ದೈಹಿಕ ಮತ್ತು ಮಾನಸಿಕ ಸಮೃದ್ಧಿಗೆ ಸಂಗೀತ ದಿವೌಷಧ - ಈರಣ್ಣ ದಸ್ಮಾ

ದೈಹಿಕ ಮತ್ತು ಮಾನಸಿಕ ಸಮೃದ್ಧಿಗೆ ಸಂಗೀತ ದಿವೌಷಧ - ಈರಣ್ಣ ದಸ್ಮಾ
ಸಂಗೀತವು ಮನಸ್ಥಿತಿಯನ್ನು ಸುಧಾರಿಸುತ್ತದೆ, ನೋವು ಮತ್ತು ಆತಂಕವನ್ನು ಕಡಿಮೆ ಮಾಡುತ್ತದೆ ಜೊತೆಗೆ ಭಾವನಾತ್ಮಕ ಅಭಿವ್ಯಕ್ತಿಗೆ ಅವಕಾಶಗಳನ್ನು ಸುಲಭಗೊಳಿಸುತ್ತದೆ. ಸಂಗೀತ ನಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯಕ್ಕೆ ಹಲವಾರು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಒಂದು ರೀತಿಯಲ್ಲಿ ಇದು ದಿವೌಷಧಿಯಂತೆ ಕೆಲಸ ಮಾಡುತ್ತದೆ ಎನ್ನುತ್ತಾ ನಮ್ಮ ಜೀವನದ ಮಹತ್ವವಾದ ದಿನ “ಮಹಾ ಶಿವರಾತ್ರಿ” ಇಡೀ ರಾತ್ರಿ ಸಂಗೀತ ಭಜನೆ ಮಾಡುವುದರಿಂದ ಮಾಡಿ ಮಾನಸಿಕ ನೆಮ್ಮ ಪಡೆದುಕೊಳ್ಳೋಣ ಎಂದು ಸ್ವತಃ ಹಾಡುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಮಾಜಿ ಅಧ್ಯಕ್ಷ ಈರಣ್ಣ ದಸ್ಮಾ ಮಾತನಾಡಿದರು.
ಮಹಾನಗರ ಪಾಲಿಕೆ ಸದಸ್ಯೆ ವೆಂಕಮ್ಮ ಗುತ್ತೇದಾರ, ಎಂ.ಬಿ.ನಗರ ಪಿ.ಎಸ್.ಐ ಶಿವಾನಂದ ವಾಲಿಕಾರ, ದೀಪೋತ್ಸವ ಪ್ರಾಯೋಜಕರಾದ ಶರಣು ವಿಶ್ವನಾಥ ರಟಕಲ್ ವೇದಿಕೆ ಮೇಲೆ ಉಪಸ್ಥಿತರಿದ್ದರು.
ಗುರುಲಿಂಗಯ್ಯ ಮಠಪತಿ ಸ್ವಾಗತಿಸಿದರು, ಸಂಗೀತೋತ್ಸವ ಪ್ರಾಯೋಜಕರಾದ ಉಮೇಶ ಶೆಟ್ಟಿ ಪ್ರಾಸ್ತಾವಿಕ ಮಾತನಾಡಿದರು. ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಕಾರ್ಯಕ್ರಮ ನಿರೂಪಿಸಿದರು.
ಸಾಯಂಕಾಲ ೬ ಗಂಟೆಯಿಂದ ರಾತ್ರಿ ೧೦.೩೦ ಗಂಟೆಯವರೆಗೆ ಸಂಗೀತ ಸೇವೆ ನೀಡಿದ ಕಲಾವಿದರಾದ ಅಣ್ಣಾರಾವ ಮತ್ತಿಮೂಡ, ಶಿವಕುಮಾರ ಪಾಟೀಲ, ಷಣ್ಮಿಕಯ್ಯ ಮುತ್ತಗಿ, ಸೂರ್ಯಕಾಂತ ದಂಡೋತಿ, ವಿನೋದ ದಸ್ತಾಪೂರ, ಶರಣಗೌಡ ಪಾಟೀಲ ಪಾಳಾ ಹಾಗೂ ಶಿವನ ವೇಷ ಧರಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರಗು ತಂದುಕೊಟ್ಟ ಕುಮಾರ ಮಹಾದೇವ ತೋಟ್ನಳ್ಳಿ, ಏಕಪಾತ್ರಾಭಿನಯ ಮಾಡಿದ ಬಾಲರತ್ನ ಪ್ರಶಸ್ತಿ ಪುರಸ್ಕೃತ ವಾಸು ಪಾಟೀಲ, ಭಕ್ತಿಗೀತೆ ಹಾಡಿದ ಕಲಾಶ್ರೀ ಪ್ರಶಸ್ತಿ ಪುರಸ್ಕೃತ ಆದಿತ್ಯ ಪಾಟೀಲ, ಜನಪದ ಹಾಡುಗಳಿಂದ ಜನಮಮನಗೆದ್ದ ಕಲಾವಿದ ಎಂ.ಎನ್. ಸುಗಂಧಿ, ವಚನಗಳನ್ನು ಸಂಗೀತ ರೂಪದಲ್ಲಿ ಹಾಡಿ ಭಜನೆ ನಡೆಸಿಕೊಟ್ಟ ಅಕ್ಕಮಹದೇವಿ ಮಹಿಳಾ ಟ್ರಸ್ಟ್ನ ಸುಮಾರು ೨೫ ಮಹಿಳೆಯರಿಗೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಸೇವೆ ಮಾಡಿದ ಇವರನ್ನು ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
ಸಾಯಂಕಾಲ ೪.೩೦ ರಿಂದ ರಾತ್ರಿ ೯.೪೫ರ ವರೆಗೆ ಸಾಲುಗಟ್ಟಿ ಸಾವಿರಾರು ಭಕ್ತರು ಮಲ್ಲಿಕಾರ್ಜುನ ದೇವರ ದರ್ಶನ ಪಡೆದು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಗೀತ ಹಾಗೂ ಸಂಸ್ಕೃತಿಕ ಕಲಾವಿದರಿಗೆ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ತರುಣ ಸಂಘ ಉಪಾಧ್ಯಕ್ಷ ವಿರೇಶ ನಾಗಶೆಟ್ಟಿ ದೇವಸ್ಥಾನದ ಗರ್ಭಗುಡಿಯ ಹೂವಿನ ಅಲಂಕಾರಕ್ಕೆ ಕೈಜೋಡಿಸಿ ೨ ದಿನಗಳಿಂದ ಎಲ್ಲ ತರುಣ ಸಂಘದ ಪದಾಧಿಕಾರಿಗಳು ಶ್ರಮ ವಹಿಸಿ ಶಿವರಾತ್ರಿ ಮಹೋತ್ವವ ಕಾರ್ಯಕ್ರಮ ಯಶಸ್ವಿಗೊಳಿಸಿದ್ದಾರೆಂದು ವಿದ್ಯಾನಗರ ವೆಲ್‌ಫೇರ್ ಸೊಸೈಟಿಯ ಕಾರ್ಯದರ್ಶಿ ಶಿವರಾಜ ಅಂಡಗಿ ಪತ್ರಿಕಾ ಪ್ರಕಟಣೆಗೆ ತಿಳಿಸಿದ್ದಾರೆ.
ಫೋಟೋ ೧) ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಶಿವರಾತ್ರಿ ನಿಮಿತ್ಯ ಸಂಗೀತೋತ್ಸವ, ದೀಪೋತ್ಸವ ಕಾರ್ಯಕ್ರಮವನ್ನು ಈರಣ್ಣ ದಸ್ಮಾ ಉದ್ಘಾಟಿಸುತ್ತಿರುವ ಚಿತ್ರ.
ಶಿವಾನಂದ ವಾಲಿಕಾರ, ಯಂಕಪ್ಪ ಗುತ್ತೇದಾರ, ಶಿವರಾಜ ಅಂಡಗಿ, ಮಲ್ಲಿನಾಥ ದೇಶಮುಖ, ಉಮೇಶ ಶೆಟ್ಟಿ ಉಪಸ್ಥಿತರಿದ್ದರು.
೨) ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಗೀತೋತ್ಸವ, ದೀಪೋತ್ಸವ ಕಾರ್ಯಕ್ರಮದಲ್ಲಿ ಸಂಗೀತ ಸೇವೆ ನೀಡಿದ ಕಲಾವಿದರಿಗೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.
೩) ವಿದ್ಯಾನಗರದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸಂಗೀತೋತ್ಸವ, ದೀಪೋತ್ಸವ ಕಾರ್ಯಕ್ರಮದಲ್ಲಿ ಇಡೀ ರಾತ್ರಿ ಭಜನೆ ಮಾಡಿ ಭಕ್ತಿ ಸೇವೆ ಮಾಡಿದ ಅಕ್ಕಮಹಾದೇವಿ ಮಹಿಳಾ ಟ್ರಸ್ಟಿನ ಸದಸ್ಯರಿಗೆ ವಿದ್ಯಾನಗರ ವೆಲ್‌ಫೇರ್ ಸೊಸೈಟಿ ವತಿಯಿಂದ ಪ್ರಮಾಣ ಪತ್ರ ನೀಡಿ ಗೌರವಿಸಲಾಯಿತು.