ಧೀಮಂತ ಮಹಿಳೆ ಕಿತ್ತೂರು ರಾಣಿ
ಧೀಮಂತ ಮಹಿಳೆ ಕಿತ್ತೂರು ರಾಣಿ
ಕನ್ನಡ ನಾಡು ಕಂಡ ಧೀಮಂತ ಮಹಿಳೆ,ಸೂರ್ಯ ಮುಳುಗದ ಸಾಮ್ರಾಜ್ಯಕ್ಕೆ ಬಿಸಿ ತುಪ್ಪವಾಗಿ ನಿಂತಿದ್ದ ವಿಭೂತಿ ಧಾರಿಣಿ ಅವಳೇ ಕಿತ್ತೂರು ಸಂಸ್ಥಾನದ ಹೆಮ್ಮೆಯ ವೀರ ರಾಣಿ ಚೆನ್ನಮ್ಮ.
ಪಂಚಮಸಾಲಿ ಕುಟುಂಬದ ಧೂಳಪ್ಪಗೌಡ ದೇಸಾಯಿ ಮತ್ತು ಲಕ್ಕಮ್ಮನವರ ಮಗಳಾಗಿ ಅಕ್ಟೋಬರ್ 23 1778 ರಲ್ಲಿ ಇಂದಿನ ಬೆಳಗಾವಿ ಜಿಲ್ಲೆಯ ಕಾಕತಿ ಎಂಬ ಪುಟ್ಟ ಗ್ರಾಮದಲ್ಲಿ ಜನಿಸಿದರು.
ಬಾಲ್ಯದಲ್ಲಿಯೇ ಪ್ರತಿಭಾ ಸಂಪನ್ನಳಾಗಿದ್ದ ರಾಣಿ ಚೆನ್ನಮ್ಮ ನವರು ಕತ್ತಿ ವರಸೆ, ಕುದುರೆ ಸವಾರಿ,ಮೊದಲಾದ ಯುದ್ಧದ ತರಬೇತಿಗಳನ್ನು ಪಡೆದುಕೊಂಡಿದ್ದರು.ಮಹಿಳೆಯರನ್ನು ಹೊರಗೆ ಒಬ್ಬಂಟಿಯಾಗಿ ಬಿಡದ ಆಗಿನ ಕಾಲದಲ್ಲಿ ಬ್ರಿಟಿಷ್ ಸತ್ತೆಯನ್ನು ಸಮರ್ಥವಾಗಿ ಎದುರಿಸಿ ಇಂದಿನ ಮಹಿಳಾ ಮಣಿಗಳಿಗೆ ಮಾದರಿಯಾಗಿದ್ದಾಳೆ.ಹೆಣ್ಣು ಅಬಲೆ ಅಲ್ಲ ಸಬಲೆ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾಳೆ.ತಾನು ಹುಟ್ಟಿದ ಮನೆ ಮನೆತನದ ಗೌರವದ ಜೊತೆ ಜೊತೆಗೆ ನಾಡ ರಕ್ಷಣೆಗೆ ದಿಟ್ಟತನದ ಕ್ಷಾತ್ರ ತೇಜಸ್ಸು ಹೊಂದಿದ್ದಳು.ಮುಂದೆ ಮಲ್ಲಸರ್ಜ ದೇಸಾಯಿಯನ್ನು ಮದುವೆಯಾಗಿ ಕಿತ್ತೂರಿಗೆ ಪಾದಾರ್ಪಣೆ ಮಾಡಿದ ಮೇಲೆ ಬ್ರಿಟಿಷರ ದಬ್ಬಾಳಿಕೆಯನ್ನು ಪ್ರಶ್ನಿಸಿದಳು.ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿದ್ದ ಈ ನಾಡು ಕಪ್ಪ ಕಾಣಿಕೆ ಕೊಡುವಂತೆ ಬೇಡಿಕೆ ಇಟ್ಟಾಗ ತಾಯಿ ಚೆನ್ನಮ್ಮ ಧಾರವಾಡದ ಕಲೆಕ್ಟರ ಥ್ಯಾಕರೆಗೆ ಕೊಟ್ಟ ಹೆ ಉತ್ತರ ಇಡೀ ಕನ್ನಡ ನಾಡು ಮಾರ್ಧನಿಸುವಂತಾಯಿತು.ರಾಣಿ ಚೆನ್ನಮ್ಮ ನೀಡಿದ ಉತ್ತರ ಮೈಯಲ್ಲಿನ ರೋಮ ಸೆಟೆದು ನಿಂತವು ದೇಶಾಭಿಮಾನ ಅಂತ ಬಂದಾಗ ಭಾರತೀಯರು ಹೀಗೆ ಇರಬೇಕು ಎಂಬುದನ್ನು ವೀರರಾಣಿ ಚೆನ್ನಾಮ್ಮಾಜಿಯ ಜೀವನ ಚರಿತ್ರೆಯಿಂದ ತಿಳಿದುಕೊಳ್ಳಬಹುದು.ದೇಶ ಗುಲಾಮ ಸ್ಥಿತಿಯಲ್ಲಿದ್ದಾಗ ಸ್ವಾಭಿಮಾನಕ್ಕಾಗಿ ಹೋರಾಡಿದಳು.ವೀರರಾಣಿಯ ಹೋರಾಟಕ್ಕೆ ಬೆನ್ನೆಲುಬಾಗಿ ನಿಂತವರು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ.
ಶ್ರೀ ವಿಶ್ವನಾಥ ಅಂದಪ್ಪ ಆದಿ ಜಕ್ಕಲಿ
ವರದಿ ಶ್ರೀ ಹುಚ್ಚೀರಪ್ಪ ವೀರಪ್ಪ ಈಟಿ ಕಲ್ಯಾಣ ಕಹಳೆ ಗದಗ
