ನಾಡಿಗೆ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ್

ನಾಡಿಗೆ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ್

ನಾಡಿಗೆ ಪೂಜ್ಯ ಮಾತೋಶ್ರೀ ಡಾ ದಾಕ್ಷಾಯಣಿ ಎಸ್ ಅಪ್ಪಾ ಅವರ ಕೊಡುಗೆ ಅಪಾರ: ಡಾ.ಗವಿಸಿದ್ಧಪ್ಪ ಪಾಟೀಲ್ 

 ಕಲಬುರಗಿ: ಪೂಜ್ಯ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪಾ ಅವರು ಕಲ್ಯಾಣ ಕರ್ನಾಟಕದಲ್ಲಿ ಶೈಕ್ಷಣಿಕ ಕ್ರಾಂತಿ ಮಾಡುವ ಮೂಲಕ ಕ ಭಾಗಕ್ಕೆ ಅಪಾರವಾದ ಕೊಡುಗೆ ಅನುಪಮವಾಗಿದೆ. ಈಗಾಗಲೇ ಶರಣ ಸಂಸ್ಥಾನದ ಪೀಠಾಧಿಪತಿಗಳಾದ ಪೂಜ್ಯ ದೊಡ್ಡಪ್ಪ ಅಪ್ಪ, ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಅವರು ನೀಡಿರುವ ಸೇವೆಯನ್ನು ಮುಂದುವರಿಸಿ ಅಕ್ಷರ-ಅನ್ನ- ಧಾರ್ಮಿಕ ಕ್ಷೇತ್ರದ ಜೊತೆಗೆ ನಾಡು,ನುಡಿ,ನೆಲ, ಜಲ, ಭಾಷೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆಗೆ ಅನನ್ಯ ಕೊಡುಗೆ ನೀಡಿದ್ದಾರೆ ಎಂದು ಸಿರಿಗನ್ನಡ ವೇದಿಕೆ ಜಿಲ್ಲಾಧ್ಯಕ್ಷ ಡಾ.ಗವಿಸಿದ್ಧಪ್ಪ ಎಚ್. ಪಾಟೀಲ ಬಣ್ಣಿಸಿದರು.

ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಚೇರಪರ್ಸನ್ ಮಾತೋಶ್ರೀ ಡಾ.ದಾಕ್ಷಾಯಣಿ ಎಸ್ ಅಪ್ಪಾ ಅವರು ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪಡೆದ ಹಿನ್ನೆಲೆಯಲ್ಲಿ ಸಿರಿಗನ್ನಡ ವೇದಿಕೆಯಿಂದ ಅಭಿನಂದಿಸಿ, ಮಾತನಾಡಿದರು.

ಶರಣ ಸಂಸ್ಥಾನದ ಡಾ.ಅಲ್ಲಮಪ್ರಭು ದೇಶಮುಖ ಸಿರಿಗನ್ನಡ ವೇದಿಕೆ ಗೌರವಾಧ್ಯಕ್ಷ ಡಾ.ಕೆ.ಎಸ್.ಬಂಧು, ಉಪನ್ಯಾಸಕ ಡಾ.ರಾಜಕುಮಾರ ಮಾಳಗೆ, ಶಿಕ್ಷಕರ ಸಂಘದ ತಾಲೂಕಾಧ್ಯಕ್ಷ ಡಾ.ಚಿದಾನಂದ ಕುಡ್ಡನ್, ಸಂಘಟನಾ ಕಾರ್ಯ ದರ್ಶಿ ಡಾ.ರಾಜಕುಮಾರ ಧುಮ್ಮನಸೂರ, ಆಳಂದ ತಾಲೂಕಾಧ್ಯಕ್ಷ ಡಾ.ಅವಿನಾಶ ದೇವನೂರ ಸೇರಿದಂತೆ ಅನೇಕರು ಇದ್ದರು.