ಜೀವನ್ಮರಣದಿಂದ ಹೋರಾಡುತ್ತಿದ್ದ ಮಹಿಳಾ ರೋಗಿಗೆ ಜೀವ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಜೀವನ್ಮರಣದಿಂದ ಹೋರಾಡುತ್ತಿದ್ದ ಮಹಿಳಾ ರೋಗಿಗೆ ಜೀವ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಜೀವನ್ಮರಣದಿಂದ ಹೋರಾಡುತ್ತಿದ್ದ ಮಹಿಳಾ ರೋಗಿಗೆ ಜೀವ ನೀಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯ ವೈದ್ಯರು ಮಾರಕ ಡೆಂಗ್ಯೂ ರೋಗದಿಂದ ಮೆದುಳಿಗೆ ಸೊಂಕಾಗಿ ಸಾವು ಬದುಕಿನ ಮಧ್ಯೆ ಹೊರಾಡುತ್ತಿದ್ದ ಪ್ರಜ್ಞಾಹೀನ ರೋಗಿಗೆ ಯಶಸ್ವಿ ಚಿಕಿತ್ಸೆ ನೀಡಿ ರೋಗಿಯ ಜೀವ ಉಳಿಸಿ ಸಾರ್ವಜನಿಕರಿಂದ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.

26 ವರ್ಷದ ಆಶಾ ಎಂಬ ಮಹಿಳಾ ರೋಗಿ ಮಾರಕ ಡೆಂಗ್ಯೂ ನಿಂದಾಗಿ ಮೆದುಳಿಗೆ ಸೊಂಕು ಹರಡಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಳು ಅವರ ಸಂಬಂಧಿಕರು ಜನೇವರಿ 29 ರಂದು ಬಸವೇಶ್ವರ ಆಸ್ಪತ್ರೆಗೆ ದಾಖಲಿಸಿದರು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ರೋಗಿಯನ್ನು ಕಂಡು ತಕ್ಷಣ ಕಾರ್ಯನ್ಮುಖರಾದ ಆಸ್ಪತ್ರೆಯ ವೈದ್ಯರು ಪರೀಕ್ಷೆ ಪ್ರಾರಂಬಿಸಿದರು. ಕೆಲವು ಸಮಯದ ನಂತರ ರೋಗಿಯು ಡೆಂಗ್ಯೂ ಎನ್ಸಿಪಿಲಿಟಿಸ್ ನಿಂದಾಗಿ ಮೆದುಳಿಗೆ ಸೊಂಕಾಗಿದ್ದರಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾಳೆ ಎಂದು ನಿಖರವಾಗಿ ಪತ್ತೆ ಹಚ್ಚಿದರು ಕೂಡಲೆ ರೋಗಿಗೆ ಚಿಕಿತ್ಸೆ ಆರಂಭಿಸಿ 5 ದಿನಗಳ ಕಾಲ ವೆಂಟಿಲೇಟರ್ ನಲ್ಲಿ ಇಡಲಾಯಿತು. ವೆಂಟಿಲೇಟರ್ ನಲ್ಲಿ ರೋಗದಿಂದ ಬಳಲುತ್ತಿದ್ದ ಇವಳಿಗೆ ಸರಿಯಾದ ಚಿಕಿತ್ಸೆ ನೀಡಿದ ವೈದ್ಯರ ತಂಡ ಅವಳ ಪ್ರಜ್ಞೆ ಮರಳಿ ತರಿಸುವಲ್ಲಿ ಯಶಸ್ವಿಯಾದರು ಚಿಕಿತ್ಸೆ ಸ್ಪಂದಿಸಿದ ಆಶಾ ಈಗ ಮೆದುಳು ಸೊಂಕದಿಂದ ಗುಣಮುಖಳಾಗಿ ಅಪಾಯದಿಂದ ಪಾರಾಗಿ ಈಗ ಎಲ್ಲರ ಜೋತೆ ಮಾತಾಡುವುದು ತಿರುಗಾಡುತ್ತಿದ್ದಾ ಈಗ ಸಂಪೂರ್ಣವಾಗಿ ಗುಣಮುಖರಾಗಿದ್ದಾರೆ ಇವಳಿಗೆ ಸರಿಯಾದ ಚಿಕಿತ್ಸೆ ನೀಡಿದ ವೈದ್ಯರಾದ ಡಾ ಶೌಕತ್ ಎ ಆರ್, ಡಾ ಶರಣ ನಂದ್ಯಾಳ, ಡಾ ಸೋಹೈಲ್, ಆಸ್ಪತ್ರೆಯ ವೈದ್ಯಾಧಿಕಾರಿ ಡಾ ಆನಂದ ಗಾರಂಪಳ್ಳಿ ಹಾಗೂ ಇನ್ನುಳಿದ ವೈದ್ಯರ ತಂಡಕ್ಕೆ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಜಂಟಿ ಕಾರ್ಯದರ್ಶಿಗಳಾದ ಡಾ ಕೈಲಾಸ ಪಾಟೀಲ್ ಹಾಗೂ ಆಡಳಿತ ಮಂಡಳಿ ಸದಸ್ಯರು ಅಭಿನಂದಿಸಿದ್ದಾರೆ