ಬೀಚಿ ಸ್ಮರಣೋತ್ಸವ ನಾಳೆ- ಪ್ರಾಣೇಶರಿಂದ ಹಾಸ್ಯ

ಬೀಚಿ ಸ್ಮರಣೋತ್ಸವ ನಾಳೆ- ಪ್ರಾಣೇಶರಿಂದ  ಹಾಸ್ಯ

ಬೀಚಿ ಸ್ಮರಣೋತ್ಸವ ನಾಳೆ- ಪ್ರಾಣೇಶ ಹಾಸ್ಯ 

ನರೇಗಲ್ಲ : ಪ್ರಸಿದ್ಧ ಸಾಹಿತ್ಯಿಕ, ವ್ಯಂಗ್ಯಕಾರ ಬೀಚಿಯವರ 13ನೇ ಸ್ಮರಣೋತ್ಸವ ಡಿಸೆಂಬರ್ 11ರಂದು ಸಂಜೆ 5:30ಕ್ಕೆ ಪಟ್ಟಣದ ಸಭಾಭವನದಲ್ಲಿ ನರೇಗಲ್ಲ ಹಿರೇಮಠದ ಆಶ್ರಯದಲ್ಲಿ ಜರುಗಲಿದೆ.

ಕಾರ್ಯಕ್ರಮಕ್ಕೆ ಹಾಲಕೆರೆಯ ಮುಪ್ಪಿನ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಲಿದ್ದು, ನರೇಗಲ್ಲ ಹಿರೇಮಠದ ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮೀಜಿಗಳು ಕಾರ್ಯಕ್ರಮದ ನೇತೃತ್ವ ವಹಿಸಲಿದ್ದಾರೆ. ರೋಣ ಶಾಸಕ ಜಿ.ಎಸ್. ಪಾಟೀಲ ಸ್ಮರಣೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸುವರು.

ಈ ಸಂದರ್ಭದಲ್ಲಿ ಹಾಸ್ಯ ಕಲಾವಿದ ಗಂಗಾವತಿ ಪ್ರಾಣೇಶ್, ನಗೆಭಾಷಣಕಾರರಾದ ಬಸವರಾಜ ಮಹಾಮನಿ, ನರಸಿಂಹ ಜೋಷಿ ಹಾಗೂ ಗದನ ಅನಿಲ ವೈದ್ಯ ತಮ್ಮ ಕಲಾತ್ಮಕ ಕಾರ್ಯಕ್ರಮಗಳೊಂದಿಗೆ ಭಾಗವಹಿಸಲಿದ್ದಾರೆ.

ಜಿಲ್ಲಾ ಮಟ್ಟದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ವೈದ್ಯ ಡಾ. ಜಿ.ಕೆ. ಕಾಳೆ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ ಆಯ್ಕೆಯಾದ ಪ್ರಭುಸ್ವಾಮಿ ಅರವಟಗಿಮಠ, ಕಾರ್ಯಕಾರಿಣಿ ಸದಸ್ಯರಾಗಿ ಆಯ್ಕೆಯಾದ ನಿಂಗರಾಜ ಬೇವಿನಕಟ್ಟಿ ಹಾಗೂ ಆದರ್ಶ ಕುಲಕರ್ಣಿ, ರಾಜ್ಯ ಮಟ್ಟದ ಕಾನೂನು ಪರೀಕ್ಷೆಯಲ್ಲಿ 7ನೇ ರ್ಯಾಂಕ್ ಗಳಿಸಿದ ವಿದ್ಯಾಶ್ರೀ ಬೇವಿನಕಟ್ಟಿ ಇವರಿಗೆ ಬೀಚಿ ಬಳಗದ ವತಿಯಿಂದ ಸನ್ಮಾನ ಜರುಗಲಿದೆ ಎಂದು ಬಳಗದ ನೂತನ ಅಧ್ಯಕ್ಷ ಶಿವಯೋಗಿ ಜಕ್ಕಲಿ ಮತ್ತು ಸಂಚಾಲಕ ಜೆ.ಎ. ಪಾಟೀಲ ತಿಳಿಸಿದ್ದಾರೆ.

ವರದಿ : ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ ಗದಗ