ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಮಹಾಸ್ವಾಮಿಗಳು

ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಮಹಾಸ್ವಾಮಿಗಳು

ಕಾರಣಿಕ ಯುಗಪುರುಷ ಹಾನಗಲ್ ಕುಮಾರ ಮಹಾಸ್ವಾಮಿಗಳು 

    ನಮ್ಮ ನಾಡಿನ ಇತಿಹಾಸ ಪರಂಪರೆಯಲ್ಲಿ ಅನೇಕ ಸಂತ ಮಹಾತ್ಮಾ ಶರಣರು ಶಿವಯೋಗಿಗಳು ಆಗಿಹೋಗಿದ್ದಾರೆ, ನಾಡಿನಲ್ಲಿ ಅಜ್ಞಾನ ಅಂಧಕಾರ ಧರ್ಮ ನಶಿಸುವ ಸಮಯದಲ್ಲಿ ಒಬೊಬ್ಬ ಮಹಾನುಭಾವರು ಸಂತರು ಸ್ವಾಮಿಗಳು ಅವತಾರಿಸಿದ್ದಾರೆ ಅಂತವರ ಸರಮಾಲಿಕೆಯಲ್ಲಿ ಶಿವಯೋಗ ಮಂದಿರದ ಸಂಸ್ಥಾಪಕರಾದ ಪೂಜ್ಯ ಶ್ರೀ ಕುಮಾರ ಮಹಾಶಿಯೋಗಿಗಳು, ಇವರು 17 ಸೆಪ್ಟೆಂಬರ್ 1867ರಲ್ಲಿ ಹಾವೇರಿ ಜಿಲ್ಲೆಯ ಜೋಯಿಸರ ಹರಳಹಳ್ಳಿ ಗ್ರಾಮದ ಸದಾಚಾರ ಭಕ್ತಿಮಯ ಧಾರ್ಮಿಕತೆಯ ಮನೆತನದ ಪುಣ್ಯದಂಪತಿಗಳಾದ ಶ್ರೀ ಬಸವಯ್ಯ ಮತ್ತು ನೀಲಮ್ಮ ನವರ ಪುಣ್ಯಗರ್ಭದಲ್ಲಿ ಜನಿಸಿದರು, ಇವರ ಮೂಲ ಹೆಸರು ಹಾಲಯ್ಯ, ಇವರ ಮನೆತನ ಜಂಗಮರ ಮನೆತನವಾದ ಕಾರಣ ಮನೆಯಲ್ಲಿ ಚಿಕ್ಕವಯಸ್ಸಿನಲ್ಲಿಯೇ ಊರಲ್ಲಿ ಜೋಳಿಗೆಯ ಹಿಡಿದು ಭಿಕ್ಷೆಗೆ ಹೋಗೋದು, ಬೇಡಿತಂದು ಅನೇಕ ಬಡ ಬಗ್ಗರಿಗೆ ದಾಸೋಹ ಮಾಡೋದು ಕರಕೊಂಡು ಉಣ್ಣೊದು ಚಿಕ್ಕ ವಯಸ್ಸಿನಲ್ಲಿಯೇ ಕುಮಾರ ಶಿವಯೋಗಿಗಳು ಧಾರ್ಮಿಕತೆ ಸಾಮಾಜಿಕ ಕಳಕಳಿಯನ್ನು ಹೊಂದಿದ್ದರು, ಇವರು ಆಗಿನ ಕಾಲದಲ್ಲಿಯೇ ಧಾರವಾಡಕ್ಕೆ ತೆರಳಿ ಮೂಲ್ಕಿ ಪರೀಕ್ಷೆ ಬರೆದರು, ಪ್ರಾಥಮಿಕ ಶಿಕ್ಷಣ ಮುಗಿಸೋದರಲ್ಲಿ ಪೂರ್ಣ ಧಾರ್ಮಿಕತೆಯ ಕಡೆಗೆ ಒಲವು ಮೂಡಿತು, ತಾಯಿಯ ತವರಾದ ಲಿಂಗದಹಳ್ಳಿಯಲ್ಲಿ ಮಕ್ಕಳಿಗೆ ಶಿಕ್ಷಣವನ್ನು ನೀಡುತ್ತಾ ಶಾಸ್ತ್ರ ಸ್ವ ಅದ್ಯಾಯವನ್ನು ಮಾಡುತ್ತಾ, ನಿಜಗುಣ ಶಾಸ್ತ್ರ, ತತ್ವಜ್ಞಾನ ಅನೇಕ ವಿಷಯಗಳನ್ನು ಬಸಯ್ಯನವರ ಸಂಪರ್ಕದಿಂದ ಪಡೆದು, ಹದಿಹರೆಯದ ವಯಸ್ಸಿನಲ್ಲಿ ತಮ್ಮ ಊರಿಗೆ ಬಂದರು, ತಾಯಿ ಮದುವೆ ಪ್ರಸ್ತಾಪ ಮಾಡಿದಾಗ ನಾನು ಇದ್ರೀಯ ಸುಖಕ್ಕಾಗಿ ಭೂಮಿಗೆ ಬಂದಿಲ್ಲ ಅಮ್ಮ ಅಂದು ತ್ಯಾಗದ ನುಡಿಯನ್ನು ನುಡಿದು ಶಿಕ್ಷಕನ ಕಾಯಕದಿಂದ ಗಳಿಸಿದ ಮೂರುನೂರು ರೂಪಾಯಿಯನ್ನು ತಾಯಿಗೆ ಅರ್ಪಿಸಿ ಇಂದಿಗೆ ತಾಯಿ ಮಗನ ಸಂಭಂದ ಹರಿಯಿತು ಎಂದು ಮನೆಯನ್ನು ತೊರೆದು ನಡೆದರು, ಹುಬ್ಬಳಿಯ ಸಿದ್ಧಾರೋಢ ರಿಂದ ಷಟಸ್ಥಳ ಸಿದ್ಧಾಂತದ ಅಧ್ಯಾಯನ ಮಾಡಿದರು ಮುಂದೆ ಎಮ್ಮಿಗನೂರ ಜೆಡೆಸಿದ್ದತಾತನವರ ಕೃಪೆ ಯೋಗಗಳನ್ನು ಸಾದಿಸಿದರು, ಹಾಗೂ ಏಳಂದೂರ ಬಸವಲಿಂಗ ಸ್ವಾಮಿಗಳ ಕೃಪೆ ಪಡೆದರು, ಮುಂದೆ ಹಾನಗಲ್ ಮಠಕ್ಕೆ ಪೀಠಧಿಪತಿ ಆದರು ಹೀಗೆ ಅನೇಕ ಕಡೆಗಳಲ್ಲಿ ಸಂಚಾರ ಮಾಡಿ ಆಗಿನ ಕಾಲದಲ್ಲಿಯೇ ಸಮಾನತೆ ಸಾರುವಂತ ಕಾರ್ಯ ಸಂಸ್ಕೃತ ಪಾಠಶಾಲೆಗಳನ್ನು ತೆಗೆದರು, ಪ್ರಸಾದ ನಿಲಯಗಳನ್ನು ಹಾಗೂ ಬರಗಾಲ ಆವರಿಸಿದಾಗ ಸುತ್ತಮುತ್ತಲಿನ ಗ್ರಾಮದ ಭಕ್ತರಿಗೆ ಪ್ರಸಾದ ವ್ಯವಸ್ಥೆ, ಜನರಿಗೆ ರೋಗ ಅಂಟಿದಾಗ ಸ್ವತಃ ನಾಟಿವೈದ್ಯರಾಗಿ ರೋಗ ಪರಿಹರಿಸಿದ ಭವರೋಗದ ವೈದ್ಯರು ಶ್ರೀ ಕುಮಾರ ಸ್ವಾಮಿಗಳು, ಸಮಾಜದ ಒಗ್ಗಟ್ಟಿಗಾಗಿ 1904ರಲ್ಲಿ ಅಖಿಲ ಭಾರತ ವೀರಶೈವ ಮಹಾಸಭಾ ಸ್ಥಾಪಿಸಿದ ಮಹಾತ್ಮರು, ನಮ್ಮ ಭಾರತ ದೇಶದ ಪರಂಪರೆಯಲ್ಲಿ ಕಾವಿಧಾರಿಗಳಿಗೆ ಮಹತ್ವದ ಗೌರವ ಸಮಾಜವನ್ನು ಧರ್ಮದ ತಳಹದಿಯ ಮೇಲೆ ನಡೆಯಲು ಮುಖ್ಯವಾಗಿ ಮಠಧಿಷರು ಸಕಲ ವಿದ್ಯೆಯನ್ನು ಕಲಿತು ಸಮಾಜಕ್ಕೆ ಉಪದೇಶ ಮಾಡಲು ಮಠಧೀಶರನ್ನು ರೂಪಿಸಲು 1909ರಲ್ಲಿ ಶಿವಯೋಗ ಮಂದಿರ ಸ್ಥಾಪನೆ ಮಾಡಿದರು, ಇಲ್ಲಿ ವಿಶೇಷವಾಗಿ ಗೋವಿನಿಂದ ಮಾಡಿದ ಪವಿತ್ರ ವಿಭೂತಿ ಇಲ್ಲಿ ದೊರೆಯುತ್ತದೆ, ಅಷ್ಟೇ ಅಲ್ಲದೆ ಸಂಗೀತ ಲೋಕಕ್ಕೆ ಪಂಚಾಕ್ಷರಿ ಗವಾಯಿಗಳನ್ನು ಸಮಾಜಕ್ಕೆ ನೀಡಿದ ಶ್ರೇಯಸ್ಸು, ಇಪ್ಪತ್ತೊಂದನೇ ಶತಮಾನದಲ್ಲಿ ನಾಡಿನಲ್ಲಿ ಇಷ್ಟೆಲ್ಲಾ ಪ್ರವಚನಕಾರರನ್ನ ಸಂಗೀತಗಾರರನ್ನು ನೋಡ್ತಿವಿ ಅಂದರೆ ಅದಕ್ಕೆ ಕಾರಣ ಶ್ರೀ ಕುಮಾರ ಶಿವಯೋಗಿಗಳು ಇಂತಹ ಮಹಾಸ್ವಾಮಿಗಳ ಜನ್ಮದಿನ ಈ ಸುದಿನ ಪರಮ ಗುರುವಾದ ಶ್ರೀ ಕುಮಾರ ಮಹಾಶಿವಯೋಗಿಗಳ ಜನ್ಮದಿನದ ಪ್ರಣಾಮಗಳು.

         -ಶ್ರೀ ನಾಗಲಿಂಗಯ್ಯ ಶಾಸ್ತ್ರಿಗಳು ಸ್ಥಾವರಮಠ ಸುಂಟನೂರ