ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಕನ್ನಡ ಭಾಷೆ ಉಳಿಯಲು ಸಾಧ್ಯ : ಡಾ. ಶಿವರಾಜ ಶಾಸ್ತ್ರಿ
ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಿದರೆ ಕನ್ನಡ ಭಾಷೆ ಉಳಿಯಲು ಸಾಧ್ಯ : ಡಾ. ಶಿವರಾಜ ಶಾಸ್ತ್ರಿ
ಕನ್ನಡ ನಾಡಿನಲ್ಲಿ ಕನ್ನಡ ಪ್ರಥಮ ಭಾಷೆಯಾಗಬೇಕು ಪ್ರತಿಯೊಬ್ಬರೂ ಕನ್ನಡ ಭಾಷೆಯಲ್ಲಿ ಮಾತನಾಡಬೇಕು ಎಲ್ಲಾ ಕಾಲಘಟ್ಟಗಳಲ್ಲಿ ಕನ್ನಡ ಮಾಧ್ಯಮ ಕೈಗೆಟುಕಬೇಕು, ಕನ್ನಡ ಭಾಷೆ ನಮ್ಮೆಲ್ಲರ ಅಭಿಮಾನದ ಭಾಷೆಯಾಗಬೇಕು ಅಂದಾಗ ಮಾತ್ರ ಕನ್ನಡ ಭಾಷೆ ಉಳಿಯಲು ಸಾಧ್ಯವಾಗುತ್ತದೆ ಎಂದು ಕಮಲಾಪುರ ಪ್ರಥಮ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಡಾ. ಶಿವರಾಜ ಶಾಸ್ತ್ರಿ ಹೇರೂರು , ಹೇಳಿದರು
ರವಿವಾರ ಕಮಲಾಪುರ ತಾಲೂಕಿನ ಸೊಂತ ಗ್ರಾಮದ ಶ್ರೀ ದತ್ತ ದಿಗಂಬರ ಶ್ರೀ ಮಾಣಿಕೇಶ್ವರ ದೇವಸ್ಥಾನದಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲೂಕು ಘಟಕ ವತಿಯಿಂದ ಹಮ್ಮಿಕೊಂಡ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸರ್ವಾಧ್ಯಕ್ಷರಾಗಿ ಮಾತನಾಡಿದ ಅವರು ಕಮಲಾಪುರ ತಾಲೂಕುವನ್ನು ಬುದ್ದಿವಂತರ ನಾಡೆಂದು ಕರೆಯುತ್ತಾರೆ ಏಕೆಂದರೆ ಇಡೀ ರಾಜ್ಯದಲ್ಲಿ ಅತಿ ಶಿಕ್ಷಕರನ್ನು ಹೊಂದಿರುವ ಪಟ್ಟಣ ಎಂದರೆ ಅದು ಕಮಲಾಪುರ, ಕಮಲಾಪುರದ ಕೆಂಪು ಬಾಳೆ , ಮಹಾಗಾಂದ ಪಂಚಾಂಗ ಈ ನೆಲವನ್ನು ಪ್ರಸಿದ್ಧಿಗೊಳಿಸಿವೆ, ದಿವ್ಯಾಂಗ ಚೇತನರ ಚೇತನನಾದ ನನ್ನನ್ನು ತಾಲೂಕು ಸಮ್ಮೇಳನದ ಸರ್ವಧ್ಯಕ್ಷನಾಗಿ ಆಯ್ಕೆ ಮಾಡಿದ ಕಮಲಾಪುರ ತಾಲೂಕು ಘಟಕಕ್ಕೆ ನಾನು ಚಿರಋಣಿ ಇಂದಿನ ಸಾಮಾಜಿಕ ವ್ಯವಸ್ಥೆಯಲ್ಲಿ ದಿನದಿಂದ ದಿನಕ್ಕೆ ಮನವಿ ಮೌಲ್ಯಗಳು ಕಣ್ಮರೆಯಾಗುತ್ತಿರುವುದು ವಿಷಾದನೀಯ, ಕನ್ನಡ ಭಾಷೆ ಉಳಿಸಿ ಬೆಳೆಸಲು ಇಂತಹ ಸಮ್ಮೇಳನಗಳು ನಿರಂತರ ಹಮ್ಮಿಕೊಳ್ಳುವುದು ಅನಿವಾರ್ಯವಾಗಿದೆ ಎಂದರು.
ಕಲಬುರ್ಗಿ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾದ ವಿಜಯಕುಮಾರ್ ಪಾಟೀಲ್ ತೆಗಲ ತಿಪ್ಪಿ ಕಲೆ, ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರಕ್ಕೆ ಕಮಲಾಪೂರ ತಾಲೂಕು ವಿಶೇಷ ಕೊಡುಗೆ ನೀಡುತ್ತಿದೆ. ಸಂಸ್ಕಾರಯುತ ಜೀವನ ಮತ್ತು ಧಾರ್ಮಿಕ ಪರಂಪರೆಗೆ ಈ ನೆಲದ ಸೇವೆ ಅನನ್ಯ ಮತ್ತು ಸದಾ ಸರಿಸುವಂಥದು. ಪ್ರಥಮ ಸಾಹಿತ್ಯ ಸಮ್ಮೇಳನ ಆಯೋಜಿಸುವ ಮೂಲಕ ಇತಿಹಾಸ ನಿರ್ಮಿಸಲಾಗಿದ್ದು,ಇಲ್ಲಿಯ ಜೀವನ ಮಟ್ಟ ಸುಧಾರಿಸಲಾಯಿತು. ಇಂಥ ಕನ್ನಡ ಸಾಹಿತ್ಯ ಸಮ್ಮೇಳನಗಳನ್ನು ಕೈಗೊಳ್ಳಲು ಯಾವುದೇ ಅನುದಾನವಿಲ್ಲ. ಆದರೂ ಕನ್ನಡದ ಕಂಪು ಎಲ್ಲೆಡೆ ಸೂಸಲು ಸ್ಥಳೀಯರ ಸಹಾಯ ಸಹಕಾರಗಳಿಂದ ನಡೆಸಲಾಗುತ್ತಿದೆ. ಮುಂಬರುವ ದಿನಗಳಲ್ಲಿ ಕಮಲಾಪೂರ ತಾಲೂಕನ್ನು ಸಾಂಸ್ಕ್ರೃತಿಕ ತಾಲೂಕನ್ನಾಗಿ ಮಾಡಬೇಕು ಎಂದು ಮಾನವಿ ಮಾಡಿದರು.
ಹೊರಗಡೆ ಹಾಸ್ಯನು .ಉರ್ದು. ಒಳಗೆ ಉರ್ದು ,'ಹೊರಗಡೆ ನಾಮ' ಪಲಕ ಹಾಕಿ ಕನ್ನಡ ಝಂಕಾರ ಮೊಳಿಗಿಸಿದ್ದಾರೆ. ಇಂಥದೇ ಕನ್ನಡದ ಝೇಂಕಾರ ಮುಂದುವರಿಸಬೇಕಾಗಿದೆ ಎಂದು ಅವರು ಹೇಳಿದರು.
ತದನಂತರ ಕಸಪ ತಾಲ್ಲೂಕು ಅಧ್ಯಕ್ಷ ಸುರೇಶ್ ಲೆಂಕಿ ಪ್ರಧಾನ ಸಂಪಾದಕತ್ವದಲ್ಲಿ ರಚಿತವಾದ ಕೆಂಬಾಳೆ ಕಣಜ ಎಂಬ ಸ್ಮರಣ ಸಂಚಿಕೆಯನ್ನು ಮಾಜಿ ಸಚಿವ ರೇವು ನಾಯಕ ಬೆಳಮಗಿ ಬಿಡುಗಡೆ ಮಾಡಿದರು.
ಉಪನ್ಯಾಸ ಗೋಷ್ಟಿ ಕಮಲಾಪುರ ಪರಿಸರದ ಸಾಮರಸ್ಯ ಕುರಿತು ಹಿರಿಯ ಸಾಹಿತಿಗಳಾದ ಡಾಕ್ಟರ್ ಅಮೃತ ಕಟಕೆ, ಕಮಲಾಪುರ ಪರಿಸರದ ಸಾಹಿತ್ಯ ಕುರಿತು ಸಂಶೋಧಕಿ ಡಾ. ಗೀತಾಂಜಲಿ ವಾಲಿಕರ್, ಸಮ್ಮೇಳನ ಅಧ್ಯಕ್ಷರ ಬದುಕು ಬರಹ ಕುರಿತು ಶರಣಬಸವ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥರಾದ ಕಲ್ಯಾಣ್ ರಾವ್ ಪಾಟೀಲ್ಉಪನ್ಯಾಸ ನೀಡಿದರು,
ಕವಿಗೋಷ್ಠಿಯಲ್ಲಿ ಸಾಹಿತಿ ಪ್ರಾಧ್ಯಾಪಕ ಡಾ. ಲಕ್ಷ್ಮಿಕಾಂತ್ ಪಂಚಾಳ ಕವಿಗೋಷ್ಠಿಯ ಆಶಯ ನುಡಿಗಳನ್ನು ಆಡಿದರು.
ಸಮಾರೋಪ ಮತ್ತು ಸತ್ಕಾರ ಸನ್ಮಾನ ಸಮಾರಂಭದಲ್ಲಿ ಹಿರಿಯ ಸಾಹಿತಿ ರವಿ ಕೆ ಹಾಲು ಆಸೆಯ ನುಡಿಗಳನ್ನು ಆಡಿದರು
ಕಲ್ಬುರ್ಗಿ ಶಾಲಾ ಶಿಕ್ಷಣ ಇಲಾಖೆಯ ವಿಷಯ ಪರಿಕ್ಷಕ ನಾಗೇಂದ್ರಪ್ಪ ಅವರಾದಿ ಸಮಾರೋಪ ನುಡಿಗಳನ್ನು ಆಡಿದರು,
ಪ್ರಥಮ ಸಾಹಿತ್ಯ ಸಮ್ಮೇಳನದಲ್ಲಿ ಕಮಲಾಪುರ ತಾಲೂಕು ಹೋರಾಟಗಾರರನ್ನು, ವೈದ್ಯರನ್ನು, ಸಾಹಿತಿಗಳು, ಪತ್ರಕರ್ತರು, ವಿವಿಧ ಕ್ಷೇತ್ರದ ಸಾಧಕರನ ಗೌರವಿಸಿ ಸತ್ಕರಿಸಲಾಗುತ್ತಿದೆ.
ಈ ಸಂದರ್ಭದಲ್ಲಿ ಮಾಜಿ ಸಚಿವ ರೇವು ನಾಯಕ ಬೆಳಮಗಿ, ಮಾಜಿ ವಿಧಾನ ಪರಿಷತ್ ಸದಸ್ಯ ಅಮರನಾಥ ಪಾಟೀಲ್, ಕಮಲಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೈಜನಾಥ ತಡಕಲ್, ಕಾಂಗ್ರೆಸ್ ಮುಖಂಡ ಗುರು ಮಾಟೂರ್, ಬಳ್ಳಾರಿ ವಿಜಯನಗರ ಶ್ರೀಕೃಷ್ಣದೇವರಾಯ ವಿವಿಯ ಪ್ರಾಧ್ಯಾಪಕರಾದ ಡಾ.ಅರುಣ್ ಕುಮಾರ್ ಲಗಶೆಟ್ಟಿ, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಶಿವ ಶೆಟ್ಟಿ ಪಾಟೀಲ್, ಮಾಜಿ ಎಪಿಎಂಸಿ ಉಪಾಧ್ಯಕ್ಷ ರಾಜಕುಮಾರ ಕೋಟಿ, ಸೊಂಯ್ ಗ್ರಾಪಂ ಅಧ್ಯಕ್ಷೆ ನೀಲಮ್ಮ ಕೋರಿ,
ಚಿಂಚನಸೂರ್ ಮಾಜಿ ಜೀಪಂ ಸದಸ್ಯ ಶರಣಗೌಡ ಪಾಟೀಲ್, ಶಿವಕುಮಾರ್ ಪಸಾರ , ಗೋರಕನಾಥ ಶಾಖಾಪುರ,
ವಿ.ಸ.ನೌ ಸಂಘದ ಜಿಲ್ಲಾಧ್ಯಕ್ಷ ಸಂತೋಷ್ ದ್ಯಾಗೋಂಡ್, ಶಿವರಾಜ್ ಅಂಡಗಿ, ಧಮ೯ಣ್ಣ ಧನ್ನಿ, ಶರಣರಾದ ಛಪ್ಪರಬಂಧಿ, ರವೀಂದ್ರ ಕೋರಿ, ಶರಣು ಕೋರಿ, ಅಬ್ದುಲ್ ಸತ್ತರ್ , ಅಂಬಾರಾಯ ಜವಳಗಾ,
ಮುರುಗೇಂದ್ರ ವೀರಶೆಟ್ಟಿ ಸೋಮನಗೌಡ ವಿಠಲಾಪುರ, ಸುರೇಶ ದೇಶಪಾಂಡೆ, ಸಂತೋಷ ಕುಡ್ಡಳ್ಳಿ, ಪ್ರಕಾಶ ರೆಡ್ಡಿ, ರಾಘವೇಂದ್ರ ಗಾಂಜಾ, ವಿರೇಶ ಜಮಾದಾರ, ಅವಿನಾಶ ಈಟಿ, ರವೀಂದ್ರ ಬಿಕೆ ,ಪ್ರಶಾಂತ್ ಮಾನಕರ್ ,ಕಸ್ತೂರಿಬಾಯಿ ರಾಜೇಶ್ವರ್,, ಮಲ್ಲಿನಾಥ್ ಅಂಬಲಗಿ,ಆನಂದ ವಾರಿಕ್ , ಸಂಜುಕುಮಾರ್ ನಾಟಿಕಾರ, . ಮಲ್ಲಿನಾಥ ಅಂಬಲಗಿ, ಸೊಂತ ಕಸಾಪ ವಲಯ ಅಧ್ಯಕ್ಷ ಅನಂತ್ ಕುಮಾರ್ ಪಾಟೀಲ್ , ಬಂಡಪ್ಪ ಚೀಲಿ , ಅಂಬರಾಯ ಮಡ್ಡೆ,
ಸತ್ಕಾರಕ್ಕೆ ಭಾಜನರಾದವರು..
ಅಪ್ಪಾರಾವ ಅಕ್ಕೊಣಿ, ರವಿ ಕೆ.ಹಾಲು, ಡಾ. ರಾಜೇಂದ್ರ ಎರನಾಳೆ, ಡಾ. ಶರಣಬಸಪ್ಪ ವಡ್ಡನಕೇರಿ, ಡಾಕ್ಟರ್ ವಾಣಿ ಪಾಗಾ, ಡಾ.ಮಲ್ಲಿಕಾರ್ಜುನ್ ವಡ್ಡನಕೇರಿ, ಡಾ.ಶರಣಪ್ಪ ಮಾಳಗಿ, ಸಿ ಪಿ ಐ ಮಹದೇವ್ ಪಾಟೀಲ್, ಡಾ. ವಾಣಿ ನಾಗಾ, ಡಾ.ಮಲ್ಲಿಕಾಜು೯ನ ವಡ್ಡನಕೇರಿ, ಮಲ್ಲಿಕಾರ್ಜುನ ಮೂಲಗೆ, ದಾಸಿಮಯ್ಯ ವಡ್ಡನಕೇರಿ, ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ, ರಾಚಣ್ಣ ಕುರಿಕೋಟಾ, ಸಿದ್ದರಾಜು ಲೇಂಗಟಿ, ವಿಶ್ವನಾಥ ರಾಠೋಡ, ನಿಂಗಪ್ಪ ಪ್ರಬುದ್ದಕರ್,ಸತ್ಕಾರಕ್ಕೆ ಭಾಜನರಾದವರು.......
ಅಪ್ಪಾರಾವ ಅಕ್ಕೊಣಿ, ರವಿ ಕೆ.ಹಾಲು, ಡಾ. ರಾಜೇಂದ್ರ ಎರನಾಳೆ, ಶರಣಪ್ಪ ಮಾಳಗಿ, ಡಾ. ವಾಣಿ ನಾಗಾ, ಡಾ.ಮಲ್ಲಿಕಾಜು೯ನ ವಡ್ಡನಕೇರಿ, ಮಲ್ಲಿಕಾರ್ಜುನ ಮೂಲಗೆ, ದಾಸಿಮಯ್ಯ ವಡ್ಡನಕೇರಿ, ಶಿವಕುಮಾರ ಪಸಾರ, ಮಲ್ಲಿಕಾರ್ಜುನ ಮರತೂರಕರ, ರಾಚಣ್ಣ ಕುರಿಕೋಟಾ, ಸಿದ್ದರಾಜು ಲೇಂಗಟಿ, ವಿಶ್ವನಾಥ ರಾಠೋಡ, ನಿಂಗಪ್ಪ ಪ್ರಬುದ್ದಕರ್,
ಕಮಲಾಪುರ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಅಂಗೀಕರಿಸಿದ ನಿರ್ಣಯಗಳು.
ಕಮಲಾಪುರ ತಾಲೂಕಿನ ಚರಣರ ಅನುಭವಿಗಳ ಸೂಫಿ ಸಂತರ ಸ್ಮಾರಕಗಳನ್ನು ರಕ್ಷಿಸುವುದು.
ಕಮಲಾಪುರ ತಾಲೂಕಿನ ಎಲ್ಲಾ ಕನ್ನಡ ಪ್ರಾಥಮಿಕ ಮಾಧ್ಯಮಿಕ ಪ್ರೌಢಶಾಲೆಗಳನ್ನು ನವೀಕರಿಸುವುದರೊಂದಿಗೆ ಅಲ್ಲಿ ಸುಶೀತ ಕಟ್ಟಡಗಳ ನಿರ್ಮಾಣ ಮಾಡಬೇಕು.
ಕಮಲಾಪುರ ತಾಲೂಕಿಗೆ ಸೊಸಜ್ಜಿತ ಆಡಳಿತ ಕಚೇರಿ, ಪೂರ್ಣಾವಧಿ ಎಲ್ಲಾ ಇಲಾಖೆಗಳ ಸ್ಥಳಾಂತರ ಆಗಬೇಕು ತಾಲೂಕಿಗೆ ಸಮಗ್ರ ಸ್ಥಾನಮಾನ ಒದಗಿಸಬೇಕು.
ಎಲ್ಲಾ ಶಾಲೆಗಳಲ್ಲಿ ಮೂಲ ಸೌಕರ್ಯ ಶುದ್ಧ ಕುಡಿಯುವ ನೀರು ಶೌಚಾಲಯ ವ್ಯವಸ್ಥೆ ಗಾಯಂ ಶಿಕ್ಷಕರ ನೇಮಕಾತಿ ಆಗಬೇಕು.
ಕಮಲಾಪುರ ತಾಲೂಕಿನ ಎಲ್ಲಾ ಸಾಹಿತಿಗಳಿಗೆ ಕಲಾವಿದರಿಗೆ ಸೂಕ್ತ ಗೌರವ ಸ್ಥಾನಮಾನ ಒದಗಿಸಬೇಕು.
ಕಮಲಾಪುರ ತಾಲೂಕಿನ ಪ್ರತಿಯೊಂದು ಹಳ್ಳಿಗಳಿಗೂ ಸಾರಿಗೆ ಸಂಪರ್ಕ ಒದಗಿಸಬೇಕು.
ಕಮಲಾಪುರ ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ಕಮಲಾಪುರ ತಾಲೂಕ್ ಅಭಿವೃದ್ಧಿ ಪ್ರಾಧಿಕಾರ ರಚಿಸಬೇಕು.
ಕಮಲಾಪುರದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಸ್ವಾತಂತ್ರ್ಯ ಹೋರಾಟಗಾರ ಸ್ಮರಣಾರ್ಥ ವಸ್ತು ಸಂಗ್ರಹಾಲಯ ಸ್ಥಾಪಿಸಬೇಕು.
ಭಾಗವಹಿಸಿದ ಕವಿಗಳು..
ಬಸವರಾಜ್ ಗೌಡನೂರ, ಶಂಕರಲಿಂಗ, ವಿಜಯಲಕ್ಷ್ಮಿ ಮಾಯಣ್ಣವರ್, ಮೋಹನ್ ಕಟ್ಟಿಮನಿ, ಸುರೇಶ ಬಡಿಗೇರ್,
ರಾಮಚಂದ್ರ ಮಾಳಗೆ, ಸ್ನೇಹಾ, ಭಾಗ್ಯಶ್ರೀ, ಮುರುಘರಾಜೇಂದ್ರ ಹಿರೇಮಠ, ದಿಲೀಪಕುಮಾರ್ ಮೊಘಾ, ಅನಿಲಕುಮಾರ ಮುಸ್ತಾರಿ
{ ಕಮಲಾಪುರ ತಾಲೂಕಿನ ಪ್ರಥಮ ಸಾಹಿತ್ಯ ಸಮ್ಮೇಳನ ಅದ್ದೂರಿಯಾಗಿ ಹಾಗೂ ಅರ್ಥಪೂರ್ಣವಾಗಿ ಜರಗಲು ಸಹ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ನಾನು ಚಿರಋಣಿ, ಐತಿಹಾಸಿಕ ಸಮ್ಮೇಳನಕ್ಕೆ ಸಾಕ್ಷಿಯಾದ ಕನ್ನಡ ಅಭಿಮಾನಿಗಳ ಬೆಂಬಲ ಅದ್ಭುತ ಪೂರ್ವವಾಗಿತ್ತು...... ಸುರೇಶ ಲೇಗಟಿ ತಾಲೂಕ ಅಧ್ಯಕ್ಷ ಕಸಾಪ ಕಮಲಾಪುರ }