ಕರಾಟೆ ಸ್ಪರ್ಧೆಯಲ್ಲಿ ಹೆವೆನ್ ಫೈಟರ್ಸ್ ಸಂಸ್ಥೆಯ ವಿದ್ಯಾರ್ಥಿಗಳ ಮೆರೆದ ಕೀರ್ತಿ

ಕರಾಟೆ ಸ್ಪರ್ಧೆಯಲ್ಲಿ ಹೆವೆನ್ ಫೈಟರ್ಸ್ ಸಂಸ್ಥೆಯ ವಿದ್ಯಾರ್ಥಿಗಳ ಮೆರೆದ ಕೀರ್ತಿ

ಕರಾಟೆ ಸ್ಪರ್ಧೆಯಲ್ಲಿ ಹೆವೆನ್ ಫೈಟರ್ಸ್ ಸಂಸ್ಥೆಯ ವಿದ್ಯಾರ್ಥಿಗಳ ಮೆರೆದ ಕೀರ್ತಿ

– ಕಲಬುರಗಿ ವಿದ್ಯಾರ್ಥಿಗಳ ರಾಷ್ಟ್ರೀಯ ಮಟ್ಟದ ಸಾಧನೆಗೆ ಹರ್ಷ

ಕಲಬುರಗಿ: ನಗರದ ಶರಣಬಸವೇಶ್ವರ ಸಂಸ್ಥಾನದಲ್ಲಿ ನಡೆದ ರಾಷ್ಟ್ರಮಟ್ಟದ ಕರಾಟೆ ಪಂದ್ಯಾವಳಿಯಲ್ಲಿ ಶ್ರೀ ಶರಣಬಸವೇಶ್ವರ ವಿದ್ಯಾಸಂಸ್ಥೆ ಹಾಗೂ ಹೆವೆನ್ ಫೈಟರ್ಸ್ ಕರಾಟೆ ಸಂಸ್ಥೆಯ ವಿದ್ಯಾರ್ಥಿಗಳು ಹಲವು ಪದಕಗಳನ್ನು ಗಳಿಸಿ ರಾಜ್ಯಕ್ಕೆ ಗೌರವ ತಂದಿದ್ದಾರೆ.

ಈ ಸಾಧನೆಗೆ ಸಂಸ್ಥಾನದ ಪರಮ ಪೂಜ್ಯಶ್ರೀ ಚಿರಂಜೀವಿ ದೊಡ್ಡಪ್ಪ ಅಪ್ಪಾ, ಸಂಸ್ಥೆಯ ಕಾರ್ಯದರ್ಶಿಗಳಾದ ಬಸವರಾಜ ದೇಶಮುಖ ಮತ್ತು ಅಲ್ಲಂಪ್ರಭು ದೇಶಮುಖ ಅವರು ವಿದ್ಯಾರ್ಥಿಗಳಿಗೆ ಆಶೀರ್ವಚನ ನೀಡಿ ಅಭಿನಂದಿಸಿದರು.

ಸ್ಪರ್ಧೆಯಲ್ಲಿ ಪದಕ ವಿಜೇತರ ವಿವರ:

* ಅಭಿಷೇಕ ರಾಥೋಡ (ಶರಣಬಸವೇಶ್ವರ ವಿಜ್ಞಾನ ಕಾಲೇಜು) – ೨ ಬೆಳ್ಳಿ ಪದಕ

* ದಾಮಿನಿ ನಿಂಬಾಳಕರ್ (ಗೋದುತಾಯಿ ಕಾಲೇಜು) – ೧ ಕಂಚಿನ ಪದಕ

* ಭಾಗ್ಯವಂತಿ ಕಂದಗುಳ (ಮಾತೋಶ್ರೀ ಗೋದುತಾಯಿ ದೊಡ್ಡಪ್ಪ ಕಲಾ ಹಾಗೂ ವಿಜ್ಞಾನ ಕಾಲೇಜು)– ೧ ಕಂಚಿನ ಪದಕ

* ಶ್ರೇಷ್ಠ ಎಂ. ಬೀರನೂರ (ಚಂದ್ರಕಾಂತ ಪಾಟೀಲ ಶಾಲೆ) – ೧ ಕಂಚಿನ ಪದಕ

ವಿದ್ಯಾರ್ಥಿಗಳ ಈ ಅಸಾಧಾರಣ ಸಾಧನೆಗೆ ಹೆವೆನ್ ಫೈಟರ್ಸ್ ಕರಾಟೆ ಸಂಸ್ಥೆಯ ಅಧ್ಯಕ್ಷ, ಮುಖ್ಯ ತರಬೇತುದಾರ ಹಾಗೂ ಅಂತರಾಷ್ಟ್ರೀಯ ಕರಾಟೆ ಪಟು ಮನೋಹರ ಕುಮಾರ ಬೀರನೂರ, ಶರಣಬಸವೇಶ್ವರ ವಿಶ್ವವಿದ್ಯಾಲಯದ ದೈಹಿಕ ಶಿಕ್ಷಣ ನಿರ್ದೇಶಕಿ ಹಾಗೂ ಕರಾಟೆ ಪಟು ಡಾ. ವೈಶಾಲಿ ನಾಟೀಕಾರ, ಸಂಸ್ಥೆಯ ಸಹ ಕಾರ್ಯದರ್ಶಿ  ಹಣಮಂತ ಬಿರಾದಾರ ಹಾಗೂ ಇನ್ನಿತರರು ಹಾಜರಿದ್ದು ಅಭಿನಂದಿಸಿದರು.

ಈ ಸಾಧನೆಗೆ ಶ್ರೀ ಶರಣಬಸವೇಶ್ವರ ಸಂಸ್ಥೆಯ ಪ್ರಾಂಶುಪಾಲರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಹರ್ಷ ವ್ಯಕ್ತಪಡಿಸಿದ್ದಾರೆ. ಸಂಸ್ಥೆಯ ಕಾರ್ಯದರ್ಶಿ ಬಸವರಾಜ ದೇಶಮುಖ್ ಮಕ್ಕಳಿಗೆ ಗೌರವಿಸಿ ಸನ್ಮಾನಿಸಿದರು 

– ವರದಿ: ಜೇಟ್ಟೆಪ್ಪ ಎಸ್. ಪೂಜಾರಿ