ಮನೆಗೊಂದು ಶೌಚಾಲಯ ನಿರ್ಮಿಸಿ: ಪಿಡಿಓ ಶ್ರೀನಿವಾಸ ದೇಶಪಾಂಡೆ
ನಮ್ಮ ಶೌಚಾಲಯ-ನಮ್ಮ ಗೌರವ"
ಮನೆಗೊಂದು ಶೌಚಾಲಯ ನಿರ್ಮಿಸಿ: ಪಿಡಿಓ ಶ್ರೀನಿವಾಸ ದೇಶಪಾಂಡೆ
ಕಮಲನಗರ: ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ನಿರ್ಮಿಸಿಕೊಂಡ ಶೌಚಾಲಯಗಳನ್ನು ಬಳಕೆ ಮಾಡಬೇಕು ಬಯಲು ಮುಕ್ತ ಶೌಚಾಲಯವನ್ನಾಗಿ ಮಾಡಲು ಎಲ್ಲರು ಮುಂದಾಗಬೇಕು. ಪ್ರತಿ ಮನೆಯಲ್ಲೂ ಶೌಚಾಲಯವನ್ನು ನಿರ್ಮಿಸಿಕೊಳ್ಳಬೇಕು.
ವಿಶ್ವ ಶೌಚಾಲಯ ಮತ್ತು ವಿಶ್ವ ಮಾನವ ಹಕ್ಕುಗಳ ಅಂಗವಾಗಿ ನಮ್ಮ "ಶೌಚಾಲಯ-ನಮ್ಮ ಗೌರವ ಎಂಬ ಶಿರ್ಷಿಕೆ ಹಾಗೂ ಅಂದದ ಶೌಚಾಲಯ ಆನಂದದ ಜೀವನ" ಎಂಬ ಅಭಿಯಾನದ ನಿಮಿತ್ಯ ಕಮಲನಗರ ತಾಲೂಕಿನ ಕೊರೆಕಲ್ ಗ್ರಾಮ ಪಂಚಾಯತ್ ನಲ್ಲಿ ಮಂಗಳವಾರ ನಡೆದ ಅಭಿಯಾನ ಕುರಿತು ಅವರು ಮಾತನಾಡಿದರು. ಗ್ರಾಮೀಣ ಸಮುದಾಯದಲ್ಲಿ ಸುರಕ್ಷಿತ, ನೈರ್ಮಲ್ಯ, ಶುಚಿತ್ವ, ಕುರಿತು ಡಿ.೧೨ ವರೆಗೆ ಈ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ.
ಆದ್ದರಿಂದ ಗ್ರಾಮದ ಮನೆಗಳಲ್ಲಿ ವೈಯಕ್ತಿಕ ಹಾಗೂ ಶಾಲೆ, ಅಂಗನವಾಡಿ ಕೇಂದ್ರಗಳಲ್ಲಿ ನಿರ್ಮಿಸಿಕೊಂಡ ಸಮುದಾಯ ಶೌಚಾಲಯ ಬಳಕೆ ಮಾಡದೆ ಇದ್ದಲ್ಲಿ ಬಳಕೆ ಮಾಡಿಕೊಳ್ಳಿ ಎಂದು ಗ್ರಾಮಸ್ಥರಿಗೆ ತಿಳಿಸಿದರು. ಶೌಚಾಲಯ ಬಳಸುವಂತೆ ಪ್ರೇರಣೆ ನೀಡಬೇಕು. ಯಾರ ಮನೆಯಲ್ಲಿ ಶೌಚಾಲಯವಿಲ್ಲವೋ ಅಂಥವರು ಗ್ರಾಮ ಪಂಚಾಯತಗೆ ಬಂದು ಅರ್ಜಿ ಸಲ್ಲಿಸಿರಿ ಮನೆಯ ಹೆಣ್ಣು ಮಕ್ಕಳು ಬಹಿರ್ದೆಸೆಗೆ ಹೋಗದಂತೆ ತಡೆಯಿರಿ. ಎಂದರು.
ಈ ಸಂದರ್ಭದಲ್ಲಿ ಡಿ ಇ ಓ ಭಗವಾನ ಜಾನಾಪೂರಿ , ಕಾರ್ಯದರ್ಶಿ ಬಸವರಾಜ ಚಿಮಕೊಡ, ವಾಟರ್ ಮ್ಯಾನ್ ರಾಮ ಸೂರಟೆ, ಗ್ರಾಮ ಕಾಯಕ ಮಿತ್ರರಾದ ಮೀನಾಕುಮಾರಿ ಸಾಗವೆ, ಮಾಹಿತಿ ಶಿಕ್ಷಣ ಸಂವಹನ ಸಂಯೋಜಕರಾದ ಸವಿತಾ ನಾಗೇಶ್ ಬನ್ನಾಳೆ, ರಾಜೀವ್ ಗಾಂಧಿ ಸಂಯೋಜಕರಾದ ಸಂಪತ್, ನೀತಿ ಆಯೋಗದ ಸಂಯೋಜಕರಾದ ಅಮರ್ ಕೋಟೆ, ಶಿಕ್ಷಕರಾದ ಮೀರಾಬಾಯಿ, ಬೈರಾಮ್, ಗ್ರಂಥಪಾಲಕರಾದ ತಂಗೆಮ್ಮಾ, ಶಾಲಾ ಮಕ್ಕಳು, ಶಾಲಾ ಶಿಕ್ಷಕರು ಸೇರಿದಂತೆ ಗ್ರಾಮ ಪಂಚಾಯತ್ ಸಿಬ್ಬಂದಿಗಳು ಮತ್ತಿತರರು ಇದ್ದರು.