ವಾಡಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ

ವಾಡಿಯಲ್ಲಿ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಆಚರಣೆ
ವಾಡಿ: ಪಟ್ಟಣದ ಬಿಜೆಪಿ ಕಛೇರಿಯಲ್ಲಿ ಶಿವಶರಣೆ ಹೇಮರೆಡ್ಡಿ ಮಲ್ಲಮ್ಮ ಜಯಂತಿ ಪ್ರಯುಕ್ತ ಹೇಮರೆಡ್ಡಿ ಮಲ್ಲಮ್ಮ ಭಾವಚಿತ್ರಕ್ಕೆ ಬಿಜೆಪಿ ಮುಖಂಡರು ಪುಷ್ಪ ನಮನ ಸಲ್ಲಿಸಿದರು.
ಈ ವೇಳೆ ಬಿಜೆಪಿ ಅಧ್ಯಕ್ಷ ವೀರಣ್ಣ ಯಾರಿ ಮಾತನಾಡಿ
ಹೇಮರೆಡ್ಡಿ ಮಲ್ಲಮ್ಮ ಅವರು ಸೂರ್ಯ ಚಂದ್ರ ಇರುವವರೆಗೂ ಸಮಾಜಕ್ಕೆ ಅನ್ನದ ಕೊರತೆ ಬರಬಾರದು ಎಂದು ಶಿವನಿಂದ ವರ ಪಡೆದ ಮಹಾತಾಯಿ ಎಂದರು.
ಅವರ ತತ್ವಾದರ್ಶಗಳೊಂದಿಗೆ ಬದುಕು ಸಾಗಿಸಿದರೆ ಆತ್ಮದ ಉನ್ನತಿ ಸಾಧ್ಯ.ಶ್ರೀಮಂತಿಕೆ ಅಂದರೆ ಹಣ, ಚಿನ್ನವಲ್ಲ ಪರಸ್ಪರ ಪ್ರೀತಿ ಗೌರವದಿಂದ ಕಾಣುವುದು. ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಂಡು, ಎಲ್ಲರೊಂದಿಗೆ ಸಹಬಾಳ್ವೆಯಿಂದ ಬದುಕುವಂತೆ ಮಲ್ಲಮ್ಮ ತಾಯಿ ಬೋಧಿಸಿದ್ದಾರೆ.ಹೇಮರೆಡ್ಡಿ ಮಲ್ಲಮ್ಮನವರು ಸಮಾಜದ ಎಲ್ಲಾ ಮಹಿಳೆಯರಿಗೂ ಇಂದಿಗೂ ಆದರ್ಶಪ್ರಾಯರಾಗಿದ್ದಾರೆ. ಸಂಸಾರದ ಎಲ್ಲ ನೋವು ನಲಿವುಗಳನ್ನು ಅನುಭವಿಸಿದ ಮಲ್ಲಮ್ಮ ತಾಯಿ ಇತರರಿಗಿಂತ ಭಿನ್ನವಾಗಿ ನಿಲ್ಲಲು ಅವರೊಳಗಿನ ಆಧ್ಯಾತ್ಮಿಕ ಶಕ್ತಿಯೇ ಮೂಲ ಕಾರಣ ಆ ಒಂದು ಭಕ್ತಿಯ ಶಕ್ತಿ ಯಿಂದ ತಾಯಿಗೆ ಶಿವನ ಸಾಕ್ಷಾತ್ಕಾರ ವಾಯಿತು ಎಂದು ಹೇಳಿದರು.
ಈ ಸಂದರ್ಭದಲ್ಲಿ ಯುವ ಮೂರ್ಚಾ ಅಧ್ಯಕ್ಷ ಭಾಗಣ್ಣ ದೊರೆ,ಮುಖಂಡರಾದ ವೀರಣ್ಣಗೌಡ ಮೇಲಸಿಮಿ,ಶಿವಶಂಕರ ಕಾಶೆಟ್ಟಿ,ನಾಗರಾಜ ಗೌಡ ಗೌಡಪ್ಪನೂರ,ಮಲ್ಲಿಕಾರ್ಜುನ ಸಾತಖೇಡ,ವಿಶ್ವನಾಥ ರಡ್ಡಿ,ನಾಗಣ್ಣ ಗೌಡ ಕಡಬೂರ,ನಿರ್ಮಲ ಇಂಡಿ, ಯಂಕಮ್ಮ ಗೌಡಗಾಂವ, ಉಮಾಭಾಯಿ ಗೌಳಿ,ಬಾಲರಾಜ ಪಗಡಿಕರ,ಮೋದಿನ್ ಕಮರವಾಡಿ ಸೇರಿದಂತೆ ಇತರರು ಇದ್ದರು.