ಶಿಕ್ಷಣದ ಜೊತೆ ರಾಷ್ಟ್ರಪ್ರೇಮ ಪಾಠ ಕಲಿಸುವುದು ಮುಖ್ಯವಾಗಿದೆ :ಸೋಮಶೇಖರ ಶಿವಾಚಾರ್ಯರು

|ಶಾಲಾ ವಾರ್ಷಿಕೋತ್ಸವ ಹಾಗೂ ಎಸಎಸಎಲಸಿ ವಿದ್ಯಾರ್ಥಿಗಳ ಬೀಳ್ಕೊಡುಗೆ|
ಶಿಕ್ಷಣದ ಜೊತೆ ರಾಷ್ಟ್ರಪ್ರೇಮ ಪಾಠ ಕಲಿಸುವುದು ಮುಖ್ಯವಾಗಿದೆ :ಸೋಮಶೇಖರ ಶಿವಾಚಾರ್ಯರು
ಶಹಾಬಾದ : - ಕನ್ನಡ ಮಾಧ್ಯಮ ಶಿಕ್ಷಣ ಸಂಸ್ಥೆ ಕಟ್ಟುವುದು ಅಷ್ಟು ಸುಲಭದ ಮಾತಲ್ಲ, ವಿಶೇಷವಾಗಿ ಅದು ಗ್ರಾಮೀಣ ಭಾಗದಲ್ಲಿ ಕಷ್ಟ ಸಾಧ್ಯ ಆದರೆ ತೋನಸನಹಳ್ಳಿ ಗ್ರಾಮದ ಶರಣ ಕೋತಲಪ್ಪ ಮುತ್ಯಾ ಶಾಲೆಯ ಸಾಧನೆ ಅಮೋಘವಾದುದ್ದು ಎಂದು ಕಂಬಳೇಶ್ವರ ಮಠದ ಪೂಜ್ಯರಾದ ಸೋಮಶೇಖರ ಶಿವಾಚಾರ್ಯರು ಹೇಳಿದರು
ಅವರು ತಾಲ್ಲೂಕಿನ ತೋನಸನಹಳ್ಳಿ ಗ್ರಾಮದ ಕೋತಲಪ್ಪ ಮುತ್ಯಾ ನವರ ಶಾಲೆಯ ವಾರ್ಷಿಕೋತ್ಸವ ಹಾಗೂ ಎಸಎಸಎಲಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುವ ಸಮಾರಂಭ ಉದ್ಘಾಟಿಸಿ ಮಾತನಾಡಿದರು
ವಿದ್ಯಾರ್ಥಿಗಳು ಶೈಕ್ಷಣಿಕವಾಗಿ ಮುಂದುವರಿಬೇಕಾದರೆ ಶಿಕ್ಷಕರ ಜೊತೆ ಪಾಲಕರ ಕರ್ತವ್ಯ ಕೂಡ ಆಗಿದೆ ಹಾಗೆ
ಆಧುನಿಕ ಶಿಕ್ಷಣದ ಜೊತೆ ರಾಷ್ಟ್ರಪ್ರೇಮದ ಪಾಠ ಕಲಿಸುವುದು ಮುಖ್ಯವಾಗಿದೆ ಎಂದರು
ವಿಜಾಪೂರಿನ ವಿವೇಕಾನಂದ ಸ್ವಾಮಿಗಳು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಶಿಸ್ತು, ಸಂಯಮ, ವಿನಯ, ಕಲಿಯುವ ಆಸಕ್ತಿ ಇರಬೇಕು, ವಿದ್ಯಾರ್ಥಿಗಳು ಚೆನ್ನಾಗಿ ಓದಿ ಶಿಕ್ಷಕರಾಗಿ, ವೈದ್ಯರಾಗಿ, ವಿಜ್ಞಾನಿಯಾಗಿ, ರೈತರಾಗಿ ಅಥವಾ ಸೈನಿಕರಾಗಿ ಏನಾದರೂ ಆಗಿ ಮೊದಲು ಮಾನವರಾಗಿ, ರಾಜ್ಯದಲ್ಲಿ ಕನ್ನಡ ಕ್ಷೀಣಿಸುತ್ತಿದೆ ಕನ್ನಡವನ್ನ ಉಳಿಸಿ ಬೆಳೆಸುವ ಕೆಲಸ ವಾಗಬೇಕಾಗಿದೆ, ಮಠದ ಸಂಸ್ಕೃತಿ ಜೊತೆ ಆಧುನಿಕ ಶಿಕ್ಷಣ ನೀಡಬೇಕು ಎಂದು ಮಾರ್ಮಿಕವಾಗಿ ನುಡಿದರು.
ಶಿವಸಾಯಿ ಧ್ಯಾನ ಧಾಮ ಮಂದಿರದ ಪೂಜ್ಯರಾದ ಶರಣ ಕೋತಲಪ್ಪು ಮುತ್ಯಾ, ಶಿಕ್ಷಕ ಶಾಂತಮಲ್ಲ ಶಿವಬೋ, ವಿಸ್ಟಾಸ್ ಲರ್ನಿಂಗ್ ಆಪ್ ನ ವಿಜಯಕುಮಾರ ಹಾಗೂ ರಾಜು ಮಾತನಾಡಿದರು.
ಸಂಗಮೇಶ್ವರ ಸಂಸ್ಥಾನ ಮಠದ ಪೂಜ್ಯರಾದ ರೇವಣಸಿದ್ಧ ಚರಂತೇಶ್ವರ ಶಿವಾಚಾರ್ಯರು ಆಶೀರ್ವಚನ ನೀಡಿದರು.
ವೇದಿಕೆ ಮೇಲೆ ಭರತ ಧ್ವಜ ಸ್ವಾಮೀಜೀ, ಬಾಲಯೋಗಿ ಹಡಪದ ಅಪ್ಪಣ್ಣ ಸ್ವಾಮಿಜೀ, ಸಂಘಟನಾಕಾರ ಬಸವರಾಜ ಮದ್ದರಕಿ, ದೇವೇಂದ್ರ ಕಾರೋಳಿ, ಬೆಳ್ಳಪ್ಪ ಕಣದಾಳ ಇದ್ದರು.
ಶಾಲೆಯ ವಿದ್ಯಾರ್ಥಿಗಳಿಂದ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು.
ಶಾಲೆಯ ಮುಖ್ಯ ಗುರುಗಳಾದ ರಾಜಶ್ರೀ ನಾಟೇಕರ್ ಅವರು ವಾರ್ಷಿಕ ವರದಿ ವಾಚನ ಮಾಡಿದರು.
2023-24ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಶಾಲೆಯ ವಿದ್ಯಾರ್ಥಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
ವಿದ್ಯಾರ್ಥಿ ಪ್ರದೀಪ ಪ್ರಾರ್ಥನಾ ಗೀತೆ ಹಾಡಿದರು, ಶಿಕ್ಷಕಿ ಸಿಂಧೂ ಕಾಳಗಿ ನಿರೂಪಿಸಿ, ವಂದಿಸಿದರು.
ಕೋಟ ಮಾಡಿ :.. ಆಧುನಿಕ ಪರಂಪರೆಯಲ್ಲಿ ಗುರುಕುಲದ ವ್ಯವಸ್ಥೆ ಪೂರ್ಣಗೊಳಿಸುವದರ ಜೊತೆಗೆ ಮೇಕಾಲೆ ಶಿಕ್ಷಣ ವ್ಯವಸ್ಥೆ ಚಾಪನ್ನು ಮೂಡಿಸಬೇಕು, ಅದನ್ನು ವಿದ್ಯಾರ್ಥಿಗಳು ಮುನ್ನಡಿಸಿಕೊಂಡು ಹೋಗುವದು ಪ್ರತಿಯೊಬ್ಬರ ಕರ್ತವ್ಯವಾಗಿದೆ :..
ವಿವೇಕಾನಂದ ಸ್ವಾಮಿಜೀಗಳು ವಿಜಯಪುರ.