ಕನ್ನಡ ನಾಡು ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭ

ಕನ್ನಡ ನಾಡು ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಲೋಕಾರ್ಪಣೆ ಸಮಾರಂಭ
ಕಲಬುರಗಿ: ಫೆ 7 ಕನ್ನಡನಾಡು ಲೇಖಕರ ಮತ್ತು ಓದುಗರ ಸಹಕಾರ ಸಂಘದ ವತಿಯಿಂದ ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರಿಗೆ ಜೀವಮಾನದ ಸಾಧನೆಗಾಗಿ ಪ್ರತಿ ವರ್ಷ ನೀಡಲಾಗುವ ಡಾ: ಎಸ್.ಎಸ್.ಸಿದ್ದಾರೆಡ್ಡಿ ಸ್ಮಾರಕ ಕನ್ನಡ ನಾಡು ಸಾಹಿತ್ಯ ಶ್ರೀ ಪ್ರಶಸ್ತಿಯನ್ನು 2023ನೇ ಸಾಲಿಗೆ ಕೊಪ್ಪಳದ ಶ್ರೀ ಎಚ್.ಎಸ್.ಪಾಟೀಲ ಅವರಿಗೆ ನೀಡಲಾಗಿದೆ ಎಂದು ಸಂಘದ ಸಂಸ್ಥಾಪಕ ಅಧ್ಯಕ್ಷ ಅಪ್ಪಾರಾವ ಅಕ್ಕೋಣಿ ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಪ್ರಶಸ್ತಿಯು 11000 ರೂ ನಗದು, ಫಲಕ ಹಾಗೂ ಪ್ರಮಾಣ ಪತ್ರಗಳನ್ನು ಒಳಗೊಂಡಿದೆ. ಇದೇ ಫೆಬ್ರುವರಿ 9 ರಂದು ಮುಂಜಾನೆ 10 ಗಂಟೆಗೆ ಶ್ರೀಮತಿ ವೀರಮ್ಮ ಗಂಗಸಿರಿ ಮಹಿಳಾ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಪ್ರಶಸ್ತಿಗಳನ್ನು ನೀಡಲಾಗುವದೆಂದು ಅಪ್ಪಾರಾವ ಅಕ್ಕೋಣಿ ಅವರು ತಿಳಿಸಿದರು. ಶಾಸಕರಾದ ಶ್ರೀ ಅಲ್ಲಮ ಪ್ರಭು ಪಾಟೀಲ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಈ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವ ವಿದ್ಯಾಲಯದ ಕುಲಪತಿಗಳಾದ ಪ್ರೋ. ಶರಣಪ್ಪ ವಿ. ಹಲಸೆ ಅವರು ಪ್ರಶಸ್ತಿ ಪ್ರದಾನ ಮಾಡುವರು. ಸಂಘವು 2024ನೆಯ ಸಾಲಿನಲ್ಲಿ ಪ್ರಕಟಿಸಿದ ಹತ್ತು ಕೃತಿಗಳನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅವರು ಲೋಕಾರ್ಪಣೆ ಮಾಡುವರು. ಶ್ರೀ ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿಗಳಾದ ಶ್ರೀ ಬಸವರಾಜ ದೇಶಮುಖ ಅವರು ಮುಖ್ಯ ಅತಿಥಿಗಳಾಗಿರುವರು. ಈ ಕಾರ್ಯಕ್ರಮವು ಶ್ರೀಮತಿ ವೀರಮ್ಮ ಗಂಗಸಿರಿ ಮಾಹಿಳಾ ಕಾಲೇಜಿನ ಕನ್ನಡ ಸಾಹಿತ್ಯ ಸಂಘದ ಸಹಯೋಗದೊಂದಿಗೆ ನಡೆಯುತ್ತಿದೆ
ಕಲ್ಯಾಣ ಕರ್ನಾಟಕ ಪ್ರದೇಶದ ಲೇಖಕರ ಕೃತಿಗಳಿಗೆ ಪ್ರಶಸ್ತಿಯನ್ನು ಪ್ರತಿ ವರ್ಷ ನೀಡಲಾಗುವದು. ಈ " ಕನ್ನಡನಾಡು ಸಾಹಿತ್ಯಕೃತಿ” ಪ್ರಶಸ್ತಿಯು ತಲಾ 5000 ರೂ ನಗದು ಫಲಕ, ಪ್ರಮಾಣ ಪತ್ರವನ್ನು ಒಳಗೊಂಡಿದೆ. 2023ನೇ ಸಾಲಿನ ಶ್ರೀಮತಿ ಮಾಪಮ್ಮ ಶಂಭುಲಿಂಗ ಹೊಸಮನಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಡಾ. ಉಮಾದೇವಿ ಆರ್.ದಂಡೋತಿ ಅವರ " ತ್ರೀವೇಣಿಯವರ ಕಾದಂಬರಿಗಳಲ್ಲಿ ಸ್ತ್ರೀ ಪಾತ್ರಗಳು"ಪ್ರೊ.ಎಸ್.ಜಿ. ಮೇಳಕುಂದಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿ ಶ್ರೀ ಸಿದ್ದರಾಮ ಹೊನಕಲ್ ಅವರ ಶಾಯರಿ ಲೋಕ" (ಕವನಸಂಕಲನ) ಕೃತಿಗೆ ನೀಡಲಾಗಿದೆ. ಶ್ರೀಮತಿ ಬಸಮ್ಮ ತುಳಜಪ್ಪ ಉಪಳಾಂವಕರ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಯನ್ನು ಸಂಕೀರ್ಣ ವಿಭಾಗದಲ್ಲಿ ಶ್ರೀ ಡಾ. ಅಮರೇಶ ಯತಗಲ್ ಅವರ " ಗತಾನು ಶೀಲನ" ಕೃತಿಗೆ ನೀಡಲಾಗಿದ್ದು, ಶ್ರೀಮತಿ ಶರಣಮ್ಮ ವೀರಭದ್ರಪ್ಪ ಅಕ್ಕೋಣಿ ಸ್ಮಾರಕ ಸಾಹಿತ್ಯ ಕೃತಿ ಪ್ರಶಸ್ತಿಯನ್ನು ಶ್ರೀ ಸುಭಾಶ್ಚಂದ್ರ ಕಶೆಟ್ಟಿ ಅವರ ಕಥಾಸಂಕಲನ “ ಕಥಾ ನಕ್ಷತ್ರಗಳು” ಪುಸ್ತಕಕ್ಕೆ ನೀಡಲಾಗಿದ್ದು, ಕನ್ನಡ ನಾಡು ಲೆಖಕರ ಸಂಘದ ಸಾಹಿತ್ಯ ಕೃತಿ ಪ್ರಶಸ್ತಿ ಶ್ರೀ ಗುಂಡೂರಾವ ದೇಸಾಯಿಯವರ " ಸೊಳ್ಳೆ ಫ್ರೆಂಡು ಒಳ್ಳೆ ಫ್ರೆಂಡು" ಕಾದಂಬರಿ ಪುಸ್ತಕಕ್ಕೆ ನೀಡಲಾಗಿದೆ.
2024 ನೇ ಸಾಲಿನಲ್ಲಿ ಸಂಘ ಪ್ರಕಟಿಸಿದ ಅಕಬರ್ ಸಿ ಕಾಲಿಮಿರ್ಜಿ ಅವರ " ಎಕ್ಸ್‌ಲೇಟರ್", ಡಾ. ವೀರಶೆಟ್ಟಿ ಗಾರಂಪಳ್ಳಿ ಅವರ " ಗತಕಥನ' ಸಂಕೀರ್ಣ", ಡಾ. ಕರುಣಾ ಜಮದರಖಾನಿ ಅವರ • ಸಂಗಾತ' ವೀರಹನುಮಾನ ಅವರ ಕಾಯಕ ಶರಣರು,ಡಾ. ಶಶಿಕಲಾ ಮೋಳ್ದಿ ಅವರ ಉತ್ತರ ಕರ್ನಾಟಕದ ಜಾನಪದ ಆಚರಣೆಗಳು", ಅಪ್ಪಾರಾವ ಅಕ್ಕೋಣಿಯವರ "ಸಂತೃಪ್ತ" ಆತ್ಮಕಥನ, ಮುರಗೆಪ್ಪ ಹಣಮನಹಳ್ಳಿ ಅವರ ಚೆಲುವಿನೊಳಗಿಲ್ಲದ ಚೆಲುವ, ಪ್ರಭಾಕರ ಜೋಶಿ ಅವರ " ಲವ್ ಕ್ಯಾಪ್ಸಲ್ ಮತ್ತು ಇತರ ನಾಟಕಗಳು" ದಿವಂಗತ ಖಾದ್ರಿ ಎಸ್ ಅಚ್ಯುತನ್ ಅವರ ಹದ್ದಿನಕಣ್ಣು ಲೋಕಾರ್ಪಣೆಗೊಳ್ಳಲಿವೆ.
ಕಲ್ಯಾಣ ಕನಾಟಕ ಪ್ರದೇಶದಲ್ಲಿ ಪುಸ್ತಕ ಸಂಸ್ಕೃತಿಯನ್ನು ಬೆಳೆಸುವ ಉದ್ದೇಶದಿಂದ 2008 ರಲ್ಲಿ ಸ್ಥಾಪಿತವಾದ ಕರ್ನಾಟಕ ರಾಜ್ಯದ ಏಕಮೇವ ನೋಂದಾಯಿತ ಸಹಕಾರಿ ಸಂಘ, ಕನ್ನಡ ನಾಡು ಲೇಖಕರ ಮತ್ತು ಓದುಗರ ವಹಕಾರ ಸಂಘ, ಈ ಭಾಗದ ಲೇಖಕರಿಗೆ ಪ್ರೋತ್ಸಾಹಿಸುವದು ಮತ್ತು ವಿದ್ಯಾರ್ಥಿಗಳಲ್ಲಿ ಓದುವ ಹವ್ಯಾಸ ಬೆಳೆಸುವದು ಕೂಡ ಸ೦ಘದ ಉದ್ದೇಶವಾಗಿದೆ. ಸಂಘವು ಇಲ್ಲಿಯವರೆಗೆ 163ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಲಾಗಿದೆ. ಇವುಗಳೆಲ್ಲವು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಸಗಟು ಖರೀದಿಗೆ ಆಯ್ಕೆಯಾಗಿದ್ದು ಆನೆಕ ಪ್ರಶಸ್ತಿಗಳು ಬಂದಿವೆ. ಪಠ್ಯಪುಸ್ತಕಗಳಾಗಿವೆ, ಮರು ಮುದ್ರಣ ಗೊಂಡಿವೆ. ಗುಲಬರ್ಗಾ 'ವಿಶ್ವ ವಿದ್ಯಾಲಯ ಸಂಘಕ್ಕೆ. “ ಉತ್ತಮ ಪ್ರಕಾಶಕರು" ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದು, ಹೆಮ್ಮೆಯ ವಿಷಯ. ಇಲ್ಲಿಯವರೆಗೆ ಜೀವಮಾನದ ಸಾಧನೆಗಾಗಿ ನೀಡಲಾಗುವ ಕನ್ನಡನಾಡು ಸಾಹಿತ್ಯ ಶ್ರೀ ಪ್ರಶಸ್ತಿಗೆ, ಡಾ: ಮ ಗು. ಬಿರಾದಾರ, ಚನ್ನಣ್ಣ ವಾಲೀಕಾರ, ಡಾ: ಗೀತಾನಾಗಭೂಷಣ. ಎ.ಕೆ. ರಾಮೇಶ್ವರ, ಕೊಪ್ಪಳದ ಅಲ್ಲಮಪ್ರಭು ಬೆಟ್ಟದೂರ, ರಾಯಚೂರಿನ ಜಂಬಣ್ಣ ಅಮರಚಿಂತ, ಡಾ: ಶಾಶ್ವತ ಸ್ವಾಮಿ ಮುಕ್ಕುoದಿಮಠ, ಯಾದಗಿರಿಯ ಚಂದ್ರಕಾಂತ ಕರದಳ್ಳಿ, ಬೀದರನ ವೀರೇಂದ್ರ ಸಿಂಪಿ, ಡಾ. ಪಿ.ಎಸ್.ಶಂಕರ್ ಮುಂತಾದವರು ಭಾಜನರಾಗಿದ್ದಾರೆ.
ಸಂಘದ ಉಪಾಧ್ಯಕ್ಷ ಡಾ ಸ್ವಾಮಿರಾವ ಕುಲಕರಣಿ . ಕಾರ್ಯಕ್ರಮ ಸಂಯೋಜಕ ಡಾ. ಶರಣಬಸಪ್ಪ ವಡ್ಡ ನಕೇರಿ, ನಿರ್ದೇಶಕರಾದ ಶ್ರೀ ಎಸ್. ಕೆ. ಬಿರಾದಾರ ಇದ್ದರು.