ದಾಮೋದರ ರಘೋಜಿ ಶಾಲೆಯ ವಿದ್ಯಾರ್ಥಿಗಳ ಸಂಭ್ರಮಕಾರಿ ನಾಟ್ಯವಿಜಯ

ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳು ಅಂತರರಾಷ್ಟ್ರೀಯ ರಂಗೋತ್ಸವ' ಸ್ಪರ್ಧೆಯಲ್ಲಿ ಹಲವಾರು ಬಹುಮಾನ ಪಡೆದಿದ್ದಕ್ಕೆ ಅಭಿನಂದನೆ
ಕಲಬುರಗಿ: ನಗರದ ಶ್ರೀ ದಾಮೋದರ ರಘೋಜಿ ಮೆಮೋರಿಯಲ್ ಶಾಲೆಯ ವಿದ್ಯಾರ್ಥಿಗಳು 2024-25 ನೇ ಸಾಲಿನ ಮುಂಬೈನಲ್ಲಿ ಆಯೋಜಿಸಿದಂತಹ 'ಅಂತರರಾಷ್ಟ್ರೀಯ ರಂಗೋತ್ಸವ' ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಬಹುಮಾನಗಳನ್ನು ಪಡೆದಿದ್ದಾರೆ. ಅದರಲ್ಲಿ ಮೊದಲನೆಯದಾಗಿ ಬಣ್ಣ ತುಂಬುವ ಸ್ಪರ್ಧೆಯಲ್ಲಿ ನಾಲ್ಕು ವಿದ್ಯಾರ್ಥಿಗಳು ಟ್ರೋಫಿಗಳನ್ನು ಪಡೆದಿದ್ದರೆ, ಐದು ವಿದ್ಯಾರ್ಥಿಗಳು ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಹಾಗೂ ಇಬ್ಬರು ವಿದ್ಯಾರ್ಥಿಗಳು ಸಮಾಧಾನಕರ ಬಹುಮಾನವನ್ನು ಪಡೆದಿದ್ದಾರೆ. ಹಾಗೆಯೇ ಕೈ ಬರಹ ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ, ಕಾರ್ಟೂನ್ ರಚನಾ ಸ್ಪರ್ಧೆಯಲ್ಲಿ ಒಂದು ಚಿನ್ನದ ಪದಕ, ಟ್ಯಾಟೂ ರಚನಾ ಸ್ಪರ್ಧೆಯಲ್ಲಿ ಸಮಾಧಾನಕರ ಬಹುಮಾನವನ್ನು ಪಡೆದು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಶ್ರೀ ದಾಮೋದರ ರಘೋಜಿ ಶಾಲೆಯ ಅಧ್ಯಕ್ಷರಾದ ಶ್ರೀರಾಮಚಂದ್ರ ಡಿ. ರಘೋಜಿ, ಕಾರ್ಯದರ್ಶಿಗಳಾದ ಶ್ರೀಮತಿ ಮೀರಾ ಆರ್. ರಘೋಜಿ, ಟ್ರಸ್ಟಿನವರಾದ ನಂದಿನಿ ಆರ್. ರಘೋಜಿ, ಮನೋಶ್ರೀ ಆರ್. ರಘೋಜಿ, ವಿಷ್ಣು ಸಿ. ಕೆಲೋಜಿ, ಪ್ರಾಂಶುಪಾಲರಾದ ಪ್ರಮೋದ್ ಎಸ್. ಮಾಳೇಕರ್, ಚಿತ್ರಕಲಾ ಶಿಕ್ಷಕಿಯಾದ ವಿದ್ಯಾವತಿ ಬಿ. ಆಲೂರ್, ಹಾಗೂ ಶಾಲೆಯ ಬೋಧಕ- ಬೋಧಕೇತರ ಸಿಬ್ಬಂದಿ ವರ್ಗದವರು ಈ ಮಕ್ಕಳಿಗೆ ಅಭಿನಂದನೆಯನ್ನು ಸಲ್ಲಿಸಿದ್ದಾರೆ
.