ಶರಣಗೌಡ ಪಾಟೀಲ ಜೈನಾಪುರರ ಗಜಲ್ ಗಳು ಎರಡು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ ಆಯ್ಕೆ

ಶರಣಗೌಡ ಪಾಟೀಲ ಜೈನಾಪುರರ ಗಜಲ್ ಗಳು ಎರಡು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ ಆಯ್ಕೆ

ಶರಣಗೌಡ ಪಾಟೀಲ ಜೈನಾಪುರರ ಗಜಲ್ ಗಳು ಎರಡು ವಿಶ್ವವಿದ್ಯಾಲಯಗಳಿಗೆ ಪಠ್ಯವಾಗಿ ಆಯ್ಕೆ

            ಸುರಪುರ ತಾಲೂಕಿನ ರಂಗಂಪೇಟೆಯ ಡಾ. ಅಂಬೇಡ್ಕರ್ ಅನುದಾನಿತ ಪ.ಪೂ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಶ್ರೀ ಶರಣಗೌಡ ಪಾಟೀಲ ಜೈನಾಪುರರ ಎರಡು ಗಜಲ್ ಗಳು ನೆರೆ ರಾಜ್ಯ ಮಹಾರಾಷ್ಟ್ರದ ಎರಡು ವಿಶ್ವವಿದ್ಯಾಲಯಗಳ ಪಠ್ಯಕ್ಕೆ ಆಯ್ಕೆಯಾಗಿವೆ.ಕೊಲ್ಲಾಪುರದ ಶಿವಾಜಿ ವಿಶ್ವವಿದ್ಯಾಲಯದ ಬಿ .ಎ ಎರಡನೇ ವರ್ಷ ಹಾಗೂ ಪುಣ್ಯ ಶ್ಲೋಕ ಅಹಿಲ್ಲಾದೇವಿ ಸೊಲ್ಲಾಪುರ ವಿಶ್ವವಿದ್ಯಾಲಯದ ಬಿ.ಕಾಂ ಮೂರನೇ ವರ್ಷ ಹಾಗೂ ಬ್ಯಾಚುಲರ್ ಆಫ್ ವಿಸ್ಸೂಯಲ್ ಆರ್ಟ್ಸ್( ಬಿ.ವಿ.ಎ.) ನ ಮೂರನೆ ಸೆಮಿಸ್ಟ್ರಿಗೆ 2025 26 ನೇ ಸಾಲಿನಿಂದ ಪಠ್ಯವಾಗಿ ಆಯ್ಕೆಯಾಗಿವೆ ಎಂದು ಗಜಲ ಧಾರೆ, ಪಠ್ಯಪುಸ್ತಕದ ಸಂಪಾದಕರಾದ ಡಾ. ಸಿದ್ದರಾಮ ಹೊನಕಲ್ ಹಾಗೂ ಶಿವಾಜಿ ವಿ .ವಿ.ಯ ಕನ್ನಡ ಅಭ್ಯಾಸ ಮಂಡಳಿ ಅಧ್ಯಕ್ಷ ಡಾ, ಗುರುಸಿದ್ದಯ್ಯ ಸ್ವಾಮಿ ತಿಳಿಸಿದ್ದಾರೆ ಗಜಲ್ ಧಾರೆ ಪಠ್ಯಪುಸ್ತಕದಲ್ಲಿ ಒಟ್ಟು 50 ಗಜಲ್ಕಾರರ ನೂರು ಗಜಲ್ ಗಳು ಪಠ್ಯದಲ್ಲಿ ಇವೆ. 

ಶ್ರೀ ಶರಣಗೌಡ ಪಾಟೀಲ ಜೈನಾಪುರವರು ಈಗಾಗಲೇ ಹತ್ತಾರು ಕೃತಿಗಳನ್ನು ಪ್ರಕಟಿಸಿ ವಿವಿಧ ಸಂಘ ಸಂಸ್ಥೆಗಳಲ್ಲಿ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸುವ ಮೂಲಕ ಸಗರನಾಡಿನ ಬಹುತೇಕ ಸಾಹಿತ್ಯ ಸಕ್ತರಿಗೆಲ್ಲ ಚಿರಪರಿಚಿತರಾಗಿದ್ದಾರೆ .ಸಾಹಿತಿಕ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಂಡು ಪ್ರತಿಷ್ಠಿತ ಸಂಘ ಸಂಸ್ಥೆಗಳಿಂದ ಮತ್ತು ಇಲಾಖೆಯಿಂದ ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿರುತ್ತಾರೆ. ಸದಾ ಸಾಹಿತಿಗಳ ಬರಹಗಾರರ ಚಿಂತಕರ ಒಡನಾಟದಲ್ಲಿದ್ದುಕೊಂಡೆ ಕ್ರಿಯಾಶೀಲ ವ್ಯಕ್ತಿಯಾಗಿ ಗುರುತಿಸಿಕೊಂಡಿರುವ ಶರಣಗೌಡರ ಸಾಹಿತ್ಯ ಕೃಷಿ ನಿರಂತರ ನಡೆಯಲಿ ಅವರಿಗೆ ಇನ್ನೂ ಉತ್ತಮ ಅವಕಾಶಗಳು ಲಭಿಸಲಿ ಎಂದು ಅವರ ಸಾಹಿತ್ಯದ ಅಭಿಮಾನಿಗಳು ಸ್ನೇಹಿತರು ಶುಭ ಹಾರೈಸಿದ್ದಾರೆ.