ಶ್ರೀ ಗುಂಡೂರಾವ ಕಡಣಿ ಅವರ ಪತ್ರಿಕಾ ಸೇವೆ ಅಮೋಘ

ಶ್ರೀ ಗುಂಡೂರಾವ ಕಡಣಿ ಅವರ ಪತ್ರಿಕಾ ಸೇವೆ ಅಮೋಘ

ಶ್ರೀ ಗುಂಡೂರಾವ ಕಡಣಿ ಅವರ ಜೀವನದ ಅಮೂಲ್ಯ ನಲವತ್ತು ವರ್ಷಗಳ ಪತ್ರಿಕಾ ಸೇವೆ ಅಮೋಘವಾದದ್ದು. 

   ಪ್ರಾರಂಭದ ದಿನಗಳಲ್ಲಿ ಪತ್ರಿಕಾ ಮಾಧ್ಯಮಗಳ ಅಚ್ಚುಕಟದಿಂದ ಪ್ರಾರಂಭವಾದ ಅವರ ಜೀವನ ವರದಿಗಾರರಾಗಿ, ಉಪಸಂಪಾದಕರಾಗಿ, ಕಲ್ಬುರ್ಗಿಯ ಹತ್ತಾರು ಸ್ಥಳೀಯ ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ ನಂತರ ದಿನಗಳಲ್ಲಿ ಅವರು ರಾಜ್ಯಮಟ್ಟದ ಹಲವಾರು ಪತ್ರಿಕೆಗಳಲ್ಲಿ ಕೆಲಸ ಮಾಡಿದ್ದಾರೆ. 

ಪ್ರಸಿದ್ಧ ಕನ್ನಡ ಸಂಜೆ ಪತ್ರಿಕೆ ಸಂಜೆವಾಣಿ ಯಲ್ಲಿ ಹಿರಿಯ ವರದಿಗಾರರಾಗಿ ಕಲ್ಯಾಣ ಕರ್ನಾಟಕ ಭಾಗದ ಈ ಪತ್ರಿಕೆಯ ಹಿರಿಯ ಅನುಭವಿ ವರದಿಗಾರರಾಗಿ ನಿರಂತರವಾಗಿ ಸಂಜೆವಾಣಿ ಪತ್ರಿಕೆಯನ್ನು ಹತ್ತು ವರ್ಷಗಳ ಕಾಲ ನಡೆಸಿಕೊಂಡು ಬಂದ ಶ್ರೀ ಗುಂಡು ರಾವ ಅವರು ನಂತರದ ದಿನಗಳಲ್ಲಿ ಬೀದರ್ ಜಿಲ್ಲೆಯ ಊಶಾ ಕಿರಣ ಪತ್ರಿಕೆಯಲ್ಲಿ ಕೂಡ ಕೆಲಸ ಮಾಡಿದ ಅನುಭವ ಅವರಿಗೆ ಇದೆ.

ಕಲ್ಬುರ್ಗಿಯ ಪತ್ರಿಕಾ ರಂಗದಲ್ಲಿ ಒಂದು ಅತ್ಯುತ್ತಮ ಹೆಸರು ಮಾಡಿರುವ ಶ್ರೀ ಗುಂಡುರಾವ್ ಕಡಣಿ ಅವರ ಬರವಣಿಗೆ ಎಂದರೆ ಎಲ್ಲರೂ ಇಷ್ಟಪಟ್ಟು ಓದುವ ಅವರ ಬರವಣಿಗೆಯಾಗಿರುತ್ತದೆ. 

    ಸ್ವಂತ ಪತ್ರಿಕೆ ತೆಗೆಯಬೇಕೆನ್ನುವ ಮಹಾದಾಸೆಯಿಂದ ಕಲ್ಬುರ್ಗಿ ನಗರದಲ್ಲಿ ಸ್ಥಳೀಯ ಪತ್ರಿಕೆಯೊಂದನ್ನು ಗೆಳೆಯರ ಜೊತೆ ಸೇರಿ ನಡೆಸುತ್ತಾ ಬಂದರು ಮುಂದೆ "ವ್ಯವಸಾಯ" ಎನ್ನುವ ಕೃಷಿ ಮಾಸಪತ್ರಿಕೆಯನ್ನು ಹಲವಾರು ವರ್ಷಗಳು ನಡೆಸಿದರು . ಪ್ರಸ್ತುತ "ಗುರು ಉಪದೇಶ" ಎನ್ನುವ ಮಾಸಿಕ ಪತ್ರಿಕೆ ನಡೆಸಿಕೊಂಡು ಬರುತ್ತಿದ್ದಾರೆ ಈ ಪತ್ರಿಕೆಯು ಇತ್ತೀಚೆಗೆ ೧೦೦ ಸಂಚಿಕೆ ಹೊರಬಂದಿದೆ. ಈ ಪತ್ರಿಕೆಯ ಗೌರವ ಸಂಪಾದಕರಾಗಿ  ಕಾರ್ಯನಿರ್ವಹಿಸುತ್ತಿದ್ದಾರೆ . ಈ ಪತ್ರಿಕೆ ಸದ್ಯ ಬಹು ವರ್ಣಗಳಲ್ಲಿ ವರ್ಣ ರಂಜಿತವಾಗಿ ಮೂಡಿಬರುತ್ತಿದೆ .ಮಕ್ಕಳು, ಮಹಿಳೆಯರು, ಹರ. ಗುರು. ಚರಮೂರ್ತಿಗಳು ಓದುವಂತಹ ಪತ್ರಿಕೆ ಇದಾಗಿದೆ. 

    ಕಲ್ಬುರ್ಗಿ ವಿಭಾಗಿಯ ಪ್ರದೇಶದಲ್ಲಿ ಇಂತಹ ಒಂದು ಮಾಸಿಕ ಪತ್ರಿಕೆ ಹೊರ ಬರುತ್ತಿರುವುದು ಎಲ್ಲರೂ ಇಷ್ಟಪಟ್ಟು ಓದುವಂತಾಗಿದೆ. ಈ ಪತ್ರಿಕೆ ಏನಾದರೂ ಬೆಂಗಳೂರು ಭಾಗದಲ್ಲಿ ಇದ್ದರೆ ಇದೊಂದು ರಾಜ್ಯ ಮಟ್ಟದ ಪತ್ರಿಕೆಯಾಗಿ ಪ್ರಸಿದ್ಧಿ ಆಗುತ್ತಿತ್ತು ಆದರೆ ಕಲಬುರ್ಗಿಯಂತಹ ಪ್ರದೇಶದಿಂದ ಈ ಪತ್ರಿಕೆ ಇನ್ನು ಬೆಳೆಯಬೇಕಾಗಿದೆ. ಈ ಭಾಗದ ಓದುಗರು ರಾಜ್ಯಮಟ್ಟದ ಪತ್ರಿಕೆಯಾಗಿ ಈ ಪತ್ರಿಕೆಯನ್ನು ಬೆಳೆಸ ಬೇಕಾಗಿದೆ. ಈ ಭಾಗದ ಒಬ್ಬ ಪ್ರಸಿದ್ಧ ಪತ್ರಕರ್ತ ಗುಂಡುರಾವ ಕಡಣಿ ಅವರು ನಮ್ಮವರು ನಮ್ಮ ಭಾಗದವರು ಎಂದು ನಾವು ಗುರುತಿಸಬೇಕಾಗಿದೆ. 

 ಶ್ರೀ ಗುಂಡೂರಾವ್ ಕಡಣಿ ಅವರು ಪತ್ರಕರ್ತರು ಅಲ್ಲದೆ ಸಾಹಿತಿಗಳು ಆಗಿದ್ದಾರೆ ಅವರ ಲೇಖನಿಯಿಂದ ಸಾವಿರಾರು ಲೇಖನಗಳು ಹತ್ತಾರು ಪುಸ್ತಕಗಳು ಕೂಡ ಹೊರಬಂದಿವೆ ಈ ಭಾಗದ ಒಬ್ಬ ಪ್ರಸಿದ್ಧ ಪತ್ರ ಕಾರರು ಸಾಹಿತಿಗಳು ಆಗಿರುವ ಶ್ರೀ ಗುಂಡುರಾವ ಕಡಣಿ ಅವರ ಬಗ್ಗೆ ಒಂದು ಅಭಿನಂದನಾ ಗ್ರಂಥ ಹೊರತರುವ ವಿಚಾರ ಒಳ್ಳೆಯದು 

--ಶಿವ ಶರಣಪ್ಪ ಜಮಾದಾರ ಶಿಕ್ಷಕರು 

 ಹಾವನೂರ