ಜಾನಪದ ಗ್ರಾಮೀಣ ಜನರ ಜೀವಾಳ - ದೇವಕ್ಕೆಮ್ಮ

ಜಾನಪದ ಗ್ರಾಮೀಣ ಜನರ ಜೀವಾಳ - ದೇವಕ್ಕೆಮ್ಮ
ಶಹಪುರ : ಆಧುನಿಕತೆ ಭರಾಟೆ ಹಾಗೂ ಪಾಶ್ಚಾತ್ಯ ಸಂಸ್ಕೃತಿಯಿಂದ ನಮ್ಮ ಪೂರ್ವಜರು ಕಟ್ಟಿಕೊಟ್ಟಿರುವ ಜಾನಪದ ಸಾಹಿತ್ಯ ಇಂದು ಮರೆಯಾಗುತ್ತಿದೆ ಎಂದು ಹಿರಿಯ ಜಾನಪದ ಕಲಾವಿದೆ ದೇವಕೆಮ್ಮ ಪೊ.ಬಿರಾದರ ಕಳವಳ ವ್ಯಕ್ತಪಡಿಸಿದರು.ಇತ್ತೀಚಿಗೆ ಬೆಂಗಳೂರಿನಲ್ಲಿ ಲಿವಿಂಗ್ ಲೈಟ್ಲಿ ಸಂಸ್ಥೆ ಆಯೋಜಿಸಿದ "ಸ್ವದೇಶಿ ಸಂಸ್ಕೃತಿ ಉಳಿಸಿ" ಶಿಬಿರದಲ್ಲಿ ಭಾಗವಹಿಸಿ ಜಾನಪದ ಗೀತೆಗಳು ಮನಬಿಚ್ಚಿ ತಮ್ಮದೇ ಶೈಲಿಯಲ್ಲಿ ಹಾಡುವುದರ ಮೂಲಕ ನೆರೆದಿರುವ ಜನರನ್ನು ನಿಬ್ಬೆರಗುಗೊಳ್ಳುವಂತೆ ಮಾಡಿದರು. ದೇವಚಮ ಪೊಲೀಸ್ ಬಿರಾದಾರ ಇವರು ಮೂಲತಃ ಶಹಾಪುರ ತಾಲೂಕಿನ ಸೈದಾಪುರ ಗ್ರಾಮದವರಾಗಿದ್ದು, ಜಾನಪದವನ್ನು ತಮ್ಮ ಜೀವಾಳವನ್ನಾಗಿ ಮಾಡಿಕೊಂಡು, ಈ ಕ್ಷೇತ್ರಕ್ಕೆ ಸಾಕಷ್ಟು ಕೆಲಸ ನಿರ್ವಹಿಸಿದ ಶ್ರೇಯಸ್ಸು ಇವರಿಗೆ ಸಲ್ಲುತ್ತದೆ.
ಅಲ್ಲದೆ ಪ್ರಸ್ತುತ ದಿನಮಾನಗಳಲ್ಲಿ ಮನುಷ್ಯ ಯಾಂತ್ರಿಕ ಬದುಕಿಗೆ ವಾಲಿ ಸಂಪೂರ್ಣ ನೆಮ್ಮದಿ ಕಳೆದುಕೊಂಡು ಭಾವನೆಗಳಿಲ್ಲದೆ ಬರುಡಾಗಿ ಬದುಕುತ್ತಿದ್ದಾನೆ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಹಿತ್ಯದ ಮೂಲ ಬೇರಾದ ಜಾನಪದ ಸಾಹಿತ್ಯ ಪ್ರತಿಯೊಬ್ಬರಿಗೂ ಅಚ್ಚುಮೆಚ್ಚನದು,ಜಾನಪದ ಕಲೆ, ಸಂಸ್ಕೃತಿ,ಮುಂದಿನ ಪೀಳಿಗೆಗೆ ಪರಿಚಯಿಸುವ ನಿಟ್ಟಿನಲ್ಲಿ ಸರಕಾರ ಹಾಗೂ ಸಂಘ ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ ಎಂದು ನುಡಿದರು.
ನಮ್ಮ ಪೂರ್ವಜರು ಹೊಲ ಗದ್ದೆಗಳಲ್ಲಿ ಬಿತ್ತನೆ ಮಾಡುವಾಗ, ನಾಟಿ ಮಾಡುವಾಗ,ರಾಶಿ ಮಾಡುವಾಗ ಮದುವೆ ಸಮಾರಂಭಗಳಲ್ಲಿ,ಮತ್ತು ಫಸಲು ಕೊಯ್ಯುವಾಗ ಆಡುಭಾಷೆಯಲ್ಲಿ ಕಟ್ಟಿದ ಪದಗಳೇ ಇಂದು ಜಾನಪದ ಸಾಹಿತ್ಯವಾಗಿದೆ,ಕೇವಲ ಜಾನಪದ ಹಬ್ಬ,ಜಾನಪದ ಜಾತ್ರೆ,ಜಾನಪದ ದಿನಾಚರಣೆ ಹಮ್ಮಿಕೊಂಡರೆ ಸಾಲದು ಅದರ ಬದಲಾಗಿ ಪ್ರತಿಯೊಬ್ಬರು ಮೊಬೈಲ್ ಗೀಳನ್ನು ಬಿಟ್ಟು,ನಮ್ಮ ಗ್ರಾಮೀಣ ಜನರ ಜೀವನಾಡಿಯಾದ ಗ್ರಾಮೀಣ ಸೊಗಡಿನ ಸಾಂಸ್ಕೃತಿಕ ಪರಂಪರೆಯ ಜಾನಪದ ಕಲೆ ಉಳಿವಿಗಾಗಿ ಶ್ರಮಿಸೋಣ ಎಂದು ನುಡಿದರು. ಸಂದರ್ಭದಲ್ಲಿ ಸಂಸ್ಥೆಯ ಮುಖ್ಯಸ್ಥರಾದ ಸುಷ್ಮಾ,ಶಿಬಿರದ ಸಂಯೋಜಕರಾದ ಶಿಲ್ಪಾ ಮುಡುಬಿ, ಮಹೇಶ್ ಅಲ್ಲೂರ ಸೇರಿದಂತೆ ಇನ್ನಿತರ ಕಲಾವಿದರು.