ನಿಧನ ವಾರ್ತೆ -ಜನಪ್ರಿಯ ವೈದ್ಯರಾಗಿದ್ದ ಶಹಾ ಡಾಕ್ಟರ್ ಇನ್ನು ನೆನಪು ಮಾತ್ರ.

ನಿಧನ ವಾರ್ತೆ -ಜನಪ್ರಿಯ ವೈದ್ಯರಾಗಿದ್ದ ಶಹಾ ಡಾಕ್ಟರ್ ಇನ್ನು ನೆನಪು ಮಾತ್ರ.

ನಿಧನ ವಾರ್ತೆ -ಜನಪ್ರಿಯ ವೈದ್ಯರಾಗಿದ್ದ ಶಹಾ ಡಾಕ್ಟರ್ ಇನ್ನು ನೆನಪು ಮಾತ್ರ.

ಡಾ.ಪವನಕುಮಾರ ಶಹಾ ಅವರ ಪೂರ್ಣ ಹೆಸರು. ಶಾ ಡಾಕ್ಟರ್ ಅಂತಲೇ ಪ್ರಸಿದ್ಧರಾಗಿದ್ದರು.

ಕಳೆದ ಆರು ದಶಕದಲ್ಲಿ ಸೇಡಂ ತಾಲೂಕಿನ ಬಹುತೇಕ ಜನ ತಮ್ಮ ರೋಗರುಜಿನಗಳಿಗೆ ಪರಿಹಾರ ನೀಡಬಲ್ಲ ಏಕೈಕ ವೈದ್ಯರು ಎಂದು ನಂಬಿಕೊಂಡಿದ್ದರು. ತಮ್ಮ ಮುಗುಳ್ನಗೆಯ ಮೃದು ಮಾತುಗಳಲ್ಲಿ ರೋಗಿಗಳ ಆರೋಗ್ಯ ವಿಚಾರಿಸುತ್ತಲೇ ಸೂಕ್ತ ಚಿಕಿತ್ಸೆ ನೀಡುತ್ತಿದ್ದ ಅವರು, ಜನರ ನಂಬಿಕೆಗೆ ಪಾತ್ರರಾಗಿದ್ದರು. ಜೈನ ಧರ್ಮೀಯರಾದ ಡಾ.ಶಹಾ ಅವರು ಅಪಾರ ದೈವ ಭಕ್ತರಾಗಿದ್ದರು.

ಭಗವಂತ ಭವರೋಗ ವೈದ್ಯ. ಭಗವಂತನ ನಾಮ ಸ್ಮರಣೆ, ಆರಾಧನೆ, ಪೂಜಾದಿ ಕ್ರಿಯೆಗಳು ಭವಮುಕ್ತನನ್ನಾಗಿಸಿ, ನಿಜಮುಕ್ತಿ ಪಥದತ್ತ ಕೊಂಡೊಯ್ಯುತ್ತವೆ ಎಂದು ನಂಬಿದ್ದ ಅವರು, ಸೇಡಂ ಮತ್ತು ಮಳಖೇಡ ಗಳಲ್ಲಿ ಇರುವ ಜೈನ ತೀರ್ಥಂಕರರ ಮಂದಿರಗಳ ಜೀರ್ಣೋದ್ಧಾರ ಮಾಡಿಸಿ, ಶ್ರದ್ಧಾ ಕೇಂದ್ರವನ್ನಾಗಿಸಿದ್ದು ಗಮನಾರ್ಹ. 

ತಮ್ಮ 89 ರ ಇಳಿ ವಯಸ್ಸಿನಲ್ಲಿ ಡಾ.ಪವನಕುಮಾರ ಶಹಾ ಅವರು ದಿನಾಂಕ 8-2-2025 ರಂದು ಬೆಳಗ್ಗೆ ಜಿನೈಕ್ಯರಾಗಿದ್ದಾರೆ.

ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ.