ಶಾಸಕ ಚೆನ್ನಾರೆಡ್ಡಿ ಹಾಗೂ ಪಂಪನಗೌಡ ತುನ್ನೂರಗೆ ಈ ಕೂಡಲೆ ಬಂದಿಸಲು ಅರ್ಜುನ ಭದ್ರೆ ಆಗ್ರಹ

ಶಾಸಕ ಚೆನ್ನಾರೆಡ್ಡಿ ಹಾಗೂ ಪಂಪನಗೌಡ ತುನ್ನೂರಗೆ  ಈ ಕೂಡಲೆ ಬಂದಿಸಲು  ಅರ್ಜುನ ಭದ್ರೆ ಆಗ್ರಹ

ಶಾಸಕ ಚೆನ್ನಾರೆಡ್ಡಿ ಹಾಗೂ ಪಂಪನಗೌಡ ತುನ್ನೂರಗೆ ಈ ಕೂಡಲೆ ಬಂದಿಸಲು ಅರ್ಜುನ ಭದ್ರೆ ಆಗ್ರಹ

ಕಲಬುರಗಿ : ಪಿ.ಎಸ್ಐ ಪರಶುರಾಮ್ ಛಲವಾದಿ ಅವರ ಸಾವಿಗೆ ಕಾರಣರಾಗಿರುವ ಯಾದಗಿರಿ ಶಾಸಕ ಚೆನ್ನಾರೆಡ್ಡಿ ತುನ್ನೂರ್ ಹಾಗೂ ಅವರ ಪುತ್ರ ಪಂಪನಗೌಡ ಅವರನ್ನು ಈ ಕೂಡಲೆ ಬಂಧಿಸಬೇಕೆಂದು ಕ.ರಾ.ದ.ಸಂ.ಸ ರಾಜ್ಯ ಸಂಚಾಲಕರಾದ ಅರ್ಜುನ ಭದ್ರೆ ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ರಾಜ್ಯ ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ಆಯಕಟ್ಟಿನ ಸ್ಥಳಗಳಿಗೆ ಬರಲು ಲಕ್ಷ , ಲಕ್ಷದಲ್ಲಿ ಹಣವನ್ನು ತೆಗೆದುಕೊಳ್ಳುತ್ತಿರುವುದು ನಾಚಿಕೆ ಪಡುವಂತ ನಾಗರೀಕ ಸಮಾಜ ತಲೆ ತಗ್ಗಿಸುವ ಸಂಗತಿಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ. 

ಬಿಜೆಪಿ ಸರ್ಕಾರ 40 ಪರ್ಸೆಂಟೇಜ್ ಸರ್ಕಾರ ಎಂದು ಖ್ಯಾತಿ ಪಡೆದಿತ್ತು ಆದರೆ ಸಿದ್ದರಾಮಯ್ಯನವರ ಕಾಂಗ್ರೆಸ್ ಸರ್ಕಾರ ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿದೆ ಎಂದು ಟೀಕಿಸಿದ್ದಾರೆ.

 ಒಂದು ವೇಳೆ ಶಾಸಕ ಚನ್ನಾರೆಡ್ಡಿ ತುನ್ನೂರ ಹಾಗೂ ಅವರ ಪುತ್ರನನ್ನು ಬಂಧಿಸದಿದ್ದರೆ, ದಿನಾಂಕ 19-8-2024 ರಂದು ನಗರದ ಜಗತ್ ವೃತ್ತದಿಂದ ಜಿಲ್ಲಾಧಿಕಾರಿಗಳ ಕಚೇರಿ ವರೆಗೆ ಬೃಹತ್ ಪ್ರತಿಭಟನೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ಅರ್ಜುನ್ ಭದ್ರೆ ತಿಳಿಸಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮರಿಯಪ್ಪ ಹಳ್ಳಿ, ಮಹಾಂತೇಶ ಬಡದಾಳ, ಎಂ ಎಂ ಮೇತ್ರೆ, ಮಲ್ಲಿಕಾರ್ಜುನ ಖನ್ನಾ, ಸೂರ್ಯಕಾಂತ ಅಝಾದಪೂರ, ಸಂತೋಷ ತೇಗನೂರ, ಶಿವಶರಣಪ್ಪ ಕುರನಳ್ಳಿ, ಡಾ ಜೈ ಕುಮಾರ್ ನೂಲಕರ್ ಉಪಸ್ಥಿತರಿದ್ದರು.