರಿಗೆ ಎಳನೀರು ಕುಡಿಸಿ ಹೋರಾಟವನ್ನು ಶುಭಾಂತ್ಯಗೊಳಿಸಿದರು.
ಈ ಬಾರಿ ನಿಗಮಗಳಿಗೆ ಸಾವಿರ ಕೋಟಿ ಅನುದಾನ ನೀಡಲು ಬೇಡಿಕೆ ಮುಖ್ಯಮಂತ್ರಿಗಳಿಗೆ ಸಲ್ಲಿಸಲಾಗಿದೆ ಉತ್ತಮ ಅನುದಾನವನ್ನು ನೀಡಲು ನಿರ್ಧರಿಸಲಾಗಿದೆ. ಈಡಿಗರ ಅಕ್ಕಮ್ಮ ನವರ 154 ವಚನ ಹಾಗೂ ಶರಣ ಹೆಂಡದ ಮಾರಯ್ಯನವರ 12 ವಚನಗಳನ್ನು ಸಂಸ್ಕೃತಿ ಇಲಾಖೆಯಿಂದ ಮುದ್ರಿಸಿ ರಾಜ್ಯದ್ಯಂತ ಬಿಡುಗಡೆ ಮಾಡಲು ತಮ್ಮ ಇಲಾಖೆಗೆ ಕೂಡಲೇ ಸೂಚನೆ ನೀಡುವುದಾಗಿ ಭರವಸೆ ನೀಡಿದರು. ಉಳಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಚರ್ಚಿಸಿ ಅಂತಿಮ ರೂಪ ನೀಡಲಾಗುವುದು . ಈ ಹಿಂದಿನ ಬಿಜೆಪಿ ಸರಕಾರ ಕಾಗದದಲ್ಲಿ ಮಾತ್ರ ನಿಗಮ ಮಾಡಿದ್ದು ತಾನು ಬಂದ ಮೇಲೆ ಐದು ಕೋಟಿ ಹಣ ಕೊಟ್ಟು ದೆಹಲಿಯಲ್ಲಿ ಅದನ್ನು ಕಂಪನಿ ಕಾಯ್ದೆ ಮೂಲಕ ನೋಂದಣಿ ಮಾಡಿಸಿ ನೂತನ ಅಧ್ಯಕ್ಷರ ನೇಮಕ ಮಾಡಿ ಈಗಾಗಲೇ ಅಧಿಕಾರ ಸ್ವೀಕರಿಸಿದ್ದಾರೆ. ಈಡಿಗರ ಋಣ ತನ್ನ ಮೇಲೆ ಕೂಡ ಇದ್ದು ಈಡೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಸಚಿವ ತಂಗಡಗಿ ಹೋರಾಟದ ವೇದಿಕೆಯಲ್ಲಿ ಜನಸ್ತೋಮದ ಕರತಾಡನದ ಮಧ್ಯೆ ಭರವಸೆ ನೀಡಿದರು.
ಆರ್. ಅಶೋಕ್, ಛಲವಾದಿ ನಾರಾಯಣಸ್ವಾಮಿ, ಸುನಿಲ್ ಕುಮಾರ್ ಮುಷ್ಕರ ಸ್ಥಳಕ್ಕೆ ಭೇಟಿ ಬೆಂಬಲ
ಫ್ರೀಡಂ ಪಾರ್ಕ್ ನಲ್ಲಿ ಬೆಳಿಗ್ಗೆ 10.30ಕ್ಕೆ ಡಾ. ಪ್ರಣವಾನಂದ ಶ್ರೀಗಳ ನೇತೃತ್ವದಲ್ಲಿ ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ ಸುಮಾರು 8 ಸಾವಿರಕ್ಕೂ ಮಿಕ್ಕ ಸಮಾಜ ಬಾಂಧವರು ಸಮಾವೇಶಗೊಂಡ ವಿರಾಟ್ ಶಕ್ತಿ ಪ್ರದರ್ಶನವನ್ನು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ನಾರಾಯಣ ಗುರು ಕೋಟಿ ಚೆನ್ನಯ ಎಲ್ಲಮ್ಮ ದೇವಿ ಹೆಂಡದ ಮಾರಯ್ಯ ಮತ್ತು ಈಡಿಗರ ಅಕ್ರಮ ಭಾವಚಿತ್ರಗಳಿಗೆ ಪುಷ್ಪಾರ್ಚನೆ ಮಾಡಿ ಉದ್ಘಾಟಿಸಿದರು. ಮಾಡಿ ಈಡಿಗರ ಕುಲಕಸುಬು ಕಿತ್ತುಕೊಂಡ ಸರಕಾರ ಸಮುದಾಯವನ್ನು ಮಾಡಿದೆ.ಸರಕಾರವು 38ದಿನಗಳ ಸ್ವಾಮೀಜಿ ಹೋರಾಟಕ್ಕೆ ಸ್ಪಂದಿಸದೆ ದ್ರೋಹ ಮಾಡಿದೆ. ಈ ಬಗ್ಗೆ ಮುಂದಿನ ಅಧಿವೇಶನದಲ್ಲಿ ಪ್ರಸ್ತಾಪಿಸುವ ಮತ್ತು ಮುಖ್ಯಮಂತ್ರಿಗಳಿಗೆ ಪತ್ರ ಬರೆಯುವುದಾಗಿ ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ತಿಳಿಸಿದರು.
ರಾಜ್ಯದಲ್ಲಿ ನೀರಾ ನಿಗಮ ಸ್ಥಾಪನೆ ಮಾಡಿ ಈಡಿಗರ ಕುಲಕಸುಬು ಸಂರಕ್ಷಣೆ ಮಾಡುವ ಜವಾಬ್ದಾರಿ ಸರ್ಕಾರದ ಮೇಲೆ ಇದೆ ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ವಿಧಾನಸಭೆಯ ಪ್ರತಿಪಕ್ಷ ನಾಯಕರಾದ ಆರ್. ಅಶೋಕ್ ಮಾತನಾಡಿ 708 ಕಿಲೋಮೀಟರ್ ಪಾದಯಾತ್ರೆ ದಿನಗಳ ಕಾಲ ನಡೆಸುವುದು ಸಾಮಾನ್ಯವಾಗಿ ಮಾತಲ್ಲ ಸರಕಾರ ಸೂಕ್ತವಾಗಿ ಸ್ಪಂದಿಸಬೇಕಾಗಿದ್ದು ಆದರೆ ಈ ಸಮುದಾಯವನ್ನು ಕಾಂಗ್ರೆಸ್ ಕಡೆಗಣಿಸಿದೆ. ಸರಕಾರಗಳು ಬರುತ್ತವೆ ಮತ್ತು ಹೋಗುತ್ತವೆ ಆದರೆ ಸಮುದಾಯ ಪರ್ಮನೆಂಟ್ ಇರುವಂಥದ್ದು. ಒಂದು ಸರ್ಕಾರವನ್ನು ಉಳಿಸುವ ಶಕ್ತಿ ಸಮುದಾಯಕ್ಕಿದೆ. ಈಡಿಗ ಸಮುದಾಯದ ಬೇಡಿಕೆಗಳನ್ನು ಗಂಭೀರವಾಗಿ ಪರಿಗಣಿಸಿ ಈಡೇರಿಸುವಂತೆ ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್ ಅಶೋಕ್ ಸರ್ಕಾರಕ್ಕೆ ಒತ್ತಾಯಿಸಿ ಇಲ್ಲವಾದರೆ ಈ ಸಮುದಾಯ ತಕ್ಕ ಪಾಠ ಕಲಿಸುತ್ತದೆ ಎಂದು ಎಚ್ಚರಿಕೆ ನೀಡಿದರು.
ಸರಕಾರವು ಜಗಳವನ್ನು ಬಿಟ್ಟು ಅಭಿವೃದ್ಧಿಯ ಕಡೆಗೆ ಗಮನ ನೀಡಬೇಕಾಗಿದೆ. ಬಿಜೆಪಿ ಸರಕಾರ ಘೋಷಣೆ ಮಾಡಿದ ನಿಗಮಗಳಿಗೆ ಮೂರು ಬಜೆಟ್ ಮಂಡಿಸಿದರೂ ನಯಾಪೈಸೆ ಬಿಡುಗಡೆ ಮಾಡಿಲ್ಲ. ಸರಕಾರವು ಸ್ವಾಮೀಜಿಯವರು ಮುಂದಿಟ್ಟ ಬೇಡಿಕೆಗಳ ಬಗ್ಗೆ ಸಕಾರಾತ್ಮಕವಾಗಿ ಪರಿಗಣಿಸುವಂತೆ ಆಗ್ರಹಿಸಿದರು.
ವಿಧಾನಪರಿ ಸಭೆಯ ಪ್ರತಿಪಕ್ಷ ಉಪನಾಯಕ ಸುನಿಲ್ ಕುಮಾರ್ ಕಾರ್ಕಳ ಮಾತನಾಡಿ ಸ್ವಾಮೀಜಿಯವರು ಯಾವುದೇ ಮಠ ಅಥವಾ ಪೀಠಕ್ಕಾಗಿ ಸೌಲಭ್ಯಗಳನ್ನು ಕೇಳುತ್ತಾ ಇಲ್ಲ. ಅವರು ಅತಿ ಹಿಂದುಳಿದ ಸಮುದಾಯದ ಈಡಿಗ ಬಿಲ್ಲವ ಸೇರಿದಂತೆ 26 ಪಂಗಡಗಳ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಪ್ರಗತಿಗಾಗಿ ಬಹುಮುಖ್ಯ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಹಳ ಕಠಿಣವಾದ 38 ದಿನಗಳಲ್ಲಿ 708 ಕೀ.ಮೀ ಪಾದಯಾತ್ರೆ ಮಾಡಿ ಸಮಾಜದ ಜಾಗೃತಿ ಮಾಡಿದ್ದಾರೆ.
ಹೋರಾಟಕ್ಕೆ ಪೂರ್ಣ ಬೆಂಬಲವಿದ್ದು ಸರಕಾರ ಕನಿಷ್ಠ 6 ಬೇಡಿಕೆಗಳನ್ನು ಶೀಘ್ರ ಬಗೆಹರಿಸಲಿ ಎಂದರು.
ಈ ವಿರಾಟ್ ಶಕ್ತಿ ಪ್ರದರ್ಶನದ ಸಂದರ್ಭದಲ್ಲಿ ಫ್ರೀಡಂ ಪಾರ್ಕ್ ನಲ್ಲಿ ನೂರಾರು ಪೊಲೀಸ್ ಕಣ್ಗಾವಲು ಏರ್ಪಡಿಸಿ ಭದ್ರತೆ ಕಲ್ಪಿಸಲಾಗಿತ್ತು. ಕಾರ್ಯಕ್ರಮದಲ್ಲಿ ಅತಿ ಹಿಂದುಳಿದ ಸಮುದಾಯದ ಬಸವನಾಗಿ ದೇವ ಶರಣರು ಛಲವಾದಿ ಮಠ, ಶ್ರೀ ಶರಣಬಸವ ವೇದಪ್ರಕಾಶ ಸ್ವಾಮೀಜಿ, ಮಾದರ ಸಮುದಾಯದ ಶಿವ ಮೂರ್ತಿ ಶರಣರು, ವಿಶ್ವಕರ್ಮ ಮಠದ ದೊಡ್ಡೆಂದ್ರ ಸ್ವಾಮೀಜಿ, ತರಿಕೆರೆ ಬಂಜಾರ ಸಮುದಾಯದ ಮಂಜುನಾಥ ಸ್ವಾಮಿ ಒಕ್ಕಲಿಗರ ಮುದ್ದಣ್ಣ ಶರಣರು, ಶ್ರೀ ಪ್ರಕಾಶ್ ಸ್ವಾಮೀಜಿ, ದಾಸೋಹ ಸಂಗಣ್ಣ, ಶಿವಾನಂದ ಸ್ವಾಮೀಜಿ ಭಗೀರಥಾನಂದ ಸ್ವಾಮೀಜಿ, ಬನಹಟ್ಟಿ ಶ್ರೀಗಳು, ಎಚ್. ಆರ್ ಶ್ರೀನಾಥ್, ಮಾಲಿಕಯ್ಯ ಗುತ್ತೇದಾರ್, ತೆಲಂಗಾಣದ ವಿ. ಶ್ರೀನಿವಾಸ ಗೌಡ,ಲಕ್ಷ್ಮಿ ನರಸಯ್ಯ, ಡಾ.ಸದಾನಂದ ಪೆರ್ಲ,ಸತೀಶ್ ವಿ ಗುತ್ತೇದಾರ್, ಬಾಲರಾಜ್ ಗುತ್ತೇದಾರ್,ವೆಂಕಟೇಶ್ ಕಡೇಚೂರ್,ತಿಪ್ಪೇಶ್, ಡಾ.ಮಂಚೇ ಗೌಡ,ಸಂತೋಷ್ ಬಿ. ಎನ್,ವೆಂಕಟೇಶ್ ಗುಂಡಾನೂರು, ಕರದಾಳ ಸುರೇಶ್ ಗುತ್ತೇದಾರ್,ಚಂದ್ರಶೇಖರ್ ಕಾಪು ,ಕುಪೇಂದ್ರ ಗುತ್ತೇದಾರ್ ನಾಗೂರ ,ಮಹಾದೇವ ಗುತ್ತೇದಾರ್, ಡಾಕ್ಟರ್ ರಾಜಶೇಖರ ಸೇಡಂ ಕರ್ ,ಪ್ರವೀಣ್ ಶಿವಯ್ಯ ಗುತ್ತೇದಾರ್ , ರಾಜೇಶ್ ಡಿ ಗುತ್ತೇದಾರ್, ಗುತ್ತೇದಾರ್, ಪ್ರವೀಣ ಜತ್ತನ್, ತಿಮ್ಮಪ್ಪ ಗಂಗಾವತಿ ಶಿವಯ್ಯ ಗುತ್ತೇದಾರ್ ಪೇಠಶಿರೂರು, ಮಹೇಶ್ ಗುತ್ತೇದಾರ್ ಹೊಳಕುಂದ, ಅಂಬಯ್ಯ ಗುತ್ತೇದಾರ್ ಇಬ್ರಾಹಿಂಪುರ್ ಸುರೇಶ್ ಗುತ್ತೇದಾರ್ ಮಟ್ಟೂರು, ಅನಿಲ್ ಯರಗೋಳ, ಶಶಿಧರ ಕೋಟ್ಯಾನ್, ಪೂರ್ಣಿಮ ಹಾವೇರಿ, ವನಿತಾ ಬೂದಿಗುಪ್ಪೆ, ದುರ್ಗಮ್ಮ ಗಂಗಾವತಿ ಅಂಬುಜ ಹೊಸಪೇಟೆ ಶ್ರುತಿ ಪುತ್ತೂರು , ಮಲ್ಲಿಕಾರ್ಜುನ ಕುಕ್ಕುಂದಿ, ಮತ್ತಿತರ ಅನೇಕ ನಾಯಕರು ಭಾಗವಹಿಸಿದ್ದರು
ಆರೋಗ್ಯ ಏರುಪೇರಾದರೂ ಮುಷ್ಕರ ಕೈ ಬಿಡದ ಸ್ವಾಮೀಜಿ
ಡಾ ಪ್ರಣವಾನಂದ ಸ್ವಾಮೀಜಿಯವರು ಬುಧವಾರ ಮಧ್ಯರಾತ್ರಿಯಿಂದ ಉಪವಾಸವಿದ್ದು ವಿರಾಟ್ ಶಕ್ತಿ ಪ್ರದರ್ಶನದಲ್ಲಿ ತೊಡಗಿಸಿಕೊಂಡು ಸಾಯಂಕಾಲದ ವೇಳೆ ರಕ್ತದ ಒತ್ತಡದ ಆರೋಗ್ಯ ಏರುಪೇರಾದರು ಸರಕಾರದಿಂದ ಸ್ಪಷ್ಟ ಭರವಸೆ ಸಿಗದೇ ನಿರೇಶನ ಅಂತ್ಯಗೊಳಿಸುವುದಿಲ್ಲ ಎಂದು ಪಟ್ಟು ಹಿಡಿದರು. ಧರಣಿ ಸ್ಥಳಕ್ಕೆ ವೈದ್ಯರ ತಂಡ ಆಗಮಿಸಿ, ಪರೀಕ್ಷೆ ಮತ್ತು ಪ್ರಾಥಮಿಕ ಚಿಕಿತ್ಸೆಯನ್ನು ನೀಡಿ ಆರೋಗ್ಯ ಏರುಪೇರಾಗದಂತೆ ಎಚ್ಚರಿಕೆ ವಹಿಸಿದರು ನಂತರ ಸಚಿವ ತಂಗಡಗಿಯವರ ಸ್ಪಷ್ಟ ಭರವಸೆ ಪಡೆದು ಸಚಿವರ ಕೈಯಿಂದಲೇ ಎಳನೀರು ಕುಡಿಯುವುದರ ಮೂಲಕ ನಿರಶನ ಅಂತ್ಯಗೊಳಿಸಿದರು
