ಕರುಣೆ ಇರಲಿ

ಕವನದ ಪ್ರಕಾರ ತನಗ
ಕರುಣೆ ಇರಲಿ
ವಿಶ್ವಾಸ ತುಂಬಿರಲಿ
ನೋವಿನ ಸಂಗತಿಗೆ
ತಟ್ಟನೆ ನಾ ಖುಷಿಗೆ
ಬೇಡುವೆ ದಿನವು ನಾ
ಸುಂದರ ಬೆಟ್ಟದಿಂದ
ಸಹ್ಯಾದ್ರಿ ಪರ್ವತವು
ಸಹ ಆಕರ್ಷಕವು
ಸೃಷ್ಟಿಕರ್ತನ ಗರಿಮೆ
ತನುವಿನ ಮನವಿ
ತ್ವರಿತ ಹಂಬಲದ
ಮನವು ಆ ಪುಷ್ಪದ
ಪುಷ್ಪಾರ್ಚನೆ ಸಲ್ಲಿಸಿ
ಡಿಂಡಿಮ ಬಾರಿಸುವು
ದಿನವು ಕನ್ನಡಕ್ಕೆ
ನೀ ಮರುಗುವುದೇಕ್ಕೆ
ಅಕ್ಷರದ ತೋರಣ
ಮಹಾಂತೇಶ ಖೈನೂರ