ಅರಿವು ಇಲ್ಲದಿದ್ದರೆ ಅಜ್ಞಾನ ಹುಟ್ಟುತ್ತದೆ , ನವರಂಗ ಅಭಿಪ್ರಾಯ| ಚಕೋರ ಕಾರ್ಯಕ್ರಮ
ದಿನಾಂಕ 24-02-2026 ಕರ್ನಾಟಕ ಸಾಹಿತ್ಯ ಅಕಾಡೆಮಿ, ಬೆಂಗಳೂರು, ಚಕೋರ ಸಾಹಿತ್ಯ ವಿಚಾರ ವೇದಿಕೆ, ಬೀದರ ಮತ್ತು ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಮನ್ನಳ್ಳಿ ಇವರ ಸಹಯೋಗದಲ್ಲಿ "ಪ್ರಜಾಪ್ರಭುತ್ವದಲ್ಲಿ ಸಂವಿಧಾನದ ಆಶಯಗಳು" ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು
ಉದ್ಘಾಟಕರಾಗಿ ದಾಸ ಸಾಹಿತ್ಯ ಪರಿಷತ್ತಿನ, ಅಧ್ಯಕ್ಷರಾದ ಡಾ ರವೀಂದ್ರ ಲಂಜವಾಡಕರ್ ಅವರು ಮಾತನಾಡುತ್ತಾ ನಮ್ಮ ಸಂವಿಧಾನದ ಗಾತ್ರವು ದೊಡ್ಡದು. ಅದು ಕಠಿಣವೂ ಹೌದು. ಸರಳವೂ ಹೌದು. ಜನರ ಆಶಯಗಳಿಗೆ ಅದು ತವರೂರು. ಸಂವಿಧಾನದಿಂದ ಮಹಿಳೆಯರಿಗೆ ತುಂಬಾ ಅನೂಕುಲವಾಗಿದೆ. ಪ್ರತಿ ವ್ಯಕ್ತಿಯು ಗೌರವದಿಂದ ಬದುಕುವ ಹಕ್ಕು ಕೊಟ್ಟಿದ್ದು ಸಂವಿಧಾನ ಎಂದು ನುಡಿದರು.
ವಿಶೇಷ ಉಪನ್ಯಾಸ ನೀಡಿದ ಧಾರವಾಡದ ನ್ಯಾಯವಾದಿ ಮತ್ತು ಸಾಹಿತಿಗಳಾದ ಗುರು ಹಿರೇಮಠ ಅವರು ಮಾತನಾಡುತ್ತಾ ದೇಶದ ಸಂವಿಧಾನವು ವಿಶ್ವದಲ್ಲಿಯೆ ಅತ್ಯಂತ ಜನಪ್ರಿಯ ಸಂವಿಧಾನವಾಗಿದೆ. ಜನರಿಂದ ಜನರಿಗಾಗಿ, ಜನರಿಗೋಸ್ಕರ ಮಾಡಿರುವ ಸಂವಿಧಾನವಾಗಿದೆ. ಮಕ್ಕಳಲ್ಲಿ ಸಂವಿಧಾನದ ಅರಿವು ಮೂಡಿಸುವದು ಬಹಳ ಮುಖ್ಯ ಎಂದು ನುಡಿದರು.
ಅಧ್ಯಕ್ಷತೆ ವಹಿಸಿದ್ದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಚಾರ್ಯರಾದ ಪ್ರೊ ಶರಣಪ್ಪ ಎಸ್ ಮಲಗೊಂಡ ಅವರು ಮಾತನಾಡುತ್ತಾ ಸಂವಿಧಾನವು ಸ್ವಾತಂತ್ರ್ಯ, ನ್ಯಾಯ, ಸಮಾನತೆ, ಮತ್ತು ಸೌಹಾರ್ದತೆಯ ಅಂಶಗಳನ್ನು ಒಳಗೊಂಡ ಭಾರತ ದೇಶದ ಆತ್ಮವಾಗಿದೆ. ಪ್ರತಿ ಮಗುವಿಗೂ ಕಾನೂನಿನ ಅರಿವು ಬಹಳ ಮುಖ್ಯ ಇಂತಹ ಕಾರ್ಯಕ್ರಮಗಳ ಮೂಲಕ ಮಕ್ಕಳಲ್ಲಿ ಅರಿವು ಮೂಡಿಸಲು ಸಾಧ್ಯವಿದೆ. ಮಕ್ಕಳ ಭವಿಷ್ಯದ ಕನಸುಗಳಿಗೆ ಇಂದೆ ಬುನಾದಿ ಹಾಕಬೇಕು ಎಂದು ನುಡಿದರು.
ಚಂಕೋರ ಸಾಹಿತ್ಯ ವಿಚಾರ ವೇದಿಕೆಯ ಬೀದರನ ಜಿಲ್ಲಾ ಸಂಚಾಲಕರಾದ ಡಾ. ಮಕ್ತುಂಬಿ ಎಂ ಅವರು ಮಾತನಾಡುತ್ತಾ ಮಕ್ಕಳು ಸಾಮಾಜಿಕ ಜಾಲತಾಣದಿಂದ ಹೊರ ಬಂದು ಕಾನೂನಿನ ಅರಿವು ಪಡೆದುಕೊಳ್ಳುವದು ಅನಿವಾರ್ಯವಾಗಿದೆ. ಅರಿವು ಇಲ್ಲದಿದ್ದರೆ ಅಜ್ಞಾನ ಹುಟ್ಟುತ್ತದೆ ಅದರಿಂದ ನಾವು ದೂರವಿರಬೇಕು ಎಂದು ಹೇಳಿದರು.
ಕಾಲೇಜಿನ ಸಿಬ್ಬಂದಿ ಕಾರ್ಯದರ್ಶಿಗಳಾದ
ಡಾ ನವರಂಗ ಮಾಣಿಕರಾವ ಮಾತನಾಡುತ್ತಾ ಒಳ್ಳೆಯ ಕಾರ್ಯಕ್ರಮಗಳು ಮತ್ತೆ ಮತ್ತೆ ಮಾಡುತ್ತಾ ಮಕ್ಕಳಿಗೆ ಸರಿಯಾದ ವಿಷಯದ ಬಗ್ಗೆ ಮಾಹಿತಿ ನೀಡಿ ಅರಿವು ಮೂಡಿಸುವ ಕಾರ್ಯ ನಡೆಯಲಿ ಎಂದು ನುಡಿದರು.
ಕಾಲೇಜಿನ ವಿಧ್ಯಾರ್ಥಿ ಕಲ್ಯಾಣ ಅಧಿಕಾರಿಗಳಾದ ಡಾ ರಾಜಕುಮಾರ ಟಿ ಅವರು ಮಾತನಾಡುತ್ತಾ ಮಕ್ಕಳಿಗೆ ಸರಿಯಾದ ಮಾಹಿತಿಯನ್ನು ನೀಡಬೇಕು. ಬೆಳಯುವ ಸಸಿ ಮೊಳಕೆಯಲ್ಲಿ ಬಾಲ್ಯದಲ್ಲಿಯೆ ಮಕ್ಕಳಿಗೆ ಕಾನೂನನ್ನು ಮನವರಿಕೆ ಮಾಡಿಕೊಡಬೇಕು ಎಂದು ನುಡಿದರು
ಸಹ ಪ್ರಾಧ್ಯಾಪಕರುಗಳಾದ ಡಾ. ಜೈಶೀಲಾ, ಡಾ ಪ್ರಥ್ವಿರಾಜ, ಡಾ ದಶವಂತ, ಡಾ ಸುರೇಂದ್ರ ಸಿಂಗ್, ಡಾ ಶಾಜಿಯಾ ಅಂಜುಮ್,
ಸಹಾಯಕ ಪ್ರಾಧ್ಯಾಪಕರುಗಳಾದ ಡಾ ಸುನೀಲಕುಮಾರ, ಉಷಾರಾಣಿ ಕಛೇರಿ ಅಧೀಕ್ಷಕರಾದ ಮಗದುಮ್, ಆನಂದ, ಅಯುಬ್ ಹಾಗೂ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು, ಕಲಾ ವಾಣಿಜ್ಯ ವಿಜ್ಞಾನ ಮತ್ತು ಡಿಸಿಎ ವಿಭಾಗದ ಎಲ್ಲಾ ವಿದ್ಯಾರ್ಥಿಗಳು ಭಾಗವಹಿಸಿದರು.
ಪ್ರಾರ್ಥನೆ ಬಿಸಿಎ ವಿದ್ಯಾರ್ಥಿಗಳಾದ ವೈಷ್ಣವಿ ಮತ್ತು ಜ್ಯೂಲಿ ಅವರು ನೆರವೇರಿಸಿದರು.
ನಿರೂಪಣೆ ಸಹ ಪ್ರಾಧ್ಯಾಪಕರಾದ ಸವಿತಾ ಪಾಟೀಲ್ ಅವರು ಮಾಡಿದರು.
ಸ್ವಾಗತವನ್ನು ಸಹಾಯಕ ಪ್ರಾಧ್ಯಾಪಕರಾದ ರೇಣುಕಾ ಮಾಡಿದರು
ವಂದನಾರ್ಪಣೆಯನ್ನು
ಡಾ ಜ್ಞಾನಗಂಗಾ ಅವರು ಮಾಡಿದರು.
