ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಶಾಖೆ  ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ

ಕಲಬುರಗಿ: ಯಾವುದೇ ಪೂರ್ವ ಸೂಚನೆಗಳು ಇಲ್ಲದೆ ಸಾವಿರಾರು ದುಡಿದು ತಿನ್ನುವ ಜನರ ರೇಷನ್ ಕಾರ್ಡುಗಳನ್ನು ಬಿಪಿಎಲ್ ಪರಧಿಯಿಂದ ತೆಗೆದು ಹಾಕಿರುವ ಅವಮಾನವೀಯ ಆದೇಶವನ್ನು ತಕ್ಷಣವೇ ಬೇಶರತ್ ಆಗಿ ಹಿಂಪಡೆಯಲು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಶಾಖೆ ವತಿಯಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. 

ಕೇಂದ್ರದ ಎನ್.ಡಿ.ಎ ಸರ್ಕಾರವು ಆಧಾರ ಮತ್ತು ಪ್ಯಾನ್ ಕಾರ್ಡ್ ಜೋಡಣೆಯನ್ನು ಕಡ್ಡಾಯ ಮಾಡಿ ಆದೇಶವನ್ನು ಹೊರಡಿಸಿತು ಗಡು ಮೀರಿದ ನಂತರ ಪ್ಯಾನ್ ಕಾರ್ಡ್ ಅನುರ್ಚಿತಗೊಳಿಸುವ ಆದೇಶವನ್ನು ಮಾಡಲಾಗಿತ್ತು. ಬಹು ಸಂಖ್ಯಾತ ಜನ ಸಾಮಾನ್ಯರಿಗೆ ಅದರ ಮಾಹಿತಿ ಇರಲಿಲ್ಲ ಈ ಕಾರಣದಿಂದಾಗಿ ಉಚಿತವಾಗಿ ಜೋಡಣೆ ಮಾಡುವ ಅವಧಿ ಮುಗಿದ ನಂತರ ಸಾವಿರಾರು ಜನ ವಿಳಂಬಸುಲ್ಕ ದಂಡವನ್ನು ಪಾವತಿಸಿ ಪ್ಯಾನ್ ಕಾರ್ಡ್ ಮತ್ತು ಆಧಾರ ಜೋಡಣೆ ಮಾಡಿಸಿಕೊಂಡಿರುವರು. 

ಪ್ಯಾನ್ ಕಾರ್ಡ್ ನವೀಕರಿಸಲು ಕಟ್ಟಿದ1000/-ಆದಾಯ ತೆರಿಗೆ ಇಲಾಖೆ ಗೆ ಸಂದಾಯವಾಗಿರುವುದರಿAದ ಅವರನ್ನು ಆದಾಯ ತೆರಿಗೆದಾರರೆಂದು ತಪ್ಪಾಗಿ ಪರಿಗಣಿಸಲಾಗಿದೆ. ಆದರೇ ತೆರಿಗೆದಾರರು ಬಿಪಿಎಲ್ ಅಥವಾ ಅಂತೋದಯ ಕಾರ್ಡುಗಳನ್ನು ಪಡೆಯಲು ಅನ್ಹರ್ರು ಆಗಿರುವದರಿಂದ ಕರ್ನಾಟಕ ಸರ್ಕಾರ ಆಹಾರ ಮತ್ತು ನಾಗರಿಕ ಸೇವಾ ಇಲಾಖೆಯು ಇವರೆಲ್ಲರ ಬಿಪಿಎಲ್ ಮತ್ತು ಅಂತೋದಯ ಕಾರ್ಡುಗಳನ್ನು ರದ್ದು ಮಾಡಿದೆ .ಒಂದು ವರದಿಯ ಪ್ರಕಾರ ರಾಜ್ಯದಲ್ಲಿ 1,06,152 ರೇಷನ್ ಕಾರ್ಡುಗಳು ರದ್ದಾಗಿವೆ. ಕಲಬುರಗಿ ಜಿಲ್ಲೆಯಲ್ಲಿ 1885 ರದ್ದಾಗಿರುವುದು. ಇದುವರೆಗೆ ಸಿಗುತ್ತಿದ್ದ ರೇಷನ್ ಸಿಗದೆ ಜನ ಪರದಾಡುವಂತೆ ಆಗಿದೆ. ಆಧಾರ ಮತ್ತು ಪ್ಯಾನ್ ಕಾರ್ಡ್ ಜೋಡಣೆಗೆ ಅಮಾನವೀಯವಾಗಿ ದಂಡ ವಿಧಿಸಿದ್ದು ಅಲ್ಲದೆ ಆದಾಯ ತೆರಿಗೆ ಇಲಾಖೆಗೆ ಅದನ್ನು ಯಾವ ಆದಾಯವೆಂದು ಪರಿಗಣಿಸಬೇಕೆಂಬ ಸೂಚನೆಯನ್ನು ಕೊಡದ ಕೇಂದ್ರದ ನಡೆ ಮೊದಲಿಗೆ ಆಕ್ಷೇಪಾರ್ಹವಾಗಿದೆ. ಗಾಯದ ಮೇಲೆ ಬರೆ ಎಳೆದಂತೆ ಆಹಾರ ಇಲಾಖೆಯು ಏಕಾಏಕಿ ದೀಪಾವಳಿ ಹಬ್ಬದ ಸಂದರ್ಭವನ್ನು ಪರಿಗಣಿಸದೆ ಒಂದು ಲಕ್ಷಕ್ಕೂ ಹೆಚ್ಚು ಜನರ ಕಾರ್ಡುಗಳನ್ನು ರದ್ದು ಮಾಡಿದೆ ಇಲ್ಲವೇ ಎಪಿಎಲ್ ಗೆ ಮಾರ್ಪಾಡು ಮಾಡಿದೆ. ಇದರಲ್ಲಿ ಬಹು ಪಾಲು ಕುಟುಂಬಗಳು ಕಡು ಬಡತನದಲ್ಲಿ ಇರುವ ಕುಟುಂಬಗಳೇ ಆಗಿವೆ. ಇಲಾಖೆಯಲ್ಲಿ ವಿಚಾರಿಸಿದರೆ ಆದಾಯ ತೆರಿಗೆ ಕಚೇರಿಯಿಂದ ತೆರಿಗೆದಾರರಲ್ಲ ಎಂದು ದೃಢೀಕರಣ ತರಲು ಕೇಳುತ್ತಿದ್ದಾರೆ. ಆದಾಯ ತೆರಿಗೆ ಇಲಾಖೆಯವರು ಅದು ತಮಗೆ ಸಂಬಂಧಪಟ್ಟ ವಿಷಯವಲ್ಲವೆಂದು ಮಹಿಳೆಯರನ್ನು ಗೋಳಾಡಿಸುತ್ತಿದ್ದಾರೆ. 

ಕರ್ನಾಟಕದಲ್ಲಿ ಬಿಪಿಎಲ್ ಕಾರ್ಡ್ ಗಳು ಕೇವಲ ರೇಷನ್ ಪಡೆಯಲು ಮಾತ್ರವಲ್ಲದೆ ಆರೋಗ್ಯ ಸೌಲಭ್ಯ ಮತ್ತು ಇತರ ಸಾಮಾಜಿಕ ಸುರಕ್ಷೆಗಳಿಗೂ ಅಗತ್ಯವಾದ ದಾಖಲೆಯಾಗಿದೆ. ಕಾರ್ಡುಗಳು ರದ್ದಾಗಿರುವುದರಿಂದ ಈ ಬಡವರು ಆ ಎಲ್ಲಾ ಸೌಲಭ್ಯಗಳಿಂದಲೂ ವಂಚಿತರಾಗುತ್ತಿದ್ದಾರೆ. ಸರ್ಕಾರದ ಗ್ಯಾರಂಟಿ ಯೋಜನೆಗಳ ಭಾಗವಾದ ಗ್ರಹಲಕ್ಷ್ಮಿ ಯೋಜನೆಯ ಹಣವು ಕೆಲವು ತಿಂಗಳಗಳಿಂದ ನಿಂತು ಹೋಗಿದೆ. ಇದು ಸಾಮಾನ್ಯ ಜನರನ್ನು ತೀವ್ರ ಸಂಕಷ್ಟಕ್ಕೆ ಗುರಿ ಮಾಡಿದೆ. ಸರ್ಕಾರ ಈ ಕೂಡಲೇ ರದ್ದು ಮಾಡಿರುವ ಬಿಪಿಎಲ್ ಮತ್ತು ಅಂತ್ಯೋದಯ ಕಾರ್ಡುಗಳನ್ನು ಸಕ್ರಿಯಗೊಳಿಸಬೇಕು ಜನಪರ ಸರ್ಕಾರ ತಕ್ಷಣವೇ ಕೈಗೊಳ್ಳಬೇಕಾದ ಕ್ರಮವಿದು. ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಅಭಿಪ್ರಾಯಪಡುತ್ತದೆ. 

ಇನ್ನೊಂದು ಮಾಹಿತಿ ಪ್ರಕಾರ ದ್ವಿಚಕ್ರ ಮತ್ತು ನಾಲ್ಕು ಚಕ್ರದ ವಾಹನಗಳಿಗೆ ಸಾಲ ಪಡೆದವರಾದ್ದರಿಂದ ಮಾನದಂಡದ ಪ್ರಕಾರ ಅವರಿಗೆ ಬಿಪಿಎಲ್ ಕಾರ್ಡುಗಳು ಬರುವುದಿಲ್ಲ ಎಂದು ತೆಗೆದು ಹಾಕಲಾಗಿದೆ. ಇಂದು ಪ್ರತಿನಿತ್ಯ ಕೆಲಸ ಕಾರ್ಯಗಳಿಗೆ ವಾಹನಗಳನ್ನು ಬಳಸುವುದು ತೀರಾ ಸಾಮಾನ್ಯವಾಗಿದೆ. ಅದರಲ್ಲಿಯೂ ಸರ್ಕಾರಿ ಉದ್ಯೋಗಾವಕಾಶಗಳು ಇಲ್ಲದೆ ಯುವಜನತೆಗೆ ಗೀಕ್ ವರ್ಕ್ ಬಾಡಿಗೆ ಕಾರು ಬೈಕು ಓಡಿಸುವ ಮೂಲಕ ತಮ್ಮ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ವಾಹನ ಒಂದನ್ನು ಖರೀದಿಸಲು ಸಾಲ ಅನಿವಾರ್ಯ. ಸಾಲ ತೆಗೆದುಕೊಳ್ಳುವಾಗ ಪ್ಯಾನ್ ಕಾರ್ಡ್ ಕಡ್ಡಾಯ ಅದನ್ನೇ ಅವರನ್ನು ಬಿಪಿಎಲ್ ಕಾರ್ಡ್ ಪಡೆಯಲು ಬರುವುದಿಲ್ಲವೆಂದು ಘೋಷಿಸುವುದು ಸರಿಯಾದ ಕ್ರಮವಲ್ಲ ಆದ್ದರಿಂದ ಮಾನದಂಡಗಳನ್ನು ವಿಧಿಸುವಾಗ ಮಾನವೀಯ ಕಣ್ಣಿನಿಂದ ಪರಿಗಣಿಸಬೇಕು.

ವಿವಿಧ ಸಂದರ್ಭಗಳಲ್ಲಿ ಅನರ್ಹರು ಬಿಪಿಎಲ್ ಕಾರ್ಡ್ಗಳನ್ನು ಪಡೆದಿದ್ದಾರೆ ಅವುಗಳನ್ನು ರದ್ದು ಮಾಡುತ್ತೇವೆ ಎಂಬ ಹೇಳಿಕೆಗಳು ಸರಕಾರದ ಕಡೆಯಿಂದ ಆಗಾಗ ಕೇಳಿ ಬರುತ್ತದೆ ಒಂದೊಮ್ಮೆ ಆದಾಯ ಸಂಪತ್ತು ಸರಿಯಾದ ಉದ್ಯೋಗ ಇದ್ದವರು ಬಿಪಿಎಲ್ ಕಾರ್ಡ್ ಪಡೆದಿದ್ದಾರೆ ಎಂದರೆ ಅದಕ್ಕೆ ಇಲಾಖೆಯಲ್ಲಿ ಮನೆ ಮಾಡಿರುವ ಭ್ರಷ್ಟ ಅಧಿಕಾರಿಗಳು ಹೊಣೆಯಾಗಿರುತ್ತಾರೆ ಅದನ್ನು ಸರಿಪಡಿಸದೆ ಎತ್ತಿಗೆ ಜ್ವರ ಬಂದರೆ ಎಮ್ಮೆಗೆ ಬರೆ ಎಳೆದಂತೆ ಎಂಬ ಗಾದೆಯ ಮಾತಿನಂತೆ ಚಿಕ್ಕ ಅವಕಾಶಗಳನ್ನು ಬಳಸಿಕೊಂಡು ಬಡಜನರ ಕಾರ್ಡುಗಳನ್ನುರದ್ದು ಮಾಡಿರುವುದು ಸರಿಯಾದ ಕ್ರಮ ಅಲ್ಲವೇ ಅಲ್ಲ. 

ಈ ಮೊದಲು ರೇಷನ್ ಪಡೆಯಲು ಮೊಬೈಲ್ಗಳಿಗೆ ಓಟಿಪಿ ಬರುತ್ತಿದ್ದವು ಅದನ್ನು ತಡೆಹಿಡಿದು ಹೆಬ್ಬರಳಿನ ಗುರುತು ಪಡೆಯಲಾಗುತ್ತಿದೆ ಕಷ್ಟ ಕೆಲಸ ಮಾಡುವ ಜನರ ಬೆರಳುಗಳು ಒಡೆಯುವುದು ಸಾಮಾನ್ಯ. ಹೊಂದಾಣಿಕೆ ಯಾಗದೆ ರೇಷನ್ ಪಡೆಯಲಾಗದ ಸ್ಥಿತಿ ನಿರ್ಮಾಣವಾಗಿದೆ ಎಂದು ಮಹಿಳೆಯರ ದೂರುಗಳಿವೆ. ಈ ಸಮಸ್ಯೆಯನ್ನು ಪರಿಹರಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು. 

ಕೇರಳದಲ್ಲಿ 70ರ ದಶಕದಿಂದಲೇ ಜಾರಿಯಲ್ಲಿರುವ ರಾಜ್ಯ ಸರ್ಕಾರದ ಮುಂದೊಡಗಿನಿಂದ ತಾಪಿಲ ಸ್ಥಾಪಿಸಲ್ಪಟ್ಟಿರುವ ಸಪ್ಲೈ ಕಂಪನಿ ಮಾದರಿಯಲ್ಲಿ ಕರ್ನಾಟಕದಲ್ಲಿಯೂ ಮಾಡಬೇಕು ಮುಕ್ತ ಮಾರುಕಟ್ಟೆಯಲ್ಲಿನ ಬೆಲೆ ನಿಯಂತ್ರಣದಲ್ಲಿರುವ ಈ ಮಾದರಿಯ ರಿಯಾಯಿತಿ ವಿತರಣಾ ವ್ಯವಸ್ಥೆಯಿಂದಾಗಿ ರಾಜ್ಯದ ಜನರಿಗೆ ನಿರಂತರವಾಗಿ ಉತ್ತಮ ಸಾಮಗ್ರಿಗಳು ದೊರಕುತ್ತವೆ ಮಧ್ಯವರ್ತಿಗಳ ಹಾವಳಿಯು ತಪ್ಪಿದಂತಾಗುತ್ತದೆ. ಖಾಸಗಿ ಮಾರಾಟ ಮಳಿಗೆಗಳ ಅಬ್ಬರವು ತಗ್ಗಿ ಜನರಿಗೆ ಉತ್ತಮ ದಿನಸಿ ಪದಾರ್ಥಗಳು ದೊರೆಯುವಂತಾಗುತ್ತದೆ ಸರ್ಕಾರಿ ವಲಯ ಬಲಗೊಳ್ಳುವ ಮೂಲಕ ಸರ್ಕಾರದ ಆದಾಯವು ಹೆಚ್ಚುತ್ತದೆ. 

ಈ ಮೊದಲು ಕಾರ್ಯನಿರ್ವಹಿಸುತ್ತಿದ್ದ ಜನತಾ ಬಜಾರಗಳು ಕಣ್ಮರೆಯಾಗಿದ್ದು ಅವುಗಳನ್ನು ಪುನರಾರಂಭಿಸಬೇಕು ಪಂಚಾಯತ್ ಮಟ್ಟದವರೆಗೆ ಅವುಗಳನ್ನು ಆರಂಭಿಸುವ ಮೂಲಕ ಗ್ರಾಮೀಣ ಮತ್ತು ನಗರಗಳ ಎಲ್ಲಾ ಜನರಿಗೆ ಅನುಕೂಲ ಮಾಡಿಕೊಡಬಹುದಾಗಿದೆ. 

ಕಡು ಬಡವರು ಅಶಂಖ್ಯಾತ ಒಂಟಿ ಮಹಿಳೆಯರು ಹಿರಿಯ ನಾಗರಿಕರು ರೇಷನ್ ಕಾರ್ಡ್ ಗಳಿಲ್ಲದೆ ಸಾಮಾಜಿಕ ಸುರಕ್ಷಾ ಸೌಲಭ್ಯಗಳಿಂದ ವಂಚಿತರಾಗುತ್ತಿದ್ದಾರೆ ಅಪೌಷ್ಟಿಕತೆ ರಕ್ತ ಹೀನತೆ, ತಾಯಿ ಮರಣ ಶಿಶುಮರಣ ಗಳಂಥ ಸಮಸ್ಯೆಗಳಿಗೂ ಆಹಾರ ಪೂರೈಕೆಗೂ ನೇರ ಸಂಬಂಧವಿದೆ. ಇತ್ತ ಸರಿಯಾದ ಆಹಾರವು ಇಲ್ಲದೆ ಅತ್ತ ಚಿಕಿತ್ಸೆ ಸೌಲಭ್ಯವಿಲ್ಲದೆ ಬಡ ಜನರು ಕಂಗಾಲಾಗಿದ್ದಾರೆ. ಹೊಸ ಕಾರ್ಡುಗಳಿಗೆ ಅರ್ಜಿ ಸಲ್ಲಿಸಲು ಒಂದೆರಡು ಗಂಟೆಗಳ ಕಾಲಾವಕಾಶ ನೀಡಿ ಸಮರ್ಪಕ ಮಾಹಿತಿಯು ನೀಡದಿರುವ ಕ್ರಮವು ಸರಿಯಾದದ್ದಲ್ಲವೆಂದು ಸಂಘಟನೆ ಹೇಳ ಬಯಸುತ್ತದೆ 

ಹೊಸ ಕಾರ್ಡುಗಳ ನೋಂದಣಿಗೆ ತಕ್ಷಣವೇ ಆದೇಶ ನೀಡಬೇಕು ಜನರಿಗೆ ಅದರ ಬಗ್ಗೆ ತಿಳುವಳಿಕೆ ನೀಡಬೇಕು ಮಾನವೀಯ ದೃಷ್ಟಿಯಿಂದ ಜನಪರ ಸರ್ಕಾರವಾಗಿ ಮುಂದಾಗಬೇಕು. 

ಈ ಮೇಲಿನ ನಮ್ಮ ಒತ್ತಾಯಗಳನ್ನು ಸಕಾರಾತ್ಮಕವಾಗಿ ಪರಿಗಣಿಸಿ ರದ್ದು ಮಾಡಿದ ಕಾರ್ಡುಗಳನ್ನು ಸಕ್ರಿಯೆ ಗೊಳಿಸಬೇಕು ಜನತಾ ಬಜಾರಗಳನ್ನು ಆದ್ಯತೆಯ ಮೇರೆಗೆ ಪುನರಾರಂಭಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಮಾರುಕಟ್ಟೆಯ ಬೆಲೆ ನಿಯಂತ್ರಣದಲ್ಲಿ ಇಡಲು ಅಲ್ಲಿ ನಿರಂತರವಾಗಿ ರಿಯಾಯಿತಿ ದರದಲ್ಲಿ ಎಲ್ಲಾ ಜೀವನ ಅವಶ್ಯಕ ವಸ್ತುಗಳು ದೊರೆ ಎಂತಾಗಬೇಕು ಹಬ್ಬಗಳ ಸಂದರ್ಭದಲ್ಲಿ ವಿಶೇಷ ರಿಯಾಯಿತಿಗಳನ್ನು ನೀಡಬೇಕು ಗ್ರಾಮೀಣ ಆದೇಶಗಳಿಗೆ ಮೊಬೈಲ್ ರೇಷನ್ ಅಂಗಡಿಗಳ ಸೌಲಭ್ಯ ಕಲ್ಪಿಸಬೇಕು. ಎಂದು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಜಿಲ್ಲಾ ಶಾಖೆ ಒತ್ತಾಯಿಸುತ್ತದೆ. ಅಧ್ಯಕ್ಷೆ ಚಂದಮ್ಮ, ಪ್ರಧಾನ ಕಾರ್ಯದರ್ಶಿ ಪದ್ಮಿನಿ ಕಿರಣಗಿ ಸೇರಿದಂತೆ ಇತರರು ಇದ್ದರು.