ಉತ್ತರ ಕರ್ನಾಟಕ ಐತಿಹಾಸಿಕ ಕಣಜ: ಧರ್ಮೇಂದ್ರ ಕುಮಾರ್

ಆರ್ಕ್ ವಿಸ್ತಾರ - 2025 ಸಮ್ಮೇಳನ ಪೂರ್ವಭಾವಿ ಹೆರಿಟೇಜ್ ವಾಕ್*:
ಉತ್ತರ ಕರ್ನಾಟಕ ಐತಿಹಾಸಿಕ ಕಣಜ: ಧರ್ಮೇಂದ್ರ ಕುಮಾರ್
ಕಲಬುರಗಿ : ಸಾಂಸ್ಕೃತಿಕವಾಗಿ ಮತ್ತು ಐತಿಹಾಸಿಕವಾಗಿ ಉತ್ತರ ಕರ್ನಾಟಕ ಪ್ರದೇಶ ಬಹಳ ಶ್ರೀಮಂತ ವಾಗಿದ್ದು ಇಂತಹ ಸಾಂಸ್ಕೃತಿಕ ಕಣಜವನ್ನು ಜಗತ್ತಿಗೆ ತೋರಿಸುವ ಕೆಲಸ ನಡೆಯಬೇಕಾಗಿದೆ ಎಂದು ಖ್ಯಾತ ಇತಿಹಾಸ ಸಂಶೋಧಕರಾದ ಮೈಸೂರಿನ ಧರ್ಮೇಂದ್ರ ಕುಮಾರ್ ಅಭಿಪ್ರಾಯಪಟ್ಟ ರು.
ಭಾರತೀಯ ಆರ್ಕಿಟೆಕ್ಟ್ ಅಸೋಸಿಯೇಷನ್ ಸಂಸ್ಥೆಯ ಕಲಬುರಗಿ ಘಟಕದ ವತಿಯಿಂದ ಮೇ 2 ರಿಂದ 4 ರವರೆಗೆ ನಡೆಯಲಿರುವ ಆರ್ಕ್ ವಿಸ್ತಾರ 2025ರ ಅಂಗವಾಗಿ ಕಲಬುರಗಿಯಲ್ಲಿ ಏಪ್ರಿಲ್ 27ರಂದು ನಡೆದ ಹಹೆರಿಟೇಜ್ ವಾಕ್ (ಪಾರಂಪರಿಕ ನಡಿಗೆ) ಚಾಲನೆ ನೀಡಿ ಮಾತನಾಡಿ ಬೀದರ್ ಕಲಬುರ್ಗಿ ವಿಜಯಪುರ ರಾಯಚೂರು ಮುಂತಾದ ಕಡೆಗಳಲ್ಲಿರುವ ಶ್ರೀಮಂತ ಪಾರಂಪರಿಕ ತಾಣಗಳು ಭಾರತೀಯ ಇತಿಹಾಸಕ್ಕೆ ಬಲುದೊಡ್ಡ ಕೊಡುಗೆಯನ್ನು ನೀಡಿದೆ ಇಂತಹ ಪಾರಂಪರಿಕ ತಾಣಗಳನ್ನು ಪರಿಚಯಿಸಲು ಆರ್ಕಿಟೆಕ್ಟ್ ಇಂಜಿನಿಯರ್ ಗಳು ಪಾರಂಪರಿಕ ನಡಿಗೆಯ ಮೂಲಕ ಜಾಗೃತಿಯ ಕಹಳೆಯೂದುತ್ತಿರುವುದು ಹೆಮ್ಮೆಯ ಸಂಗತಿಯಾಗಿದೆ. ಪಾರಂಪರಿಕ ತಾಣಗಳನ್ನು ರಕ್ಷಿಸಲು ಮತ್ತು ಅದರ ಮಹತ್ವವನ್ನು ಮುಂದಿನ ಜನಾಂಗಕ್ಕೆ ತಿಳಿಸಲು ಇಂಜಿನಿಯರ್ ಗಳ ತಂಡ ಮುಂದಾಗಿರುವುದಕ್ಕೆ ಶುಭಾಶಯ ಕೋರುತ್ತೇನೆ. ಮೇ 2 ರಿಂದ 4ರ ವರೆಗೆ ನಡೆಯಲಿರುವ ಆರ್ಕ್ ವಿಸ್ತಾರ 2025 ಸಮ್ಮೇಳನ ದ ಮುನ್ನುಡಿಯಾಗಿ ಪಾರಂಪರಿಕ ನಡಿಗೆಗೆ ಸಾರ್ವಜನಿಕರು ಉತ್ತಮ ಪ್ರತಿಕ್ರಿಯೆ ತೋರಿಸಿರುವುದು ಇತಿಹಾಸದ ಮೇಲಿನ ಪ್ರೀತಿಯನ್ನು ಮತ್ತು ಭವ್ಯ ಪರಂಪರೆಯನ್ನು ಉಳಿಸುವ ಸಂಕೇತವಾಗಿದೆ ಎಂದು ಧರ್ಮೇಂದ್ರ ಕುಮಾರ್ ಪ್ರಶಂಸೆ ವ್ಯಕ್ತಪಡಿಸಿದರು.
ಕಲಬುರಗಿ ನಗರದ ಐವಾನ್ ಈ ಶಾಹಿ ಪಾರಂಪರಿಕ ಕಟ್ಟಡದ ಮುಂಭಾಗದಿಂದ ಆರಂಭಗೊಂಡ ಪಾರಂಪರಿಕ ನಡಿಗೆಗೆ ಧ್ವಜ ಬೀಸಿ ಧರ್ಮೇಂದ್ರ ಕುಮಾರ್ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಭಾರತೀಯ ಆರ್ಕಿಟೆಕ್ಟ್ ಅಸೋಸಿಯೇಷನ್ ಅಧ್ಯಕ್ಷ ಅರ್ ವೈಭವ್ ನವನಿ
ಉಪಾಧ್ಯಕ್ಷ ಭರತ್ ಭೂಷಣ್ ಖಂಡೇರಾವ್ ರವೀಂದ್ರ ತೆಗ್ನೂರ ರಾಜು ದೇವನಿ ಅಸಾದುಲ್ಲಾಖಾನ್ ರೇಷ್ಮಾ ಪ್ರವೀಣ್
ಮಜೀದ್ ಮನಿಯಾರ್ , ನಳಿ ನಿ ಮಹಾಗಾಂವ್ಕರ್, ಆಕಾಶವಾಣಿಯ ನಿವೃತ್ತ ಕಾರ್ಯಕ್ರಮ ನಿರ್ವಾಹಣಾಧಿಕಾರಿ ಡಾ. ಸದಾನಂದ ಪೆರ್ಲ, ಬಸವ ಪ್ರಭು, ಖದೀರ್, ಶರಣು ಅಲ್ಲಮಪ್ರಭು ತೇಜ್ಲಿಂಗ್ ಬಸವರಾಜ ಕಣ್ಣಿವೈಭವ್ ಪಲ್ಲವಿ,ಅದಿತಿ ರೇಷ್ಮಾ ಮತ್ತು ಇತರರಿದ್ದರು.
ಪಾರಂಪರಿಕ ನಡಿಗೆ ಅಂಗವಾಗಿ ಖಾಜಾ ಬಂದೇ ನವಾಝ್ ದರ್ಗಾ, ಹಫ್ತ ಗುಂಬಜ್,ಶರಣಬಸವೇಶ್ವರ ದೇವಸ್ಥಾನ ದೇಶಮುಖ ವಾಡಾ , ಸಮ್ಮರ್ ಪ್ಯಾಲೇಸ್ (ಜಿಲ್ಲಾ ಪಂಚಾಯತ್ ಕಚೇರಿ), 1924ರಲ್ಲಿ ಕಲಬುರ್ಗಿಗೆ ಮಹಾತ್ಮ ಗಾಂಧೀಜಿಯವರು ಭೇಟಿ ನೀಡಿ ವಾಸ್ತವ್ಯ ಮಾಡಿದ ಬಾಲ್ ಘಾಟ್ ಕಾಂಪೌಂಡ್ ನ ನೀಲಕಂಠ ರಾವ್ ಮೂಲೆಗೆ ಅವರ ಮನೆ ಮುಂತಾದ ಸ್ಥಳಗಳಿಗೆ ನೂರಾರು ಮಂದಿ ಭೇಟಿ ನೀಡಿ ಐತಿಹಾಸಿಕ ತಾಣಗಳ ಪರಿಚಯ ಮಾಡಿಕೊಂಡರು. ಇತಿಹಾಸ ತಜ್ಞ ಪ್ರೊ. ಶಂಭುಲಿಂಗ ವಾಣಿ ಅವರು ಪಾರಂಪರಿಕ ಕಟ್ಟಡಗಳ ಮಹತ್ವವನ್ನು ವಿವರಿಸಿದರು. ಪಾರಂಪರಿಕ ನಡಿಗೆಯು ನಗರದ ಬಂಜಾರ ಭವಾನದಲ್ಲಿ ಸಮಪನಗೊಂಡಿತು