ಅಂದು ಏಕೀಕರಣ ಇಂದು ಪ್ರತ್ಯೇಕೀಕರಣ.
ಅಂದು ಏಕೀಕರಣ ಇಂದು ಪ್ರತ್ಯೇಕೀಕರಣ
. ಅಂದು ಕರ್ನಾಟಕ ರಾಜ್ಯ ಉದಯವಾಗಬೇಕು ಅದರಿಂದ ಸುವರ್ಣ ಹಾಗೂ ಸಮೃದ್ಧ ಸಂಪತ್ ಭರಿತ ಕರ್ನಾಟಕ ನಿರ್ಮಾಣವಾಗುತ್ತದೆ ಎಂದು ಕನಸು ಕಂಡು ಹಳೆ ಮೈಸೂರಿನವರು ನಮ್ಮನ್ನು ತಮ್ಮ ಜೊತೆಗೆ ಕರೆದುಕೊಂಡು ಹೋಗುತ್ತಾರೆ ಮತ್ತು ಬೆಳೆಸುತ್ತಾರೆ ಎಂಬ ಆಶಾ ಭಾವನೆಯಿಂದ ಅಂದು ಕರ್ನಾಟಕ ಏಕೀಕರಣಕ್ಕಾಗಿ ಹೋರಾಟ ಮಾಡಿ ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು ಎಂದು ಹಾಡಿದೆವು. ಆದರೆ ಇಂದು ಅಭಿವೃದ್ಧಿ ಕಾಣದೆ ಮಲತಾಯಿ ಧೋರಣೆ ತಾಳಿ ನಮ್ಮನ್ನು ಹಿಂದೆ ಬಿಟ್ಟು ತಮ್ಮ ಅಭಿವೃದ್ಧಿಯಲ್ಲಿ ತಾವು ತೊಡಗುತ್ತಾ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಹಚ್ಚುತ್ತಿರುವ ಈ ಸರಕಾರಗಳ ನಡೆ ನೋಡಿ ಬೇಸತ್ತು ಇಂದು ಪ್ರತ್ಯೇಕೀಕರಣಕ್ಕಾಗಿ ಹೋರಾಟ ಮಾಡಬೇಕಾದ ಅನಿವಾರ್ಯತೆ ಉಂಟಾಗಿದೆ ಇದು ಕನ್ನಡ ನಾಡು ಒಡೆಯುವುದಲ್ಲ ಸಮೃದ್ಧ ಕನ್ನಡ ನಾಡು ಕಟ್ಟುವುದು ಪ್ರತ್ಯೇಕೀಕರಣದಿಂದ 371 ಕಲಂ ಯಾವುದೇ ಧಕ್ಕೆ ಆಗುವುದಿಲ್ಲ ಅದನ್ನು ಬೇರೆಯವರು ಕಬಳಿಸಲು ಬರುವುದಿಲ್ಲ ಅದು ಕಲ್ಯಾಣ ಕರ್ನಾಟಕಕ್ಕೆ ಮಾತ್ರ ಸೀಮಿತ ಪ್ರತ್ಯೇಕೀಕರಣವಾದರೆ ಎರಡು ಸರ್ಕಾರಗಳು ಎರಡು ಅನುದಾನಗಳು ಕೇಂದ್ರದಿಂದ ದೊರೆಯುತ್ತವೆ ಅದರಿಂದ ಸಮಗ್ರ ಕರ್ನಾಟಕದ ಪ್ರಗತಿ ಸುಧಾರಣೆ ಬದಲಾವಣೆ ಸಾಧ್ಯವಾಗುತ್ತದೆ ಏಕೀಕರಣಗೊಂಡು ಅರ್ಧ ಶತಮಾನ ಕಳೆದರೂ ಇನ್ನೂ ನಾವು ಅರ್ಧ ದಾರಿಯಲ್ಲಿಯೇ ಇದ್ದೇವೆ. ಹಳೆ ಮೈಸೂರು ಅಭಿವೃದ್ಧಿಗೆ ಖರ್ಚಾಗುವುದರಲ್ಲಿ ಸ್ವಲ್ಪ ಭಾಗವನ್ನು ನಮಗೆ ಬರುವುದಿಲ್ಲ ಸಂಪೂರ್ಣ ನಿರ್ಲಕ್ಷಕ್ಕೆ ಒಳಗಾಗಿದ್ದೇವೆ ಈ ಭಾಗ ಅಭಿವೃದ್ಧಿಯ ನಕಾಶೆಯಿಂದ ಕಡೆಗಣಿಸಲಾಗಿದೆ ಉತ್ತರ ಕರ್ನಾಟಕದ 97 ಜನ ಶಾಸಕರಿದ್ದರು ಯಾರಿಗೂ ರಾಜಕೀಯ ಇಚ್ಛಾಶಕ್ತಿ ಇಲ್ಲ ಇವರು ಒಂದಾಗಿ ಪ್ರತಿಭಟನೆ ಹೋರಾಟ ಮಾಡುತ್ತಿಲ್ಲ ಪ್ರದೇಶದ ಅಭಿವೃದ್ಧಿಗಿಂತ ಸ್ವಯಂ ಅಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದ್ದಾರೆ ಈ ಭಾಗದ ಅಭಿವೃದ್ಧಿ ಸಂಪೂರ್ಣ ನಿರ್ಲಕ್ಷಿಸಿದ್ದಾರೆ ಅದಕ್ಕಾಗಿ ಇಂದು ಪ್ರತ್ಯೇಕ ಉತ್ತರ ಕರ್ನಾಟಕ ಅವಶ್ಯವಾಗಿದೆ ಬೆಳಗಾವಿ ಈಗಾಗಲೇ ರಾಜಧಾನಿಯಂತೆ ಶೋಭಿಸುತ್ತಿದೆ ಅಲ್ಲಿ ಎಲ್ಲಾ ಮೂಲಭೂತ ಸೌಕರ್ಯಗಳು ನಿರ್ಮಾಣಗೊಂಡಿವೆ ಹೀಗಾಗಿ ಬೆಳಗಾವಿಯನ್ನು ಕೇಂದ್ರವನ್ನಾಗಿರಿಸಿಕೊಂಡು ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಮಾಡಿದರೆ ಒಳ್ಳೆಯದು ಇಲ್ಲದಿದ್ದರೆ ಉಗ್ರವಾದ ಹೋರಾಟ ಮಾಡಬೇಕಾಗುತ್ತದೆ ಮತ್ತು ಸಂಘಟಿತ ಹೋರಾಟದ ದಾರಿ ಹಿಡಿಯುವುದು ಅನಿವಾರ್ಯವಾಗುತ್ತದೆ ಎಲ್ಲಿಯವರೆಗೆ ಈ ಬೇಡಿಕೆ ಈಡೇರುವುದಿಲ್ಲವೋ ಅಲ್ಲಿಯವರೆಗೆ ಉತ್ತರ ಕರ್ನಾಟಕ ಸಮಸ್ಯೆಗಳಿಗೆ ಉತ್ತರ ಸಿಗುವುದಿಲ್ಲ ಹಾಗೆ ತತ್ತರಗೊಂಡು ಉಳಿಯುತ್ತದೆ ಎಂಬುದರಲ್ಲಿ ಸಂದೇಹವಿಲ್ಲ ಶಾಸಕ ರಾಜು ಕಾಗೆಯವರ ಧನಿಗೆ ಧನಿಯಾಗೋಣ ಅವರ ಹೋರಾಟಕ್ಕೆ ಬೆಂಬಲಿಸೋಣ ಎಲ್ಲ ಶಾಸಕರು ಅವರ ದಾರಿಯನ್ನು ತುಳಿಯಬೇಕು ಕೆಲವರು ಕಲ್ಯಾಣ ಕರ್ನಾಟಕದ ಹೆಬ್ಬಾಗಿಲದ ಕಲಬುರ್ಗಿ ರಾಜಧಾನಿ ಆಗಬೇಕೆಂದು ಬಯಸುತ್ತಾರೆ ಇನ್ನು ಕೆಲವರು ಬಾಗಲಕೋಟೆಯಾಗಲೆಂದು ಆಶಿಸುತ್ತಾರೆ ಆದರೆ ಈಗಾಗಲೇ ಬೆಳಗಾವಿಯಲ್ಲಿ ವಿಧಾನಸೌಧ ಇರುವುದರಿಂದ ಮತ್ತು ಚಳಿಗಾಲದ ಅಧಿವೇಶನ ಅಲ್ಲಿ ನಡೆಯುತ್ತಿರುವುದರಿಂದ ಉತ್ತರ ಕರ್ನಾಟಕ ರಾಜ್ಯ ನಿರ್ಮಾಣಕ್ಕೆ ಮುನ್ನುಡಿ ಬರೆದಂತಿದೆ ಅದಕ್ಕಾಗಿ ನಮಗೆ ಪ್ರತ್ಯೇಕ ಉತ್ತರ ಕರ್ನಾಟಕ ಬೆಳಗಾವಿಯಿಂದ ಬೀದರ್ ರವರಿಗೆ 15 ಜಿಲ್ಲೆಗಳ ನಕಾಶೆ ಬೇಕಾಗಿದೆ ದಯವಿಟ್ಟು ಕೇಂದ್ರ ಸರ್ಕಾರ ಗಮನಹರಿಸಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಘೋಷಣೆ ಮಾಡಬೇಕೆಂದು ಪ್ರೊ. ಶಿವರಾಜ್ ಪಾಟೀಲ್ ಸಲಹೆಗಾರರು ಉತ್ತರ ಕರ್ನಾಟಕ ಹೋರಾಟ ಸಮಿತಿ ಅವರು ಒತ್ತಾಯಿಸಿದ್ದಾರೆ.
