ಎಸ್ಸಿ ಎಸ್ಟಿ ಹಣ ದುರುಪಯೋಗಕ್ಕೆ ಖಂಡನೆ

ಎಸ್ಸಿ ಎಸ್ಟಿ ಹಣ ದುರುಪಯೋಗಕ್ಕೆ ಖಂಡನೆ

ಎಸ್ಸಿ ಎಸ್ಟಿ ಹಣ ದುರುಪಯೋಗಕ್ಕೆ ಖಂಡನೆ

ಕಲಬುರಗಿ: ಪರಿಶಿಷ್ಟ ಜಾತಿ ಹಾಗೂ ಪರಿಶಿಷ್ಟ ಪಂಗಡದ ಅಭಿವೃದ್ಧಿಗೆ ಮೀಸಲಿದ್ದ ಎಸ್‌ಸಿಪಿ, ಟಿಎಸ್ಪಿ ಅನುದಾನವನ್ನು ಕಾಂಗ್ರೆಸ್‌ ಸರ್ಕಾರ ದುರುಪಯೋಗ ಪಡಿಸಿಕೊಳ್ಳುತ್ತಿದೆ ಎಂದು ಮಹಾಗಾಂವ ಬಿಜೆಪಿ ಮುಖಂಡ ಮಲ್ಲಿಕಾರ್ಜುನ ಮರತೂರಕರ್ ಅವರು ತೀವ್ರವಾಗಿ ಖಂಡಿಸಿದ್ದಾರೆ.

   ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು,ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ದಲಿತರಿಗೆ ಕನ್ನ ಹಾಕುತ್ತಿದೆ. ಸಿಎಂ ಸಿದ್ದರಾಮಯ್ಯ ಜನರಿಗಾಗಿ ಗ್ಯಾರಂಟಿ ಯೋಜನೆಗಳು ನೀಡಿರುವುದು ತಪ್ಪಿಲ್ಲ. ಆರಂಭದಲ್ಲೇ ಎಲ್ಲರಿಗೂ ಉಚಿತ ನೀಡುವುದಾಗಿ ಭರವಸೆ ನೀಡಿ ಈಗ ದಲಿತರ ಅನುದಾನದಿಂದ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಮಾಡಲಾಗುತ್ತಿದೆ. ಕಾಂಗ್ರೆಸ್‌ ದಲಿತರನ್ನು ತುಳಿದು ಆಡಳಿತ ನಡೆಸುತ್ತಿದೆ. ಎಸ್‌ಸಿಪಿ ಹಾಗೂ ಟಿಎಸ್ಪಿ ಕೇವಲ ದಲಿತರ ಏಳಿಗೆಗಾಗಿ ಬಳಕೆಯಾಗಬೇಕು ಎಂಬುದು ಬಿಜೆಪಿಯ ಉದ್ದೇಶ. ಈಗಾಗಲೇ ಎರಡು ವರ್ಷದಲ್ಲಿ 22 ಸಾವಿರ ಕೋಟಿ ರೂ. ಅನುದಾನ ಗ್ಯಾರಂಟಿಗಾಗಿ ಬಳಕೆಯಾಗಿದೆ. ಅಲ್ಲದೆ, ಮುಂಬರುವ ಮಂಡಿಸಲಿರುವ ಬಜೆಟ್ ನಲ್ಲಿ 15 ಸಾವಿರ ಕೋಟಿ ರೂ. ಬಳಸಲು ಉದ್ದೇಶಿಸಿದ್ದಾರೆ ಎಂದು ಅವರು ಕಿಡಿಕಾರಿದರು.

                       7ಸಿ ಕಾಯ್ದೆಯಡಿ ಆಯಾ ಜನಾಂಗದವರಿಗೆ ಮೀಸಲಾದ ಹಣ ಅದೇ ಜನಾಂಗದ ಅಭಿವೃದ್ಧಿಗೆ ಬಳಸಿಕೊಳ್ಳಬೇಕು. ಅದು ಬಿಟ್ಟು ಅನುದಾನ ಬೇರೆ ಕಡೆ ಬಳಕೆ ಮಾಡಲಾಗುತ್ತಿದೆ ಎಂದರು.ಆದ್ದರಿಂದ 7ಸಿ ಕಾಯ್ದೆಯನ್ನು ರದ್ದಗೊಳಿಸಬೇಕು ಎಂದು ಅವರು ಆಗ್ರಹಿಸಿದರು. ಪಂಚ ಗ್ಯಾರಂಟಿಗಳನ್ನು ಘೋಷಣೆ ಮಾಡಿದಾಗ ಅದಕ್ಕೆ ಎಸ್‌ಸಿ ಹಾಗೂ ಎಸ್ಟಿ ಹಣ ಬಳಕೆ ಮಾಡುವುದಾಗಿ ಹೇಳಿಲ್ಲ. ಈಗ ಅದಕ್ಕೆ ಬಳಕೆ ಮಾಡಿಕೊಳ್ಳಲು ಮುಂದಾಗುತ್ತಿರುವುದು ಸರಿಯಲ್ಲ. ಯಾವುದೇ ಕಾರಣಕ್ಕೂ ಎಸ್‌ಸಿಪಿ ಮತ್ತು ಟಿಎಸ್ಪಿ ಅನುದಾನ ಬೇರೆ ಕಾರ್ಯಕ್ರಮಗಳಿಗೆ ವರ್ಗಾವಣೆ ಆಗಬಾರದು ಎಂದು ಅವರು ಒತ್ತಾಯಿಸಿದರು.