ಅತೀವೃಷ್ಠಿ
ಅತಿವೃಷ್ಟಿ
ಗಗನದ ತುಂಬಾ ಮುಸ್ಕಿತು ಮೋಡ
ಸುತ್ತಲು ಕತ್ತಲು ಹರಡಿತು ನೋಡ
ಬಡಿಯದೆ ರೆಪ್ಪೆ ಸರಿದೋ ಸುರಿದು
ಎದೆ ಒಳಗೆಲ್ಲ ನೀರೆ ಹರಿದು
ಮೋಡವ ಸುರಿಯಿತು ಭೂಮಿಗೆ ಮಳೆಯ ತುಂಬಿಸಿ ತುಳುಕಿಸಿ ಹರಿಸಿತು ಹೊಳೆಯ ಹಾದಿಗೆ ಬೀದಿಗೆ ಎಲ್ಲಿಯೂ ನೀರು ಯಾರಿಗೂ ದಕ್ಕದೆ ಹೋಯಿತು ಸೂರು
ತುಂಬಿತು ತುಳುಕಿತು ಹೊಳೆ ಸೊಕ್ಕಿ
ಕೆರೆ ಹಳ್ಳ ತುಂಬಿತು ಪ್ರವಾಹ ಉಕ್ಕಿ
ಹರಿದು ಹೋಯಿತು ಮನೆಮಠ ಎಲ್ಲಾ
ಕಳೆಯೋ ಬೆಳೆಯೋ ಸಮಾಧಿಯೇ ಎಲ್ಲ
ನಿನ್ನಯ ಕೋಪಕ್ಕೆ ಗಾಬರಿ ಯಾಗಿ
ಸೃಷ್ಟಿಯೇ ಇಲ್ಲಿ ಸಮಾಧಿಯಾಗಿ
ಹೆಚ್ಚಿನ ಮಳೆಯೂ ಬೇಡವೇ ನಮಗೆ
ಉಳಿಯದು ಇನ್ನೂ ಏನು ಕೊನೆಗೆ
ಸಂಗಮೇಶ್ವರ ಎಸ್ ಮುರ್ಕೆ
ತಾಲೂಕು ಕಮಲನಗರ್ ,ಬೀದರ
8495861795