ಮೊದಲು ಮಾನವರಾಗಿ: ಡಾ.ನಾಗಾಬಾಯಿ ಬುಳ್ಳಾ

ಮೊದಲು ಮಾನವರಾಗಿ: ಡಾ.ನಾಗಾಬಾಯಿ ಬುಳ್ಳಾ

ಮೊದಲು ಮಾನವರಾಗಿ: ಡಾ.ನಾಗಾಬಾಯಿ ಬುಳ್ಳಾ

ಹುಲಸೂರು: ಅಂಬೇಡ್ಕರ್ ಕಾನೂನು ಮಹಿಳೆಯರಿಗೆ ಕೊಟ್ಡಿದ್ದಾರೆ.ಹೆಣ್ಣಿರಲಿ ಗಂಡಿರಲಿ ಮೊದಲು ಮಹಿಳೆಯರು

ಮಕ್ಕಳಿಗೆ ಶಿಕ್ಷಣ ಕೊಡಬೇಕು ನಾವೆಲ್ಲರೂ ವಿಶ್ವ ಮಾನವ ರು ಮೊದಲು ಮಾನವನಾದಾಗ ಮಾತ್ರ ಸರ್ವೋದಯ ಕಾಣುವುದು ಎಂದು ಕೆಪಿಎಸ್.ಸಿಯ ವಿಶ್ರಾಂತ ಸದಸ್ಯರಾದ ಡಾ.ನಾಗಾಬಾಯಿ ಬುಳ್ಳಾ ಆಶಯ ವ್ಯಕ್ತ ಪಡಿಸಿದರು.

         ಉರಿಲಿಂಗಪೆದ್ದಿ ಪೆದ್ದಿಮಠ ಜರುಗಿದ ಪ್ರಥಮ ಸರ್ವೋದಯ ಸಾಹಿತ್ಯ ಸಮ್ಮೇಳನ ವನ್ನು ಉದ್ಘಾಟಿಸಿ ಮಾತನಾಡಿ ದೇವರು ಗುಡಿಯಲ್ಲಿ ಇಲ್ಲ ಮನಸ್ಸಿನಲ್ಲಿದ್ದಾನೆ ದೇಹವೇ ದೇಗುಲ ಮಾಡಿದ ಶರಣರ,ಗಾಂಧಿ ತತ್ವ ಅವಶ್ಯ

ವೆಂದರು.ಹಾಗೇನಮ್ಮ ಉದ್ಧಾರ ನಾವೇ ಮಾಡಿಕೊಳ್ಳಬೇ ಕು ಮೊಬೈಲ್ ಮಕ್ಕಳಿಗೆ ನೀಡಬೇಡಿ ಎಂದರು.

ಸಮ್ಮೇಳನಾಧ್ಯಕ್ಷರ ನುಡಿ

ಸರ್ವರ ಉದಯ ಜೀವನ ನಾಗಾಲೋಟದಲ್ಲಿ ನಾವೆಲ್ಲರೂ ಸರ್ವರ ಕಣ್ಣೀರು ಒರೆಸುವ ಕೆಲಸ ಮಾಡಬೇಕು.ಸರ್ವರಿಗೂ ಎಲ್ಲಾ ಧರ್ಮಗಳು ಸಮನ್ವಯತೆ ನೀಡಿದ್ದಾರೆ.ಶರಣರು,ದಾಸರು,ಸಂತರು,ಸೂಫಿಗಳು,ಕವಿ ಚಿಂತಕರ ವಿಚಾರ ಸರ್ವೊದಯವಾಗಿದೆ.ಕನ್ನಡ ಸಾಹಿತ್ಯ ದ ಹಲವು ಪ್ರಕಾರದಲ್ಲಿ ವ್ಯಕ್ತವಾದ ಸರ್ವೋದಯ ಪರಿಕಲ್ಪನೆ, ಗಾಂಧಿ. ಸರ್ವೋದಯ ನಮಗೆ ಜನ ಮನದ 

ಜೀವನ ಹಸನಾಗಬೇಕು ಮಹಿಳೆಯರು, ದೀನ ದಲಿತರು, ಬಡವರು ಎಲ್ಲರ ಕಣ್ಣೀರು ಒರೆಸು ಕೆಲಸ ಮಾಡುವುದೇ ಸರ್ವೋದಯ ವಾಗಿದೆ ಎಂದರು.

ಅಸ್ಪ್ರಶ್ಯತೆ,ಮೂಢನಂಬಿಕೆ ಬಿಟ್ಡು ಇವತ್ತು ಸ್ವಾಮೀಜಿ ಗಳ ನೇತೃತ್ವ ದಲ್ಲಿ ಚಳವಳಿ ರೂಪಿಸಬೇಕಾಗಿದೆ.ವೈಚಾರಿಕ ಚಿಂತನೆ ಮನೆಯಿಂದ ಆರಂಭವಾಗಲಿ ಸಾಮಾಜಿಕ ಪ್ರಜ್ಞೆ, ಪ್ರಶಸ್ತಿ ಪಡೆದವರು ಮಾಡಲಿ ಎಂದು ಧರಿ ಸಿರಿ ಮತ್ತು ಕರು ನಾಡು ಸಿರಿ ಪ್ರಶಸ್ತಿ ಪ್ರದಾನ ಮಾಡಿ ಗುಲಬರ್ಗಾ ವಿಶ್ವವಿದ್ಯಾಲಯ ಕುಲಸಚಿವ ಡಾ.ರಮೇಶ ಲಂಡನಕರ ಮಾತನಾಡಿದರು.

 ಹುಲಸೂರು ಡಾ.ಶಿವಾನಂದ ಸ್ವಾಮಿಗಳು ಇಲ್ಲಿ ಜ್ಞಾನದ ಕುಂಭವಾಗಿ ಸವೋದಯ ಸಮ್ಮೇಳನ ಎಂದರು.ಶರಣರ ವಿಚಾರ ಹೇಳಿ ಮೌಢ್ಯತೆ ಮಾಡುವುದು ಹಾಸ್ಯಸ್ಪದ ಎಂದರು.ಉಂಗರ ನೀಡುವ ಮಠ ಹಾರಕೂಡ ಶ್ರೀ ಗಳು. ಉರಿಲಿಂಗಪೆದ್ದಿ ಸ್ಮಾರಕ ಬೇಲೂರಿನಲ್ಲಿ ಸರಕಾರ ಸ್ಥಾಪಿಸಲಿ ಎಂದರು.

ಅನುಭವ ಮಂಟಪದ ಅಧ್ಯಕ್ಷ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ವೈಶಿಷ್ಟ್ಯ ಪೂರ್ಣ ಸಮ್ಮೇ ಳನ ಮಾಡಿ ಸರ್ವೊದಯ ತತ್ವ ಬುದ್ಧ,ಬಸವಣ್ಣ, 

ಶರಣರು ಬೋಧಿಸಿದ್ದು ಮಹತ್ವ ಎಂದರು.

ಸಾನಿಧ್ಯವಹಿಸಿದ ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು

ಹುಲಸೂರು ಡಾ.ಶಿವಾನಂದ ಮಹಾಸ್ವಾಮಿಗಳು ಪೂಜ್ಯ ಪಂಚಾಕ್ಷರಿ ಸ್ವಾಮೀಜಿಗಳಿಗೆ ತುಲಾ ಭಾರ ನೆರವೇರಿಸಿದರು.

ಧರಿ ಸಿರಿ ಪುರಸ್ಕೃತರು: ಶಿವಕುಮಾರ ಕೆರೂರಕರ್,ವಿಜಯಕುಮಾರ ಕಾಂಬಳೆ,ಡಾ.ವಿಜಯಕು ಮಾರ ಗೋಪಾಲೆ,ಭೀಮಾಶಂಕರ ಸಂಗೋಳಿ,ಅಂಬೇಡ್ಕರ್ ತಳಕೇರಿ,ಶೇಖಪಗಪ ಪವಾರ,ಡಾ. ಬಸಪ್ಪ ಮಹಾಂತಪ್ಪ ದುಗಾಣಿ,

ಕರುನಾಡು ಪ್ರಶಸ್ತಿ ಪುರಸ್ಕೃತರು: ಚಂದ್ರಶೇಖರ ನಾಗಾವಿ, ರಮೇಶ ಮಾರನ್,ಚನ್ಮವೀರ ಕಣ್ಣಗಿ,ಎಸ್.ಬಿ.ಕುಚಬಾಳ

ಡಾ.ಮಹಾಂತೇಶ ರಡೇರಹಟ್ಡಿ,ಶಿವಪ್ಪ ಹೊಸಮನಿ,ದೇವೇಂದ್ರಪ್ಪ ಅರಳಿ ಕಟ್ಟೆ ಅವರಿಗೆ ಪ್ರದಾಮ ಮಾಡಲಾಯಿತು.

ಸುಜಾತ ಟಿ.ಜಿ.ಕೆಪಿಟಿಸಿಎಲ್ ಕಲಬುರಗಿ ಅವರಿಗೆ ಗೌರವ‌ ಸನ್ಮಾನ,

ಮುಖಂಡರಾದ ಧನರಾಜ ತಾಡಂಪಳ್ಳಿ,ಅರ್ಜುನ ಕನಕ, ಮಲ್ಲಿನಾಥ ಹಿರೇಮಠ, ಪಂಚಾಕ್ಷರಿ ಹಿರೇಮಠ, ಅಪ್ಪಣ್ಣ ಜವಾಡ ಇತರರಿದ್ದರು.

ಜಗನ್ನಾಥ ಚಿಲ್ಲಾಬಟ್ಟೆ ಸ್ವಾಗತಿಸಿದರು ಸಂಯೋಜಕ ಡಾ.ಗವಿಸಿದ್ಧಪ್ಪ ಪಾಟೀಲ ಪ್ರಾಸ್ತಾವಿಕ ನುಡಿ ಆಡಿದರು.

ಡಾ.ರಾಜಕುಮಾರ ಮಾಳಗೆ,ಸಂಜುಕುಮಾರ ನಡುಕರ ನಿರೂಪಿಸಿದರು.ಗಣಪತಿ ರಾಧು ವಂದಿಸಿದರು