ಹಿರಿಯ ಚಿಂತಕ ಗೋಪಾಲಕೃಷ್ಣ ನೆಕ್ಕಿತಪುಣಿ ಹೇಳಿಕೆ:

ಹಿರಿಯ ಚಿಂತಕ ಗೋಪಾಲಕೃಷ್ಣ ನೆಕ್ಕಿತಪುಣಿ ಹೇಳಿಕೆ:

ಹಿರಿಯ ಚಿಂತಕ ಗೋಪಾಲಕೃಷ್ಣ ನೆಕ್ಕಿತಪುಣಿ ಹೇಳಿಕೆ: 

ಭಾರತೀಯ ಕುಟುಂಬ ವ್ಯವಸ್ಥೆಗೆ ತರವಾಡು ಮನೆತನಗಳಿಂದ ಶಕ್ತಿ

ವಿಟ್ಲ : ತರವಾಡು ಮನೆತನಗಳಿಂದ ಭಾರತೀಯ ಕುಟುಂಬ ವ್ಯವಸ್ಥೆಗೆ ಶಕ್ತಿ ತುಂಬಿದೆ ಎಂದು ಹಿರಿಯ ಚಿಂತಕರು ಹಾಗೂ ನೆಕ್ಕಿತಪುಣಿ ತರವಾಡು ಮನೆತನದ ಮುಖ್ಯಸ್ಥರಾದ ಗೋಪಾಲಕೃಷ್ಣ ನೆಕ್ಕಿತಪುಣಿ ಹೇಳಿದರು. 

    ವಿಟ್ಲ ಸಮೀಪದ ಅಳಿಕೆಯ ನೆಕ್ಕಿತಪುಣಿ ಕರಂಬೇರ ತರವಾಡಿನಲ್ಲಿ ಫೆ. 15 ರಂದು ನಡೆದ ವಾರ್ಷಿಕ ಸಭೆಯಲ್ಲಿ ತರವಾಡಿನವರನ್ನುದ್ದೇಶಿಸಿ ಮಾತನಾಡುತ್ತಾ ಕರಾವಳಿಯಲ್ಲಿರುವ ತರವಾಡು ಮನೆತನಗಳಿಂದ ಸಂಪ್ರದಾಯ ಹಾಗೂ ಪದ್ಧತಿಗಳ ರಕ್ಷಣೆಯ ಜೊತೆಗೆ ಕುಟುಂಬ ವ್ಯವಸ್ಥೆ ಗಟ್ಟಿಗೊಂಡು ಒಗ್ಗಟ್ಟು ಬೆಳೆಯಲು ಸಾಧ್ಯವಾಗಿದೆ. ಬಿಲ್ಲವರ ತರವಾಡು ಮನೆತನಗಳ ಮೂಲಕ ತಮ್ಮ ಜನಾಂಗದ ಅಸ್ಮಿತೆ ಉಳಿಸಲು ನೀಡಿದ ಕೊಡುಗೆ ಅಪಾರವಾಗಿದೆ. ಯುವ ಜನಾಂಗಕ್ಕೆ ತರವಾಡು ಮನೆಗಳ ಆಚರಣೆ, ದೈವ ದೇವರುಗಳ ಬಗ್ಗೆ ನಂಬಿಕೆ, ಶ್ರದ್ಧೆ ಹೆಚ್ಚಾಗಲು ಹೆಚ್ಚಿನ ಗಮನಹರಿಸಬೇಕಾಗಿದೆ.ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶವನ್ನು ಮೈಗೂಡಿಸಿ ಎಲ್ಲರೂ ಶಿಕ್ಷಣ ಪಡೆದು ಸಶಕ್ತ ಕುಟುಂಬ ಕಟ್ಟಲು ಪ್ರಯತ್ನಿಸಬೇಕು. ಯಾವುದೇ ಅಹಿತಕರ ಚಟುವಟಿಕೆಗಳು ಹಾಗೂ ಕ್ಷುಲ್ಲಕ ರಾಜಕಾರಣಕ್ಕೆ ಬಲಿಯಾಗದೆ ಚಾರಿತ್ರ್ಯ ನಿರ್ಮಾಣದೊಂದಿಗೆ ವ್ಯಕ್ತಿತ್ವವನ್ನು ಬೆಳೆಸಿ ತರವಾಡುಗಳ ಗೌರವ ಹೆಚ್ಚಾಗುವಂತೆ ಪ್ರಯತ್ನಿಸಬೇಕು ಎಂದು ಕರೆ ನೀಡಿದರು. 

    ರಾಣಿ ಅಬ್ಬಕ್ಕನ ಆಳ್ವಿಕೆಯಲ್ಲಿ ಉಳ್ಳಾಲ ಭಾಗದ ಕರಂಬೇರ ಮೂಲದ ಬಿಲ್ಲವರನ್ನು ವಿಟ್ಲ ಸೀಮೆಗೆ ಕಳುಹಿಸಿದ ರಾಣಿ ಅಬ್ಬಕ್ಕನ ಹಾಗೂ ವಿಟ್ಲ ಅರಸರ ಕೃಪಾಶೀರ್ವಾದದಿಂದ ನೆಕ್ಕಿತಪುಣಿಯಲ್ಲಿ ನೆಲೆಯೂರಿದ ಕೃಷಿಕ ಮನೆತನದ ಕರಂಬೇರ ತರವಾಡಿನ ವಾರ್ಷಿಕ ಕಾರ್ಯಕ್ರಮದಲ್ಲಿ ಇದೇ ತರವಾಡಿನ ಉಪ್ಪಿನಂಗಡಿ ಸಮೀಪದ ಕಲ್ಲೇರಿ ವಿಭಾಗದ 76 ಮಂದಿ ಕುಟುಂಬ ಸದಸ್ಯರನ್ನು ಮೂಲ ತರವಾಡಿನ ಜೊತೆಗೆ ಸೇರ್ಪಡೆಗೊಳಿಸುವ ವಿಧಿ ವಿಧಾನವನ್ನು ಗೋಪಾಲಕೃಷ್ಣ ನೆಕ್ಕಿತ ಪುಣಿ ನಡೆಸಿ ಕೊಟ್ಟರು. ಗಣ ಹೋಮ, ಆಶ್ಲೇಷ ಬಲಿ, ನಾಗತಂಬಿಲ, ಹರಿಸೇವೆ ಮುಂತಾದ ಧಾರ್ಮಿಕ ವಿಧಿ ವಿಧಾನಗಳು ನಡೆದವು. 

ಕ್ರೀಡಾ ತಾರೆ-ಪೂಜಾರಿಗಳಿಗೆ ಗೌರವ ಸನ್ಮಾನ

ತರವಾಡು ಮನೆತನದ ಪೂಜಾರ್ಮೆ ವಹಿಸಿ ನಿಷ್ಠೆಯಿಂದ ಕಾರ್ಯನಿರ್ವಹಿಸುತ್ತಿರುವ ಅನಿಲ್, ರವಿ,ಆನಂದ, ರಾಜೇಶ, ಸುಂದರ ಹಾಗೂ ಲೋಕೇಶ್ ಅವರ ಸೇವೆಯನ್ನು ಗೌರವಿಸಿ ಶಾಲು ಹಾಗೂ ಸ್ಮರಣಿಕೆ ನೀಡಿ ಸನ್ಮಾನಿಸಲಾಯಿತು. ರಾಘವೇಂದ್ರ ಪೂಜಾರಿ ಕಲ್ಲೇರಿ ಹಾಗು ವಾರಿಜಾ ದಂಪತಿಗಳು, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಹಣಾಧಿಕಾರಿ ಡಾ. ಸದಾನಂದ ಪೆರ್ಲ ಮತ್ತು ಕೆ ಎ ಎಸ್ ಹಿರಿಯ ಅಧಿಕಾರಿ ಪ್ರಮೀಳಾ ಎಂ.ಕೆ, ಕಿರಣ್ ಬೆಂಗಳೂರು, ಹರಿಣಾಕ್ಷಿ ಕಾಶಿಪಟ್ಟಣ ಮತ್ತಿತರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

     ನೆಕ್ಕಿತಪುಣಿ 0ತರವಾಡು ಮನೆತನದ ಕ್ರೀಡಾತಾರೆ, ದಕ್ಷಿಣ ಆಫ್ರಿಕಾದ ಕಿರಿಗಿಸ್ತಾನದಲ್ಲಿ ಇತ್ತೀಚೆಗೆ ನಡೆದ ಅಂತರಾಷ್ಟ್ರೀಯ ಜೂನಿಯರ್ ಪವರ್ ಲಿಫ್ಟಿಂಗ್ ನಲ್ಲಿ ಬಂಗಾರದ ಪದಕ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ನಡೆದ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಬಂಗಾರದ ಪದಕ ಹಾಗೂ ಕಾಮನ್ವೆಲ್ತ್ ಚಾಂಪಿಯನ್ ಆಗಿ ಹೊರಹೊಮ್ಮಿದ ಕು/ ನಿಶಾ ಮೋಹನ್ ಗೆ ತರವಾಡು ವತಿಯಿಂದ ಗೌರವದ ಸನ್ಮಾನ ನಡೆಯಿತು.

    ಬೆಂಗಳೂರಿನ ನ್ಯಾಯವಾದಿಗಳಾದ ಮೋಹನ್ ಹಾಗೂ ನಳಿನ ದಂಪತಿಗಳ ಸುಪುತ್ರಿಯಾದ ನಿಶಾ ಮೋಹನ್ ಬೆಂಗಳೂರು ಜೈನ್ ಕಾಲೇಜಿನ ವಿದ್ಯಾರ್ಥಿನಿ, ಈಗ ವಕೀಲ ವೃತ್ತಿ ವ್ಯಾಸಂಗ ನಿರತಳಾಗಿದ್ದಾಳೆ. ಉತ್ತಮ ಕ್ರೀಡಾಪಟು ಆಗಿರುವ ನಿಶಾ ಮೋಹನ್ ಅವರನ್ನು ಬೆಂಗಳೂರಿನ ಕಾಲೇಜ್ ಆಡಳಿತ ಮಂಡಳಿಯು ಕೂಡ ಗೌರವಿಸಿದೆ. ಗುಲ್ಬರ್ಗ ವೈದ್ಯಕೀಯ ಕಾಲೇಜಿನ ಮುಖ್ಯ ಆಡಳಿತಾಧಿಕಾರಿ ಪ್ರಮೀಳಾ ಎಂ.ಕೆ ತರವಾಡಿನ ಪರವಾಗಿ ಶಾಲು ಹಾಗೂ ಸ್ಮರಣಿಕೆ ನೀಡಿ ಗೌರವಿಸಿದರು.

  ತರವಾಡು ವಿದ್ಯಾರ್ಥಿ ಪುರಸ್ಕಾರ ಘೋಷಣೆ

            ನೆಕ್ಕಿತಪುಣಿ ತರವಾಡಿನ ಕುಟುಂಬಸ್ಥರ ಮಕ್ಕಳು ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿ ಪರೀಕ್ಷೆಯಲ್ಲಿ ಅತ್ಯಧಿಕ ಅಂಕ ಪಡೆದರೆ ಒಟ್ಟು 15 ಮಂದಿ ಭಾವಂತ ವಿದ್ಯಾರ್ಥಿಗಳಿಗೆ ತರವಾಡು ವಿದ್ಯಾರ್ಥಿ ಪುರಸ್ಕಾರ ನೀಡಿ ಗೌರವಿಸಲಾಗುವುದು. 2025 ರಲ್ಲಿ ನಡೆಯುವ ಪರೀಕ್ಷೆಯಲ್ಲಿ ತೇರ್ಗಡೆ ಹೊಂದುವ 15 ಮಂದಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಗೋಪಾಲಕೃಷ್ಣ ನೆಕ್ಕಿತಪುಣಿ ಪ್ರಕಟಿಸಿದರು. 

    ಈ ಸಂದರ್ಭದಲ್ಲಿ ಡಾ. ಸದಾನಂದ ಪೆರ್ಲ ಮಾತನಾಡಿ ಕಲ್ಲೇರಿ ಕುಟುಂಬಸ್ಥರನ್ನು ಮೂಲ ತರವಾಡಿನ ಜೊತೆ ಸೇರ್ಪಡೆಗೊಳಿಸಿರುವ ಘಟನೆಯು ಏಳು ತಲೆಮಾರಿನ ನಂತರದ ಒಂದು ಐತಿಹಾಸಿಕ ಘಟನೆಯಾಗಿದೆ ಎಂದು ಬಣ್ಣಿಸಿದರು. ವೇದಿಕೆಯಲ್ಲಿ ನಿವೃತ್ತ ಶಿಕ್ಷಕರಾದ ಯಶೋಧರ ಬಂಗೇರ, ಸುಭಾಷ್ ಚಂದ್ರ ಪುತ್ತೂರು ಬಾಲಕೃಷ್ಣ ಎನ್. ಎಲ್, ರಾಜೇಶ್ ನೆಕ್ಕಿತಪುಣಿ, ಅಚ್ಯುತ ಮರಕ್ಕೂರು,

ಪುರುಷೋತ್ತಮ ಪೆರ್ಲ, ನಿತ್ಯಾನಂದ, ಪೃಥ್ವಿ, ವಾಸಂತಿ, ಮೀರಾ ಗೋಪಾಲಕೃಷ್ಣ,ರವಿ ಕುಂಜಲಡ್ಡ, ಚಂದ್ರಶೇಖರ ಕಲ್ಲೇರಿ, ಲಲಿತಾ ಮಜಲಡ್ಡ, ವಾರಿಜಾ ಅಣ್ಣಿ ಪೂಜಾರಿ, ಚಂದ್ರಶೇಖರ ಕಲ್ಲೇರಿ, ಅಮ್ಮಿ ಪೂಜಾರಿ ದಯಾನಂದ ಮಜಲಡ್ಡ, ಲೋಕೇಶ್ ಕುಂಜೂರು,

ವನಿತಾ ಪ್ರವೀಣ್ ತೋರಣಕಟ್ಟೆ, ಜನಾರ್ಧನ ಮರಕ್ಕೂರು, ಗಣೇಶ ಮರ್ದಾಳ, ದಿನೇಶ ಅಲೆಕ್ಕಾಡಿ, ಮುರಹರಿ ಮರಕ್ಕೂರು, ಕೃಷ್ಣಪ್ರಸಾದ್ ಮತ್ತಿತರರು ಉಪಸ್ಥಿತರಿದ್ದರು. ನಿವೃತ್ತ ಮುಖ್ಯೋಪಾಧ್ಯಾಯರಾದ ಅಶೋಕ್ ಬಾಡೂರು ಸ್ವಾಗತಿಸಿ ಧನ್ಯವಾದವಿತ್ತರು.

ಫೋಟೋ ಶೀರ್ಷಿಕೆ:

1.ಕರಂಬೇರ ಮೂಲ ತರವಾಡು ಸೇರ್ಪಡೆಗೊಂಡ ಕಲ್ಲೇರಿ ವಿಭಾಗ ಕುಟುಂಬಸ್ಥರು

2.ನಿಶಾ ಮೋಹನ್ ಅವರಿಗೆ ಕೆ ಎ ಎಸ್ ಹಿರಿಯ ಅಧಿಕಾರಿ ಪ್ರಮೀಳಾ ಎಂ ಕೆ ಸನ್ಮಾನಿಸಿದರು

3. ನೆಕ್ಕಿತಪುಣಿ ತರವಾಡು ಪೂಜಾರಿಗಳ ಸನ್ಮಾನ

4. ಧರ್ಮ ದೈವಗಳ ನೇಮೋತ್ಸವ