ಹಲಗೆ ಹೊಡೆಯುವವರ ಸಂಕಟ: ತಮಟೆ ಫಿಲಂ ನೋಡಲು ಕೋರಿಕೆ
ಹಲಗೆ ಹೊಡೆಯುವವರ ಸಂಕಟ: ತಮಟೆ ಫಿಲಂ ನೋಡಲು ಕೋರಿಕೆ
ಸೇಡಂ.ಡಿ.೨- ಜಾತಿ ವ್ಯವಸ್ಥೆಯ ಕ್ರೂರತ್ವಕ್ಕೆ ಕನ್ನಡಿಯಂತಿರುವ `ತಮಟೆ’ ಸಿನಿಮಾವನ್ನು ಸಮಸ್ತ ಸಮುದಾಯದ ಜನ ವೀಕ್ಷಿಸುವಂತೆ ಮಾದಿಗ ಸಮಾಜದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಆಡಕಿ ಮನವಿ ಮಾಡಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, ಹಲಗೆ ಹೊಡೆಯುವ ಸಮು ದಾಯದ ಸಂಕಟಗಳನ್ನು ತುಂಬಾ ವಾಸ್ತವವಾಗಿ ಚಿತ್ರೀಕರಿಸಿದ್ದಾರೆ. ಜಾತಿ ವ್ಯವಸ್ಥೆಯಲ್ಲಿ ಒದ್ದಾಡುತ್ತಿರುವ ತಳವರ್ಗದ ಜನರ ಶೋಷಣೆಯನ್ನು ಹೃದಯಂಗಮವಾಗಿ ತೋರಿಸಿದ್ದಾರೆ.
ಕರ್ನಾಟಕದ ಎಲ್ಲ ಜಿಲ್ಲೆಗ¼ Àಲ್ಲಿಯೂ ತಮಟೆ ಸಿನಿಮಾ ಬಿಡುಗಡೆಯಾಗಿದ್ದು, ನಟ, ನಿರ್ಮಾಪಕ ಹಾಗೂ ತಮಟೆ ಸಿನಿಮಾ ನಾಯಕ ನಟರಾಗಿ ಅಭಿನಯಿಸಿರುವ ಮದನ್ ಪಟೇಲ್ ಅವರು ಹಲಗೆ ಹೊಡೆಯುವ ಪಾತ್ರದಲ್ಲಿದ್ದು, ಕೆಟ್ಟ ವ್ಯವಸ್ಥೆಯನ್ನು ಹೇಗೆ ದುರಸ್ತಿ ಮಾಡಬೇಕೆನ್ನುವ ಇರಾದೆಯನ್ನು ಸಿನಿಮಾದಲ್ಲಿ ತೋರಿಸಿದ್ದಾರೆ. ಹಾಗೂ ಜಾತಿ ವ್ಯವಸ್ಥೆಗೆ ಕಟ್ಟುಬಿದ್ದು ಮೇಲ್ವರ್ಗದವರ ಅಟ್ಟಹಾಸಕ್ಕೆ ಇದು ಕನ್ನಡಿಯಾಗಿದೆ ಎಂದು ಹೇಳಿದ್ದಾರೆ.
ಮೇಲ್ವರ್ಗದ ರಾಜೇಗೌಡನ ಮಗಳು ಹಾಗೂ ಹಲಗೆ ಹೊಡೆಯುವವನ ಮಗನ ನಡುವಿನ ಪ್ರೀತಿಸಿ ಮದುವೆ ಯಾಗಿದ್ದನ್ನು ಸಹಿಸಲು ಆಗದೇ ಕೊಲೆ ಮಾಡುವಂಥ ಕೀಳು ಮಟ್ಟದ ವ್ಯವಸ್ಥೆ ಮತ್ತು ಮರ್ಯಾದಾ ಕೊಲೆಯಂಥ ಘಟನೆಗಳು ಇನ್ನು ನಡೆದಿವೆ ಎಂದು ತೋರಿಸಿಕೊಟ್ಟಿದ್ದಾರೆ. ಕಲಬುರಗಿಯ ತ್ರಿವೇಣಿ ಟಾಕೀಸ್ ನಲ್ಲಿ ತಮಟೆ ಸಿನಿಮಾ ಪ್ರದರ್ಶನಗೊಳ್ಳುತ್ತಿದ್ದು, ಅದನ್ನು ನೋಡಬೇಕೆಂದು ಮಾದಿಗ ಸಮಾಜದ ವಿಭಾಗೀಯ ಸಂಘಟನಾ ಕಾರ್ಯದರ್ಶಿ ವಿಜಯಕುಮಾರ ಆಡಕಿ ಕೋರಿದ್ದಾರೆ.