ಜಯಂತ್ಯೋತ್ಸವ ಸಮಿತಿಗೆ ಶಂಕರ ಅಳೋಳ್ಳಿ ಅಧ್ಯಕ್ಷರಾಗಿ ಆಯ್ಕೆ :..

ಜಯಂತ್ಯೋತ್ಸವ ಸಮಿತಿಗೆ ಶಂಕರ ಅಳೋಳ್ಳಿ ಅಧ್ಯಕ್ಷರಾಗಿ ಆಯ್ಕೆ :..

ಜಯಂತ್ಯೋತ್ಸವ ಸಮಿತಿಗೆ ಶಂಕರ ಅಳೋಳ್ಳಿ ಅಧ್ಯಕ್ಷರಾಗಿ ಆಯ್ಕೆ :.. 

ಶಹಾಬಾದ : - ತಾಲ್ಲೂಕ ಜಯಂತ್ಯೋತ್ಸವ ಸಮಿತಿಯ ವತಿಯಿಂದ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 134 ನೇ ಜಯಂತ್ಯೋತ್ಸವ ಸಮಿತಿಯ ಸಭೆಯನ್ನು ಸರ್ಕಾರಿ ಪ್ರೌಢಶಾಲಾ ಆವರಣದಲ್ಲಿ ಕರೆಯಲಾಗಿತ್ತು. 

ಸಭೆಯ ಅಧ್ಯಕ್ಷತೆಯನ್ನು ಹಿಂದಿನ 2023-24 ಸಾಲಿನ 133ನೇ ಜಯಂತ್ಯೋತ್ಸವ ಸಮಿತಿಯ ಅಧ್ಯಕ್ಷ ಮಲ್ಲಿಕಾರ್ಜುನ ಕಟ್ಟಿಮನಿ ಯವರು ವಹಿಸಿಕೊಂಡಿದ್ದರು. 

ಸಭೆಯಲ್ಲಿ ಶಹಾಬಾದ ತಾಲ್ಲೂಕಿನ ವಿವಿಧ ಗ್ರಾಮಗಳ ಮತ್ತು ಸಮಾಜದ ಬಂದುಗಳು ನೂರಾರು ಸಂಖ್ಯೆಯಲ್ಲಿ ಸೇರಿದ್ದರು. 

ಹಿರಿಯರ ಮತ್ತು ಯುವಕರ ಹಾಗೆ ಎಲ್ಲರ ಅಭಿಪ್ರಾಯದ ಮೇರೆಗೆ ಸರ್ವಾನುಮತದಿಂದ ಅಧ್ಯಕ್ಷರಾಗಿ ಶಂಕರ ಅಳೋಳ್ಳಿ ಮತ್ತು ಗೌರವಾಧ್ಯಕ್ಷರಾಗಿ ಹಿರಿಯ ಮುಖಂಡ ಸುರೇಶ ಮೆಂಗನ ಅವರನ್ನು ಆಯ್ಕೆ ಮಾಡಿ 134ನೇ ಜಯಂತ್ಯೋತ್ಸವ ಸಮಿತಿಗೆ ನೇಮಕ ಮಾಡಲಾಯಿತು. 

ಈ ಸಭೆಯಲ್ಲಿ ನಗರ ಸಭೆ ಮಾಜಿ ಅಧ್ಯಕ್ಷ ನಾಗರಾಜ ಸಿಂಗೆ, ಹೋರಾಟಗಾರ ಕೃಷ್ಣಪ್ಪ ಕರಣಿಕ, ಸಮಾಜ ಸೇವಕ ವಿಜಯಕುಮಾರ ಹಳ್ಳಿ, ಮಹಾದೇವ ತರನಳ್ಳಿ, ರಾಜೇಶ ಯನಗುಂಟಿ, ಭರತ ಧನ್ನಾ, ಭೀಮಾಶಂಕರ ಕಾಂಬಳೆ, ಬಸವರಾಜ ಮಯೂರ, ಪಿಎಸ ಮೇತ್ರಿ, ಶಿವಶಾಲ ಪಟ್ಟಣಕರ, ಮಲ್ಲಣ್ಣ ಮಸ್ಕಿ, ಸುಭಾಷ ಸಾಕ್ರೆ, ನರಸಿಂಹಲು ರಾಯಚೂರ, ಸತೀಶ ಕೋಬಾಳ, ವಸಂತ ಕಾಂಬಳೆ, ಸಂದೀಪ ಕಟ್ಟಿ, ಮೋಹನ ಹಳ್ಳಿ, ಸ್ನೇಹಿಲ ಜಾಯಿ, ಜೈ ಭೀಮ್, ಮಚ್ಚಿಂದರ ಜೋಗಿ, ಮನೋಹರ ಕೊಳೂರ, ಪುನೀತ ಹಳ್ಳಿ, ಸುನಿಲ ಮೆಂಗನ, ರಾಕೇಶ ಜಾಯಿ ಮಲ್ಲಿಕಾರ್ಜುನ ದೊಡ್ಡಿ ಸೇರಿದಂತೆ ಹೊನಗುಂಟಿ, ತೋನಸನಹಳ್ಳಿ, ಮರತೂರ, ಭಂಕೂರ, ಗೋಳಾ, ಮಾಲಗತ್ತಿ ಗ್ರಾಮಗಳ ಜೊತೆ ತಾಲ್ಲೂಕಿನ ನೂರಾರು ಡಾ. ಅಂಬೇಡ್ಕರ್ ಅಭಿಮಾನಿಗಳು ಉಪಸ್ಥಿತರಿದ್ದರು.

ಶಹಾಬಾದ್ ವರದಿ :- ನಾಗರಾಜ್ ದಂಡಾವತಿ