ಕಿಣ್ಣಿಸುಲ್ತಾನ ಅರಿವು ಶಿಕ್ಷಣ _ಕೇಂದ್ರದ ಪ್ರಥಮ_ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ

ಕಿಣ್ಣಿಸುಲ್ತಾನ ಅರಿವು ಶಿಕ್ಷಣ _ಕೇಂದ್ರದ ಪ್ರಥಮ_ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ
ಆಳಂದ: ತಾಲೂಕಿನ ಕಿಣ್ಣಿಸುಲ್ತಾನ ಗ್ರಾಮದಲ್ಲಿ ಅರಿವು ಶಿಕ್ಷಣ ಕೇಂದ್ರದ ಮೊದಲನೇ ವರ್ಷದ ವಾರ್ಷಿಕ ಸಮ್ಮೆಳನ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಗಳಾಗಿ ಡಾ.ವಿಷ್ಣುವರ್ಧನ ಮೂಲಿಮನಿ ಸಹಾಯಕ ಪ್ರಾಧ್ಯಾಪಕರು ಸಪ್ರದ ಕಾಲೇಜು ಜೇವರ್ಗಿ, ಎಮ್.ಎನ್ ಬಡಿಗೇರ ಮುಖ್ಯಗುರುಗಳು ಧುತ್ತರಗಾವ. ಕಲ್ಯಾಣಿ ತುಕ್ಕಾಣೆ.ಡಾ .ಅವಿನಾಶ ದೇವನೂರ ಸಂಜೆವಾಣಿ ಪತ್ರಕರ್ತರು ಆಳಂದ . ರಾಜಶೇಖರ ಕಡಗನ ಉಪನ್ಯಾಸಕರು ಆಳಂದ, ಮಹಾದೇವ ಕಾಂಬ್ಳೆ. ಯುವ ಮುಖಂಡರು ಆಳಂದ , ಶ್ರೀಶೈಲ ಪೂಜಾರಿ. ಶ್ರೀಮತಿ ಗೀತಾ ಕಲ್ಯಾಣಿ ಶೃಂಗೇರಿ ಗ್ರಾ.ಪಂ.ಸದಸ್ಯರು ಕಿಣ್ಣಿಸುಲ್ತಾನ . ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆ ಮಲ್ಲಿಕಾರ್ಜುನ ಶೃಂಗೇರಿ ವಹಿಸಿದರು.ಡಾ.ವಿಷ್ಣುವರ್ಧನ ಮೂಲಿಮನಿ ತಮ್ಮ ಬಾಲ್ಯದ ದಿನಗಳ್ನುನೆನಪಿಸಿ. ವಿದ್ಯಾರ್ಥಿಗಳು ಚೆನ್ನಾಗಿ ಓದಿ ಉನ್ನತ ಹುದ್ದೆ ಪಡೆಯಬೇಕು ಎ೦ದು ಹೇಳಿ ಅದಕ್ಕೆ ಪೂರ್ವ ಸಿದ್ದತೆಗೆ ಬೇಕಾಗುವ ವ್ಯವಸ್ಥೆ ನಾನು ಕಲ್ಪಿಸುತ್ತೇನೆ ಎ೦ದು ಹೇಳಿದರು. ಮುಖ್ಯ ಗುರುಗಳಾದ ಮರೆಪ್ಪ ಬಡಿಗೇರ ಮಾತನಾಡಿ ಅರಿವು ಶಿಕ್ಷಣ ಕೇಂದ್ರ ಇನ್ನು ಗಗನೆತ್ತರಕ್ಕೆ ಬೆಳೆಯಲೆಂದು ಹಾರೈಸಿದರು. ರಾಜಶೇಖರ ಕಡಗನ ರವರು ಹಾಡಿನ ಮೂಲಕ ಸಭಿಕರನ್ನು ರಂಜಿಸಿದರು.
ವಿದ್ಯಾರ್ಥಿಗಳು ಕನ್ನಡ. ಇಂಗ್ಲೀಷ ಭಾಷಣ ಮಾಡಿದರು ನಂತರ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಹಣಮಂತ ಚಿಂಚೋಳಿ ದಂಪತಿಗಳಿಗೆ ಸನ್ಮಾನಿಸಲಾಯಿತು. ಕಾರ್ಯಕ್ರಮದಲ್ಲಿ ಬಸವರಾಜ ಶೃಂಗೇರಿ ಧರ್ಮರಾಜ ಶೃಂಗೇರಿ. ವಿಕ್ರಾಂತ.ಅಶೋಕ ಶೃಂಗೇರಿ. ಲಕ್ಷ್ಮೀಕಾಂತ ಭಜನ. ಡಾ.ಬಾಬುರಾವ ಶೃಂಗೇರಿ. ನಾಗೇಶ ಶೃಂಗೇರಿ ಪಲ್ಲವಿ ಚಿಂಚೋಳಿ ಪ್ರತಿಭಾ ಶೃಂಗೇರಿ. ರವಿಕಾಂತ ಭಜನ ವಿಕಾಸ ಚಿಂಚೋಳಿ ಊರಿನ ಹಿರಿಯರು ಉಪಸ್ಥಿತರಿಸಿದ್ದರು. ಹಣಮಂತ ಚಿಂಚೋಳಿ ನಿರೂಪಿಸಿದರು. ಬಸವರಾಜ ಶೃಂಗೇರಿ ಸ್ವಾಗತಿಸಿದರು ಮಲ್ಲಿಕಾರ್ಜುನ ಶೃಂಗೇರಿ ವಂದಿಸಿದರು.