ವಿರಕ್ತ ಮಠಗಳು ವೀರಶೈವ ಧರ್ಮದ ಪ್ರಸಾರ ಕೇಂದ್ರಗಳು

ವಿರಕ್ತ ಮಠಗಳು ವೀರಶೈವ ಧರ್ಮದ ಪ್ರಸಾರ ಕೇಂದ್ರಗಳು

ಗುರು ವಿರಕ್ತರು. ವೀರಶೈವ ಧರ್ಮದಲ್ಲಿ ಎರಡು ಪ್ರಮುಖವಾದ ಪ್ರಭೇದಗಳಿವೆ ಒಂದು ಗುರು ಸ್ಥಲ ಪರಂಪರೆ ಇನ್ನೊಂದು ವಿರಕ್ತ ಪರಂಪರೆ ಇವು ವೀರಶೈವ ಧರ್ಮದ ಒಂದು ನಾಣ್ಯದ ಎರಡು ಮುಖಗಳಿದ್ದಂತೆ

ಪಂಚಪೀಠಗಳ ಕೆಳಗೆ ಗುರು ಸ್ಥಲ ಮಠಗಳಿವೆ ಇವುಗಳ ಕಾರ್ಯ ಧರ್ಮದ ವಿಚಾರಗಳನ್ನು ಅನುಷ್ಠಾನಕ್ಕೆ ತರುವುದು ಧಾರ್ಮಿಕ ವಿಧಿ ವಿಧಾನಗಳು ಆಚರಣೆಗಳನ್ನು ಭಕ್ತರಲ್ಲಿ ಸಂಪೂರ್ಣ ಕರಗತಗೊಳಿಸುವ ಕೆಲಸವನ್ನು ಈ ಮಠಗಳು ಮಾಡುತ್ತವೆ ಇನ್ನು ಧರ್ಮ ಪ್ರಚಾರಕ್ಕೆಂದು ವಿರಕ್ತಮಠಗಳು ಹುಟ್ಟಿಕೊಂಡಿವೆ. ಗುರು ಮತ್ತು ವಿರಕ್ತರು ಸಾಮರಸ್ಯದಿಂದ ಬಾಳಬೇಕಾದದ್ದು ಈ ವೀರಶೈವ ಧರ್ಮದ ಮೂಲ ಧ್ಯೇಯವಾಗಿದೆ ಅದಕ್ಕಾಗಿ ಲಿಂಗೈಕ್ಯ ಹಾನಗಲ್ಲ ಕುಮಾರಸ್ವಾಮಿ ಗಳು ಶಿವಯೋಗ ಮಂದಿರವನ್ನು ಸ್ಥಾಪಿಸಿ ಗುರು ವಿರಕ್ತರನ್ನು ಒಂದುಗೂಡಿಸುವ ಪ್ರಯತ್ನದಲ್ಲಿ ತೊಡಗಿಸಿಕೊಂಡರು ಗುರು ಸ್ಥಳದವರು ಶ್ರೇಷ್ಠವೆಂದಾಗಲಿ ವಿರಕ್ತರು ಕನಿಷ್ಠವೆಂದಾಗಲಿ ಭಾವಿಸುವ ಅವಶ್ಯಕತೆ ಇಲ್ಲ ಅವರವರ ಸ್ಥಾನಮಾನಗಳು ಅವರವರಿಗಿರುತ್ತವೆ ಅವರವರ ಕರ್ತವ್ಯಗಳು ಅವರವರಿಗೆ ಇದ್ದೇ ಇವೆ ಗುರು ಸ್ಥಳದ ಮಠಗಳು ಧರ್ಮ ಕಾರ್ಯಗಳನ್ನು ಮಾಡುವುದು ಸ್ಥಿರವಾಗಿ ಒಂದು ಕಡೆ ನೆಲೆ ಸಿಕೊಂಡಿರುವುದು ದೀಕ್ಷೆ ಅಯ್ಯಾಚಾರ ದಂತಹ ಕಾರ್ಯಕ್ರಮಗಳನ್ನು ಮಾಡುವುದು ಮದುವೆ ಸಂಪ್ರದಾಯಗಳನ್ನು ಮುಂದುವರೆಸಿಕೊಂಡು ಹೋಗುವದು ಧರ್ಮದ ಆಚರಣೆಗಳೆಲ್ಲವೂ ಅನುಷ್ಠಾನಕ್ಕೆ ತರುವ ಸಮಾಜವನ್ನು ತಿದ್ದಿ ಬುದ್ದಿ ಹೇಳುವ ಹಕ್ಕು ಗುರು ಸ್ಥಳದ ಮಠಗಳಿಗೆ ಇದೆ ಅವರು ಮನೆ ಗುರುಗಳು ಹೌದು ಸಮಾಜ ಗುರುಗಳು ಹೌದು ಈ ಕೆಲಸ ಕಾರ್ಯಗಳನ್ನು ಪರಿಣಾಮಕಾರಿಯಾಗಿ ಮಾಡುವ ಅಧಿಕಾರ ಈ ಗುರು ಸ್ಥಳ ಪೀಠಗಳಿಗೆ ಇದೆ ಇವರು ಸನ್ಯಾಸಿಗಳು ಆಗಿರಬಹುದು ಇಲ್ಲವೇ ಸಂಸಾರಿಕರು ಆಗಿರಬಹುದು ಇವರಿಗೆ ಪ್ರಾಪಂಚಿಕ ನಿರ್ಬಂಧನೆಗಳಿಲ್ಲ ಈ ಗುರು ಸ್ಥಳ ಮಠಗಳಲ್ಲಿ ಎರಡು ಪದ್ಧತಿಗಳಿವೆ ಒಂದು ಪುತ್ರ ವರ್ಗ ಮತ್ತು ಇನ್ನೊಂದು ಶಿಷ್ಯ ವರ್ಗ ಪುತ್ರವರ್ಗದ ಮಠಗಳು ತಮ್ಮ ವಂಶಸ್ಥರನ್ನು ಉತ್ತರಾಧಿಕಾರಿಗಳನ್ನಾಗಿ ಮಾಡಿಕೊಳ್ಳುತ್ತಾರೆ. ಶಿಷ್ಯ ವರ್ಗ ಮಠಗಳು ತಮ್ಮ ಮಠದ ಯೋಗ್ಯ ಹಾಗೂ ಅರ್ಹ ಶಿಷ್ಯರನ್ನು ತಮ್ಮ ಉತ್ತರಾಧಿಕಾರಿಯನ್ನಾಗಿ ಮಾಡಿ ಕೊಳ್ಳುತ್ತಾರೆ ಆದರೆ ವಿರಕ್ತಮಠಗಳಲ್ಲಿ ಹಾಗೆ ಪದ್ಧತಿ ಇಲ್ಲ ಅಲ್ಲಿ ಧರ್ಮ ಪ್ರಚಾರ ಮಾಡತಕ್ಕಂತಹ ಯೋಗ್ಯ ವ್ಯಕ್ತಿಯನ್ನು ಮೊದಲು ದೇಶಿಕನನ್ನಾಗಿ ದೀಕ್ಷ ಕೊಡುತ್ತಾರೆ ಅವನು ದೇಶ ಸಂಚಾರ ಮಾಡಿ ಸಂಘಟನೆ ಧರ್ಮ ಕಾರ್ಯಗಳನ್ನು ಸಭೆ ಸಮಾರಂಭಗಳನ್ನು ಮಾಡುವ ಅನುಭವವನ್ನು ಪಡೆದು ಬಂದ ಮೇಲೆ ವಿರಕ್ತ ಮಠಕ್ಕೆ ಅಧಿಕಾರವನ್ನು ವಹಿಸಿಕೊಡುತ್ತಾರೆ ಇವರ ಕಾರ್ಯಗಳು ಧರ್ಮ ಪ್ರಚಾರ ಸಂಘಟನೆ ಹೋರಾಟ ಸಮಾಜ ಸುಧಾರಣೆ ಪ್ರಗತಿ ಬದಲಾವಣೆ ಹಾಗೂ ಸಮಸ್ಯೆಗಳ ಪರಿಹಾರ ಶಿಕ್ಷಣ ಸಾಂಸ್ಕೃತಿಕ ಸಾಹಿತ್ಯ ಚಟುವಟಿಕೆಗಳನ್ನು ಮಾಡುವುದಾಗಿರುತ್ತದೆ ಇವರು ಒಂದು ರೀತಿಯಲ್ಲಿ ವೀರಶೈವ ಧರ್ಮದ ಸ್ವಯಂಸೇವಕರಂತೆ ನಿರಾಭಾರಿಗಳಾಗಿ ವಾಸಿಸುತ್ತಾರೆ. ಗುರು ಸ್ಥಳದ ಮಠ ಗಳಿಗೆ ಅಧಿಕಾರ ವಹಿಸಿ ಕೊಡುವಾಗ ಸಾಬಾರಿ ಪಟ್ಟಾಧಿಕಾರವೆನ್ನುತ್ತಾರೆ ವಿರಕ್ತರಿಗೆ ಅಧಿಕಾರ ವಹಿಸಿ ಕೊಡುವಾಗ ನಿರಾಭಾರಿ ಪಟ್ಟಾಧಿಕಾರವೆಂದು ಹೇಳುತ್ತಾರೆ ಗುರು ಸ್ಥಳದ ಮಠಗಳ ಗುರುಗಳಿಗೆ ಸ್ಥಿರ ಜಂಗಮರೆಂದು ವಿರಕ್ತಮಠದ ಸ್ವಾಮಿಗಳಿಗೆ ಚರ ಜಂಗಮರೆಂದು ಕರೆಯುತ್ತಾರೆ ಹೀಗೆ ಗುರು ಸ್ಥಳದ ಪರಂಪರೆಗೆ ಸಾ ಬಾರಿ ವಿರಕ್ತ ಪರಂಪರೆ ನಿರಾಬಾರಿ ಪಟ್ಟಾಧಿಕಾರವೆಂದು ಕರೆಯುತ್ತಾರೆ ಗುರು ಸ್ಥಳದವರು ತಮ್ಮ ಸ್ವಸ್ಥಳದಲ್ಲಿದ್ದು ಧರ್ಮ ಪ್ರಚಾರ ಮಾಡಿದರೆ ವಿರಕ್ತರು ಹಳ್ಳಿಗೆ ಏಕರಾತ್ರಿಯಂತೆ ಪಟ್ಟಣಕ್ಕೆ ಪಂಚರಾತ್ರಿಯಂತೆ ಸಂಚಾರ ಮಾಡಿ ಧರ್ಮ ಪ್ರಚಾರ ಮಾಡುತ್ತಾರೆ ಇವರು ಹೆಚ್ಚು ಜನಪ್ರಿಯರು ಮತ್ತು ಸಮಾಜ ಸಂಘಟನೆಯಲ್ಲಿ ತೊಡಗಿಸಿಕೊಂಡು ಸಂಪನ್ಮೂಲ ಕ್ರೂಡೀಕರಣ ಮಾಡಿ ಉಳ್ಳವರಿಂದ ತಂದು ಇಲ್ಲದವರಿಗೆ ಸಹಾಯ ಮಾಡುತ್ತಾರೆ ಹೀಗೆ ಮಾಡಿ ಧರ್ಮ ಪ್ರಚಾರ ಕಾರ್ಯಕ್ಕೆ ತಮ್ಮನ್ನು ಸಂಪೂರ್ಣವಾಗಿ ತೊಡಗಿಸಿಕೊಳ್ಳುತ್ತಾರೆ ಮತ್ತು ಲೋಕಪ್ರಿಯರು ಲೋಕ ಸ್ತುತಿಸುವ ಹಾಗೆ ಕೆಲಸ ಕಾರ್ಯಗಳನ್ನು ಮಾಡುತ್ತಾರೆ ವೀರಶೈವ ಧರ್ಮದ ತತ್ವ ಆಚಾರ ವಿಚಾರಗಳ ಪ್ರಚಾರ ಇವರ ಹೊಣೆಯಾಗಿರುತ್ತದೆ ಗುರು ಸ್ಥಳ ಮಠಗಳಿಗೆ ಕಾರ್ಯಾಂಗಗಳು ಎಂದು ಹೇಳಿದರೆ ವಿರಕ್ತಮಠಗಳು ಪ್ರಸಾರಂಗ ಎಂದು ಹೇಳಬಹುದು ಧರ್ಮ ಪ್ರಚಾರವೇ ಇವುಗಳ ಮುಖ್ಯ ಧ್ಯೇಯವಾಗಿದೆ ಆಚಾರ ವಿಚಾರ ಪ್ರಚಾರದ ಮೇಲೆ ಇವರ ಕೆಲಸ ಕಾರ್ಯಗಳು ನಡೆಯುತ್ತವೆ ಅದಕ್ಕಾಗಿ ಇವರನ್ನು ನಾವು ವಿರಕ್ತರೆಂದು ಕರೆಯುತ್ತೇವೆ. ವಿರಕ್ತ ಎಂದರೆ ಒಂದು ವೀರ ರಕ್ತ ಇನ್ನೊಂದು ಎಲ್ಲವನ್ನು ತ್ಯಜಿಸಿದವ ಮತ್ತೊಂದು ಸಂಸಾರ ವಾಸನೆ ವ್ಯಾಮೋಹ ಹಾಗೂ ವ್ಯಾಪನೆಯಿಂದ ದೂರವಿದ್ದವ ಏಕಾಂಗಿಯಾಗಿ ಒಂಟಿಯಾಗಿದ್ದುಕೊಂಡು ಸಮಾಜ ಸೇವೆಗಾಗಿ ತನ್ನನ್ನು ಸಂಪೂರ್ಣ ಸಮರ್ಪಿಸಿಕೊಂಡವನಿಗೆ ವಿರಕ್ತ ಎಂದು ಕರೆಯಲಾಗುತ್ತದೆ ಗುರು ಸ್ಥಳದ ಮಠಗಳು ಊರೊಳಗೆ ಇದ್ದರೆ ವಿರಕ್ತಮಠಗಳು ಬಹುಪಾಲು ಊರ ಹೊರಗಡೆ ಇರುತ್ತದೆ ಊರಿನ ಎಲ್ಲಾ ಸಮಸ್ಯೆಗಳು ಭಕ್ತರ ವಿಚಾರಗಳನ್ನು ಗಮನಿಸುವುದರಿಂದ ಹಿರೇಮಠ ಮಠಪತಿ, ಮಠಗಳು ಊರಲ್ಲಿ ಇವೆ ಸಮಾಜ ಸೇವಕರಾದ ಜನಪರ ಕಾಳಜಿ ಹೊಂದಿರುವ ಅವರ ಮಠಗಳು ಊರ ಹೊರಗಡೆ ಇರುವುದು ಕಾಣುತ್ತೇವೆ ಅವರು ಸ್ವತಂತ್ರರು ಹಾಗೂ ಸಂಘಟಕರು ಆಗಿರುತ್ತಾರೆ. ಧರ್ಮದ ತತ್ವ ಪ್ರಚಾರವೇ ಇವರ ಮುಖ್ಯ ಧೇಯವಾಗಿರುತ್ತದೆ ಗುರು ಮತ್ತು ವಿರಕ್ತರು ಒಂದಾಗಿ ವೀರಶೈವ ಧರ್ಮವನ್ನು ಪ್ರಚಾರ ಮಾಡಬೇಕೆಂಬ ನಿಯಮವಿದೆ ಶಿವಯೋಗ ಮಂದಿರದ ಸ್ಥಾಪಕರು ಅಖಿಲ ಭಾರತ ವೀರಶೈವ ಮಹಾಸಭೆಯ ಸಂಸ್ಥಾಪಕರಾದ ಲಿಂಗೈಕ್ಯ ಹಾನಗಲ್ ಕುಮಾರ ಶಿವಯೋಗಿಗಳು ಗುರು ವಿರಕ್ತ ಒಂದು ಮಾಡಲು ಶಿವಯೋಗ ಮಂದಿರವನ್ನು ಸ್ಥಾಪಿಸಿದರು ಸ್ಥಾಪನೆಗೊಂಡು ಒಂದು ಶತಮಾನ ಕಳೆದರೂ ಇನ್ನೂ ಆ ಭಿನ್ನಾಭಿಪ್ರಾಯ ಹೋಗೆ ಇಲ್ಲ ಅದಕ್ಕಾಗಿ ಗುರು ವಿರಕ್ತರು ಒಂದೇ ಎಂಬ ಸಮತೆ ಸಾರಿತು ಜ್ಯೋತಿ ಬೆಳಗಿತು ವೀರಶೈವ ಧರ್ಮದ ಜ್ಯೋತಿ ಬೆಳಗಿತು ಎಂದು ಮಂಗಳಾರತಿ ಪದ್ಯ ರಚಿಸಿ ಕನ್ನಡಿಗರಿಗೆ ನೀಡಿದರು ಆದರೂ ಇನ್ನೂ ಭೇದ ಭಾವ ಹೋಗುತ್ತಿಲ್ಲ ಗುರು ವಿರಕ್ತರು ಒಂದಾಗಿ ಚೆಂದಾಗಿ ವೀರಶೈವ ಧರ್ಮವನ್ನು ಬಾಳಿ ಬೆಳಗಬೇಕೆಂಬುದು ಅವರ ಆಶಯವಾಗಿತ್ತು ಅದಕ್ಕಾಗಿ ಧರ್ಮ ಪ್ರಚಾರಕರ ಟಂಕಸಾಲೆಯನ್ನು ಪ್ರಾರಂಭಿಸಲು ಶಿವ ಯೋಗ ಮಂದಿರವನ್ನು ಸ್ಥಾಪಿಸಿ ವಿರಕ್ತ ಮಠಾಧೀಶರನ್ನ ಸಿದ್ಧಪಡಿಸಿದರು ಆಶ್ಚರ್ಯವೆಂದರೆ ಈ ವಿರಕ್ತ ಮಠದ ಸ್ವಾಮಿಗಳೆಲ್ಲ ಪಂಚಪೀಠದ ಶಾಖಾಮಠಗಳಾದ ಆ ಪರಂಪರೆಗೆ ಸೇರಿದ ಹಿರೇಮಠಗಳಲ್ಲಿ ಜನಿಸಿದವರೆ ಹೆಚ್ಚಾಗಿದ್ದಾರೆ ಅವರ ಜನನ ಪಂಚಪೀಠಗಳ ಪರಂಪರೆಯ ಹಿರೇಮಠಗಳಲ್ಲಾದರೆ ಅವರ ಕೆಲಸ ಕಾರ್ಯಗಳೆಲ್ಲವೂ ವಿರಕ್ತ ಮಠಗಳಲ್ಲಿ ಆಗಿದೆ ಹಳೇ ಬೇರು ಹೊಸ ಚಿಗುರುಗಳ ಸಂಘರ್ಷ ಸಂಕ್ರಮಣಗಳ ನಡುವೆ ಅವರು ಬಾಳಿ ಬೆಳಗುತ್ತಿರುವುದು ನಾವು ನೋಡುತ್ತೇವೆ ಆಚಾರ ಪರಂಪರೆಯನ್ನು ಗುರು ಸ್ಥಳದವರು ಕಾಪಾಡಿದರೆ ವಿರಕ್ತರು ವಿಚಾರ ಪರಂಪರೆಯನ್ನು ಮುಂದುವರಿಸಿದ್ದಾರೆ ಅರಿವು ಆಚಾರಗಳ ಸಮ್ಮಿಲನವೇ ವೀರಶೈವ ಸಂಪ್ರದಾಯದ ಗುರು ವಿರಕ್ತರ ಕಾರ್ಯಗಳಾಗಿವೆ ಗುರು ಸ್ಥಳದವರು ಶ್ರೇಷ್ಠವಂದಾಗಲಿ ವಿ ರಕ್ತರು ಕನಿಷ್ಠವೆಂದಾಗಲಿ ಅಲ್ಲ ಆಚಾರಕ್ಕೆ ಗುರು ಸ್ಥಳ ವಿದ್ದರೆ ವಿಚಾರದ ಪ್ರಚಾರಕ್ಕೆ ವಿರಕ್ತರಿದ್ದಾರೆ ಇವೆರಡೂ ವೀರಶೈವ ಧರ್ಮದ ಎರಡು ಪ್ರಮುಖ ಅಂಗಗಳೆ ಹೊರತು ಗುರು ಸ್ಥಳದವರು ಪಂಚಪೀಠ ಪ್ರಚಾರಕರು ನಿರಕ್ತರು ಬಸವ ತತ್ವ ಪ್ರಸಾರಕರು ಎಂಬ ಪರಿಕಲ್ಪನೆ ತಪ್ಪಾಗಿದೆ ಗದುಗಿನ ತೋಂಟದಾರ್ಯ ಮಠದ ಸದ್ಯದ ಮಠಾಧಿಪತಿಗಳಾದ ಸಿದ್ದರಾಮ ಸ್ವಾಮಿಗಳು ಬಸವ ತತ್ವ ಪ್ರಸಾರ ಮಾಡಿ ಇಲ್ಲವಾದರೆ ವಿರಕ್ತಮಠಗಳನ್ನು ತ್ಯಜಿಸಿ ಎಂದು ಕರೆ ಕೊಟ್ಟಿದ್ದಾರೆ ಶಿವಾನಂದ ಜಾಮ್ದಾರ್ ಅವರು ಅದನ್ನು ಸಮರ್ಥಿಸಿಕೊಂಡಿದ್ದಾರೆ ಈ ವಿಚಾರವನ್ನು ಕುರಿತು ಹೇಳುವುದಾದರೆ ಗದುಗಿನ ಮಠ ಈ ಮುಂಚೆ ವೀರಶೈವ ಅಧ್ಯಯನ ಸಂಸ್ಥೆ ಸ್ಥಾಪಿಸಿ ವೀರಶೈವ ಪುಣ್ಯಪುರುಷರ ಮಾಲಿಕೆ ಯನ್ನು ಆರಂಭಿಸಿ ನೂರಾರು ಪುಸ್ತಕಗಳನ್ನು ಪ್ರಕಟಿಸಿ ಇತಿಹಾಸ ದಾಖಲೆ ಮಾಡಿದೆ ಮೊನ್ನೆ ಮೊನ್ನೆವರೆಗೆ ಲಿಂಗೈಕ್ಯ ಜಗದ್ಗುರು ತೋಂಟದ ಸಿದ್ದಲಿಂಗ ಮಹಾಸ್ವಾಮಿಗಳು ವೀರಶೈವ ಧರ್ಮ ಪ್ರಚಾರಕರಾಗಿದ್ದರು. ಇತ್ತೀಚಿಗೆ ಅವರು ಲಿಂಗಾಯತ ಧರ್ಮ ಪ್ರಸಾರಕರಾಗಿ ಪರಿವರ್ತನೆಗೊಂಡರು. ಆದರೆ ಇದು ತಾತ್ವಿಕವಾಗಿ ಎಷ್ಟರಮಟ್ಟಿಗೆ ಸರಿ ಎಂಬುದು ಗದುಗಿನ ಮಠ ಒಂದು ಸಾರಿ ಆತ್ಮಾವಲೋಕನ ಮಾಡಿಕೊಂಡು ಶಿಷ್ಯರಿಗೆ ಉತ್ತರಿಸಬೇಕು ಸ್ವಾಮಿಗಳಾದವರು ಸಮಯ ಸಾಧಕರು ಅವಕಾಶವಾದಿಗಳಾಗಿ ತತ್ವ ಸಿದ್ಧಾಂತಗಳನ್ನು ಗಾಳಿಗೆ ತುರುವುದು ಸರಿಯಾದ ಕ್ರಮವಲ್ಲ ಇದರಿಂದ ಭಕ್ತರ ಮನಸ್ಸು ನೋಯುತ್ತದೆ ಮತ್ತು ಅವರನ್ನು ಗೊಂದಲಕ್ಕೆ ಒಳಪಡಿಸಿದಂತಾಗುತ್ತದೆ ಇಂತಹ ಸಂದರ್ಭದಲ್ಲಿ ಸ್ವಾಮಿಗಳೇ ಹೀಗೆ ಮಾಡಿದರೆ ಹೇಗೆ ಎಂಬ ಪ್ರಶ್ನೆ ಉದ್ಭವಿಸುತ್ತದೆ ಗದುಗಿನ ಮಠ ವೀರಶೈವ ಧರ್ಮದ ಮಠವೋ ಅಥವಾ ಲಿಂಗಾಯತ ಧರ್ಮದ ಮಠವೋ ಎಂಬುದು ತಾತ್ವಿಕ ಹಾಗೂ ಸೈದ್ಧಾಂತಿಕ ನೆಲೆಯಲ್ಲಿ ನಿಂತು ಉತ್ತರಿಸಬೇಕು ಮತ್ತು ತನ್ನ ಪರಂಪರೆ ಇತಿಹಾಸವನ್ನು ಜನರ ಎದುರಿಗೆ ಬಿಚ್ಚಿಡಬೇಕು ಅದರ ಬೇರುಗಳು ಎಲ್ಲಿವೆ ಎಂಬ ಸಂಗತಿಯನ್ನು ಹುಡುಕುವ ಸಮಯ ಬಂದಿದೆ ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು ಸದ್ಯದ ಪೀಠಾಧಿಪತಿಗಳಾದ ಸಿದ್ದರಾಮ ಸ್ವಾಮಿಗಳಿಗೆ ಒಂದು ಸಣ್ಣ ಪ್ರಶ್ನೆ ತಮ್ಮ ಮೊದಲಿನ ಪೀಠಾಧಿಪತಿಗಳ ಬದುಕು ಬರಹ ಅವರ ಆಚಾರ ವಿಚಾರಗಳು ಗಮನದಲ್ಲಿಟ್ಟುಕೊಂಡು ಮಾತನಾಡಿದರೆ ಚೆನ್ನಾಗಿರುತ್ತದೆ ಲಿಂಗೈಕ್ಯ ಜಗದ್ಗುರು ಸಿದ್ದಲಿಂಗ ಸ್ವಾಮಿಗಳು ಜನಿಸಿದ್ದು ಬಿಜಾಪುರ ಜಿಲ್ಲೆಯ ಸಿಂದಗಿ ಹಿರೇಮಠದಲ್ಲಿ ಅವರು ಗದುಗಿನ ಮಠಕ್ಕೆ ಪಟ್ಟಾಧಿಕಾರ ವಹಿಸಿಕೊಳ್ಳುವ ಮುಂಚೆ ಸಿಂದಗಿ ಮಠದ ಪಟ್ಟಾಧ್ಯಕ್ಷರಾಗಿದ್ದರು ನಂತರ ಗದುಗಿನ ಪೀಠ ಸಿಕ್ಕ ಬೆಲೆ ಅಪ್ಪಟ ವಿರಕ್ತಮಠದ ಸ್ವಾಮಿಗಳಾದರು ಮುಂಚೆ ಪಟ್ಟದೇವರಿದ್ದವರು ವಿ ರಕ್ತರಾದದ್ದು ಅನಂತರ ವೀರಶೈವರಿಗೂ ನಮಗೂ ಸಂಬಂಧವಿಲ್ಲವೆಂದು ಹೇಳಿದ್ದು ನಿಮ್ಮ ದಾರಿ ನಿಮಗೆ ನಮ್ಮ ದಾರಿ ನಮಗೆ ಎಂದು ಸ್ಪಷ್ಟ ಪಡಿಸಿದ್ದು ನೋಡಿದರೆ ಇವರು ನಿರಂತರವಾಗಿ ಬಣ್ಣ ಬದಲಿಸಿಕೊಂಡು ಬದುಕುತ್ತಾ ಬಂದಿರುವುದು ನಮ್ಮ ಗಮನಕ್ಕೆ ಬರುತ್ತದೆ ಇದು ಎಷ್ಟರಮಟ್ಟಿಗೆ ಸರಿ, ಸೈದ್ಧಾಂತಿಕ ನಿಲುವಿನ ಮೇಲೆ ನಾವು ಬಾಳಿ ಬದುಕಬೇಕೆ ವಿನಹ ಬದುಕುವುದಕ್ಕಾಗಿ ಸಮಯ ಸಾಧಕದನ ಅವಕಾಶವಾದಿತನ ಮಾಡಬಾರದು ಸಿದ್ಧಾಂತ ಬಿಟ್ಟು ಹೋಗಬಾರದು ಎಂಬುದು ಸಾಮಾನ್ಯ ತಿಳುವಳಿಕೆ ಸದ್ಯದ ಪೀಠಧಿಪತಿಗಳಾದ ಸಿದ್ದರಾಮ ಮಹಾಸ್ವಾಮಿಗಳು, ವೀರೇಶವ ಲಿಂಗಾಯತ ಬಗ್ಗೆ ಹೇಳಿಕೆ ಕೊಡುವಾಗ ತುಂಬಾ ಯೋಚನೆ ಮಾಡಿ ಅರ್ಥಪೂರ್ಣವಾಗಿ ನುಡಿದರೆ ಲಿಂಗ ಮೆಚ್ಚಿ ಹೌದೆನ್ನುವಂತೆ ಉತ್ತರಿಸಬೇಕು ಅಂದಾಗ ಸಮಾಜಕ್ಕೆ ಒಳಿತಾಗುತ್ತದೆ ಶ್ರೀಮಠಕ್ಕೆ ಮತ್ತು ಅವರಿಗೆ ಗೌರವ ಬರುತ್ತದೆ ಗುರು ವಿರಕ್ತರ ಭೇದ ಭಾವ ನಿಂತಾಗಲೇ ವೀರಶೈವ ಧರ್ಮದ ಉನ್ನತಿ ಸಾಧ್ಯ ಎಲ್ಲಿ ವೀರಶೈವ ಅಲ್ಲಿ ಗೊಂದಲದ ವೈಭವ ಅದು ಅವರ ಸ್ವಭಾವ ಅದಕ್ಕೆ ಕಾರಣ ಬಸವಣ್ಣನ ತತ್ವದ ಅಭಾವ ಎಂದು ಹೇಳಬೇಕು ಪ್ರೊಫೆಸರ್ ಶಿವರಾಜ್ ಪಾಟೀಲ್ ಚಿಂತಕರು ಕಲ್ಬುರ್ಗಿ