ಶ್ರೀ ರೇಣುಕಾಚಾರ್ಯ ಶಾಲೆಯಲ್ಲಿವಿಜ್ಞಾನ ವಸ್ತು ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು
ನರೇಗಲ್ಲ: ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾ ಸರಸ್ವತಿ ಪೂಜೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯಿತು.
ಶ್ರೀ ಜಗದ್ಗುರು ಪಂಚಾಚಾರ್ಯ ಗ್ರಾಮೀಣ ಅಭಿವೃದ್ಧಿ ಶಿಕ್ಷಣ ಸಂಸ್ಥೆ, ಹಿರೇಮಠ, ನರೇಗಲ್ಲ ಇವರ ಅಧೀನದಲ್ಲಿರುವ ಶ್ರೀ ರೇಣುಕಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ, ನರೇಗಲ್ಲದಲ್ಲಿ ದಿನಾಂಕ 06-02-2026 ರಂದು ಪಾಲಕರ ಸಭೆ, ಮಹಾ ಸರಸ್ವತಿ ಪೂಜೆ, ವಿಜ್ಞಾನ ವಸ್ತು ಪ್ರದರ್ಶನ ಹಾಗೂ 7ನೇ ತರಗತಿ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭವು ಶಾಲಾ ಆವರಣದ ಹಿರೇಮಠ ಸಭಾಭವನದಲ್ಲಿ ನಡೆಯಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಹಿರೇಮಠ ನರೇಗಲ್ಲದ ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬ್ರಹ್ಮಕುಮಾರಿ ಸವಿತಕ್ಕನವರು, ಸಂಚಾಲಕರು – ಈಶ್ವರೀಯ ವಿಶ್ವವಿದ್ಯಾಲಯ, ನರೇಗಲ್ಲ ಹಾಗೂ ಶ್ರೀಮತಿ ಜ್ಯೋತಿ ಎಂ. ಬೇಲೇರಿ, ಸಿಆರ್‌ಪಿ, ನರೇಗಲ್ಲ ಉಪಸ್ಥಿತರಿದ್ದರು. ನಿರ್ಣಾಯಕರಾಗಿ ಎಸ್.ಎನ್. ಹೂಲಗೇರಿ, ಮುಖ್ಯೋಪಾಧ್ಯಾಯರು, ಎಸ್.ಎ.ವಿ. ಪ್ರೌಢಶಾಲೆ, ನರೇಗಲ್ಲ ಭಾಗವಹಿಸಿದ್ದರು.
ವಿದ್ಯಾರ್ಥಿಗಳು ವಿಜ್ಞಾನ ವಸ್ತು ಪ್ರದರ್ಶನದ ಮೂಲಕ ತಮ್ಮ ಸೃಜನಶೀಲತೆ, ವೈಜ್ಞಾನಿಕ ಚಿಂತನೆ ಹಾಗೂ ಕಲಿಕೆಯನ್ನು ಮನೋಜ್ಞವಾಗಿ ಪ್ರದರ್ಶಿಸಿ ಪ್ರಶಂಸೆ ಪಡೆದುಕೊಂಡರು.
ಇದೇ ಸಂದರ್ಭದಲ್ಲಿ ದಿನಾಂಕ 07-02-2026 ರಂದು ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವು ಶನಿವಾರ ಸಂಜೆ 4 ಗಂಟೆಗೆ ಶಾಲಾ ಆವರಣದ ಹಿರೇಮಠ ಸಭಾಭವನದಲ್ಲಿ ಜರುಗಿತು. ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಶ್ರೀ ಷ. ಬ್ರ. ಮಲ್ಲಿಕಾರ್ಜುನ ಶಿವಾಚಾರ್ಯ ಸ್ವಾಮಿಗಳು ವಹಿಸಿದ್ದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಗದಗ ಡಿಡಿಪಿಐ ಉಪನಿರ್ದೇಶಕರಾದ ಶ್ರೀ ಆರ್.ಎಸ್. ಬುರಡಿ ಅವರು, ಮಕ್ಕಳಲ್ಲಿ ಸಂಸ್ಕಾರ, ಶಿಸ್ತು ಹಾಗೂ ಸೃಜನಶೀಲತೆಯನ್ನು ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದು ತಿಳಿಸಿದರು. ಮುಖ್ಯ ಅತಿಥಿಗಳಾಗಿ ನಿವೃತ್ತ ಉಪನ್ಯಾಸಕ ಶ್ರೀ ಕೆ.ಪಿ. ಸಾಲಿಮಠ ಹಾಗೂ ಗಣ್ಯ ವ್ಯಾಪಾರಸ್ಥರಾದ ಶ್ರೀ ಎಂ.ಎಂ. ಪಲ್ಲೇದ (ಶೀಲ್ಡ್ ಕೊಡುಗೆದಾರರು) ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು, ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗ, ಪದಾಧಿಕಾರಿಗಳು ಹಾಗೂ ಶ್ರೀ ರೇಣುಕಾಚಾರ್ಯ ಪೂರ್ವ ಪ್ರಾಥಮಿಕ ಮತ್ತು ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
*ವರದಿ: ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ, ಕಲ್ಯಾಣ ಕಹಳೆ, ಗದಗ.*
