ನೃತ್ಯ ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆ - ಜ್ಯೋತಿ ಪಾಟೀಲ್
ನೃತ್ಯ ಭಾರತೀಯ ಸಂಸ್ಕೃತಿಯ ಭವ್ಯ ಪರಂಪರೆ - ಜ್ಯೋತಿ ಪಾಟೀಲ್
ಕಲಬುರ್ಗಿ : ನೃತ್ಯವೊಂದು ಅದ್ಭುತ ಕಲೆ,ಇದು ಭಾರತೀಯ ಸಂಸ್ಕೃತಿ ಶ್ರೀಮಂತಿಕೆಯನ್ನು ಪ್ರತಿಬಿಂಬಿಸುವ ಭವ್ಯ ಪರಂಪರೆಯಾಗಿದೆ ಎಂದು ಬಿಜೆಪಿ ಮಹಿಳಾ ಮೋರ್ಚಾ ದಕ್ಷಿಣ ಮಂಡಲ ಅಧ್ಯಕ್ಷರಾದ ಜ್ಯೋತಿ ಪಾಟೀಲ್ ಹೇಳಿದರು.
ನಗರದ ಉದನೂರ ರಸ್ತೆಯಲ್ಲಿರುವ ಹನುಮಂತಪ್ಪ ಸಭಾಭವನದಲ್ಲಿ ಶ್ರೀವಿಜಯ ಸಾಂಸ್ಕೃತಿಕ ಪ್ರತಿಷ್ಠಾನ ಸೇಡಂ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಲಬುರ್ಗಿ ಇವರುಗಳ ಸಹಯೋಗದಲ್ಲಿ ಹಮ್ಮಿಕೊಂಡಿರುವ ಜಿಲ್ಲಾಮಟ್ಟದ ನೃತ್ಯೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.ಸ್ಥಳೀಯ ಪ್ರತಿಭೆಗಳನ್ನು ಪ್ರೋತ್ಸಾಹಿಸಿ,ಕಲಾ ಸಂಸ್ಕೃತಿ ಉಳಿಸುತ್ತಿರುವುದು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯ ನಿಜಕ್ಕೂ ಶ್ಲಾಘನೀವಾದದ್ದು ಎಂದು ಬಣ್ಣಿಸಿದರು.
ಅತಿಥಿಗಳು ಹಾಗೂ ಸಮಾಜ ಸೇವಕರಾದ ಶಿವರಾಜ ತಿವಾರಿ ಮಾತನಾಡಿ ಆಧುನಿಕ ಭರಾಟೆಯಲ್ಲಿ ನಶಿಸಿ ಹೋಗುತ್ತಿರುವ ಭರತನಾಟ್ಯ, ಕೂಚುಪುಡಿ ಮತ್ತು ಶಾಸ್ತ್ರೀಯ ಹಾಗೂ ಜಾನಪದ ನೃತ್ಯಗಳು ಇಂದಿನ ಯುವ ಸಮೂಹಕ್ಕೆ ಪರಿಚಯಿಸುತ್ತಿರುವುದು ತುಂಬಾ ಸಂತೋಷದ ಸಂಗತಿ ಎಂದು ಹೇಳಿದರು.
ಸಂಘ - ಸಂಸ್ಥೆಗಳು ಇಂಥ ನೃತ್ಯೋತ್ಸವಗಳು ಆಯೋಜಿಸುವುದರಿಂದ ಕಲಾ ಸಂಸ್ಕೃತಿ ಉಳಿಸಿ ಬೆಳೆಸಿ ಉತ್ತೇಜಿಸುವುದರ ಜೊತೆಗೆ ಸಾರ್ವಜನಿಕರಲ್ಲಿ ಸಾಂಸ್ಕೃತಿಕ ಅರಿವು ಮೂಡಿಸುತ್ತದೆ ಎಂದು ದಲಿತ ಮುಖಂಡ ಪರಮಣ್ಣ ಬಡಿಗೇರ್ ನುಡಿದರು
ವಿಜಯಲಕ್ಷ್ಮಿ ದುರ್ಗ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು,ಈ ಸಮಾರಂಭದ ವೇದಿಕೆಯ ಮೇಲೆ ಸಮಾಜ ಸೇವಕಿ ಚಂದನಾ ಸಿಂಪಿ,ಶ್ರೀವಿಜಯ ಸಾಂಸ್ಕೃತಿಕ ಪ್ರತಿಷ್ಠಾನದ ಅಧ್ಯಕ್ಷರಾದ ಶರಣಮ್ಮ ರಾಜಮಾನೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು,
ಈ ಜಿಲ್ಲಾಮಟ್ಟದ ನೃತ್ಯೋತ್ಸವ ಕಾರ್ಯಕ್ರಮದಲ್ಲಿ
ಸರ್ವ ಶಿವ ನೃತ್ಯ ಕಲಾ ಸಂಸ್ಥೆ ಕಲಬುರಗಿ ತಂಡ ಸಮೂಹ ನೃತ್ಯ,ಸೌಖ್ಯ ಸಬನವೀಸ ಕಲಬುರಗಿ ತಂಡ ಸಮೂಹ ಭರತ ನಾಟ್ಯ,ಲಕ್ಷ್ಮಿ ಮತ್ತು ತಂಡ ಸಮೂಹ ನೃತ್ಯ,ವಿಜಯಲಕ್ಷ್ಮಿ ಸಮೂಹ ನೃತ್ಯ,ಟೇನೆಟ್ ಡ್ಯಾನ್ಸ್ ಅಕಾಡೆಮಿ ಕಲ್ಬುರ್ಗಿ ತಂಡ ಸಮೂಹ ನೃತ್ಯ ಸೇರಿದಂತೆ ಜಿಲ್ಲೆಯ ಹಲವಾರು ನೃತ್ಯ ತಂಡಗಳು ಭಾಗವಹಿಸಿ ಕಲೆ ಪ್ರದರ್ಶನ ನೀಡಿದವು
ಭಾಗವಹಿಸಿದ ನೃತ್ಯ ಕಲಾವಿದರಿಗೆ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
