ಅಭಿನವ ಶ್ರೀಗಳ ಹುಟ್ಟು ಹಬ್ಬಕ್ಕೆ ಶುಭ ಹಾರೈಕೆ

ಅಭಿನವ ಶ್ರೀಗಳ ಹುಟ್ಟು ಹಬ್ಬಕ್ಕೆ ಶುಭ ಹಾರೈಕೆ
ಮಾದನ ಹಿಪ್ಪರಗಿ: ಆಳಂದ ತಾಲೂಕಿನ ಮಾದನ ಹಿಪ್ಪರಗಿಯ ಶ್ರೀ ಶಿವಲಿಂಗೇಶ್ವರ ವಿರಕ್ತ ಮಠದ ಶ್ರೀ ಮ .ನಿ .ಪ್ರ ಅಭಿನವ ಶಿವಲಿಂಗ ಮಾಹಾ ಸ್ವಾಮಿಗಳ 32ನೇ ಹುಟ್ಟುಹಬ್ಬವನ್ನು ಸರಳವಾಗಿ ಆಚರಿಸಲಾಯಿತು. ಪ್ರಯುಕ್ತ ತಾಲೂಕ ಕ. ಜಾ.ಪ ಅಧ್ಯಕ್ಷ ಅಪ್ಪಾಸಾಹೇಬ ತೀರ್ಥೆ ಮಾತನಾಡಿ ಪೂಜ್ಯರು ಸಾಂಸ್ಕೃತಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಚಟುವಟಿಕೆಗಳನ್ನು ಮಾಡುವ ಮೂಲಕ ಶ್ರೀಮಠದ ಸಾತ್ವಿಕ ಪರಿಸರ ಉನ್ನತಿಕರಿಸಿದ್ದಾರೆ. ಕಿರಿದಾದ ವಯಸ್ಸಿನಲ್ಲಿ ಹಿರಿದಾದ ಕಾರ್ಯ ಮಾಡುತ್ತ ಸಾಮಾಜಿಕ ಕಳಕಳಿ ಹೊಂದಿದವರಾಗಿದ್ದಾರೆ ಎಂದು ಅಬಿಪ್ರಾಯಪಟ್ಟರು. ಅ.ಕ.ವಿ. ಮಹಾ ಸಭಾ ತಾಲೂಕ ಅಧ್ಯಕ್ಷ ಬಸವರಾಜ ವಿಶ್ವಕರ್ಮ, ಕಲ್ಯಾಣಿ ತುಕಾಣೆ, ಶಿವಲಿಂಗ ಮಂಟಗಿ, ವೀರಯ್ಯ ಸ್ವಾಮಿ, ವೀರೇಶ ಪೋದ್ದಾರ, ಡಾ. ಮೋನಪ್ಪಾ ಸುತಾರ, ಚಂದ್ರು ಹಡಲಗಿ, ಸಿದ್ರಾಮಪ್ಪ ಪೋ.ಪಾಟೀಲ, ಮಲ್ಲಿನಾಥ ಉಡಗಿ, ಶಾಂತಮಲ್ಲಯ್ಯ ಸ್ವಾಮಿ, ಕಲ್ಯಾಣಿ ತೋಳನೂರ, ಬಸವರಾಜ ಓನಾಮಶೆಟ್ಟಿ ಮತ್ತು ಕುಮಾರೇಶ್ವರ ಪ-ಪೂ ಕಾಲೇಜಿನ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ವರದಿ ಅವಿನಾಶ್ ದೇವನೂರು