ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ.

ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಅವಿರೋಧ ಆಯ್ಕೆ.
ಚಿಟಗುಪ್ಪಾ : ತಾಲೂಕಿನ ಕಂದಗೋಳ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ನಿಯಮತ ಇದರ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಕ್ಕೆ ಇತ್ತಿಚೆಗೆ ಚುನಾವಣೆ ಜರುಗಿತ್ತು.
ಅಧ್ಯಕ್ಷ ಸ್ಥಾನಕ್ಕೆ ರಾಜಶೇಖರ ದೇವಣಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಅನಿಲಕುಮಾರ ಸಿಂದಗಿರಿ ರವರು ಮಾತ್ರ ನಾಮಪತ್ರ ಸಲ್ಲಿಸಿದರು.
ತರುವಾಯ ಇವರ ಎದುರಾಳಿ ಯಾರು ಇಲ್ಲದ ಕಾರಣದಿಂದ ಅಧ್ಯಕ್ಷರಾಗಿ ರಾಜಶೇಖರ ದೇವಣಿ ಹಾಗೂ ಉಪಾಧ್ಯಕ್ಷರಾಗಿ ಅನಿಲಕುಮಾರ ಸಿಂದಗಿರಿ ರವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದರು.
ಈ ಸಂದರ್ಭದಲ್ಲಿ ಸಂಘದ
ನಿರ್ದೇಶಕರುಗಳಾದ ಸಿದ್ದರಾಮಯ್ಯ ಹಿರೇಮಠ,
ಶಂಕರ ದೇವಣಿ, ಭೀಮರೆಡ್ಡಿ ಮಂಗಲಗಿ, ಝರೇಪ್ಪಾ ಈ ಮೇತ್ರೆ,
ಪಾರ್ವತಿ ನಾಗನಕೇರಾ, ಭಾಗೀರಥಿ ಮರಪಳ್ಳಿ, ಸುಶೀಲಮ್ಮ ಮುತ್ತಂಗಿ,
ಸಂತೋಷಿ ಕರಡಿ ಉಪಸ್ಥಿತರಿದ್ದರು.
ಇವರ ಆಯ್ಕೆಗೆ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.