ತಂದೆ-ತಾಯಿಯ ಸೇವೆ ದೊಡ್ಡದು :ಎ.ಕೆ.ರಾಮೇಶ್ವರ

ತಂದೆ-ತಾಯಿಯ ಸೇವೆ ದೊಡ್ಡದು :ಎ.ಕೆ.ರಾಮೇಶ್ವರ

ತಂದೆ-ತಾಯಿಯ ಸೇವೆ ದೊಡ್ಡದು :ಎ.ಕೆ.ರಾಮೇಶ್ವರ

ಕಲಬುರಗಿ : ಎಲ್ಲಾ ಕಡೆ ದೇವರೇ ಬಂದು ಕೆಲಸ ಮಾಡಲು ಆಗಲ್ಲ ಎಂಬ ಕಾರಣದಿಂದಲೇ ತಂದೆ- ತಾಯಿಯರ ಸೃಷ್ಟಿಯಾಗಿದೆ ಎಂಬ ಮಾತಿನಂತೆ, ತಂದೆ-ತಾಯಿಯರೇ ನಮಗೆ ನಿಜವಾದ ದೇವರು, ಅವರ ಮಾರ್ಗದರ್ಶನದಲ್ಲಿ ನಡೆದರೆ ಬೇರೊಬ್ಬರ ಮುಂದೆ ತಲೆತಗ್ಗಿಸುವ ಸಂದರ್ಭಗಳು ಬರುವುದಿಲ್ಲ ಎಂದು ಖ್ಯಾತ ಮಕ್ಕಳ ಸಾಹಿತಿ ಎ.ಕೆ.ರಾಮೇಶ್ವರ ಹೇಳಿದರು.

ಕಮಲಾಪುರ ತಾಲೂಕಿನ ಮಹಾಗಾವ್ ಕ್ರಾಸ್ ಸಮೀಪದ ಸಂಜೀವಿನಿ ವೃದ್ಧಾಶ್ರಮದಲ್ಲಿ ಹೆಳವರ ಪರಿವಾರದ ವತಿಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಶರಣೆ ಲಿಂ. ನಾಗಮ್ಮ ಹೇಳವರ ಅವರ ಪ್ರಥಮ ಪುಣ್ಯ ಸ್ಮರಣೆ ನಿಮಿತ್ತ ಹಮ್ಮಿಕೊಂಡ "ಹಿರಿಯರನ್ನು ಗೌರವಿಸಿ-ಸುಸಂಸ್ಕೃತ ಸಮಾಜ ಕಟ್ಟೋಣ" ಎಂಬ ವಿಶೇಷ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ನಮಗೆ ಪ್ರಪಂಚವನ್ನು ತೋರಿಸಿದ ಪಾಲಕರ ಋಣ ತೀರಿಸುವ ಕೆಲಸ ಮಾಡುವುದು ಪ್ರತಿಯೊಬ್ಬರ ಆದ್ಯ ಕರ್ತವ್ಯವಾಗಿದೆ, ಸಕಲ ಜೀವಾತ್ಮರಿಗೆ ಲೇಸನ್ನು ಬಯಸುವ ಮನೋಭಾವ ಬೆಳೆಸಿಕೊಳ್ಳಬೇಕು, ಬಡವರ , ಶೋಷಿತರ ಕಣ್ಣೀರು ಒರೆಸುವ ಕೆಲಸಕ್ಕೆ ಮುಂದಾಗಬೇಕು, ಹತ್ತು ಸಾವಿರ ಜನ ದೊಡ್ಡವರನ್ನು ಕರೆಸಿ, ಪುಣ್ಯಸ್ಮರಣೆ ಮಾಡುವುದಕ್ಕಿಂತ ಹತ್ತಾರು ಅನಾಥ ಮಕ್ಕಳಿಗೆ , ವೃದ್ಧಾಶ್ರಮದ ವೃದ್ಧರಿಗೆ ಹೋಳಿಗೆ ಊಟ ಮಾಡಿಸಿ ಪುಣ್ಯ ಸ್ಮರಣೆ ಮಾಡಿದ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಕಲಬುರಗಿ ಮಕ್ತಾಂಪುರ ಗುರುಬಸವ ಮಠದ ಪೂಜ್ಯ ಶಿವಾನಂದ ಮಹಾಸ್ವಾಮಿಗಳು ಆಶೀರ್ವಚನ ನೀಡುತ್ತಾ, ಇಂದಿನ ಯುವಕರು ಮದುವೆಯಾಗುತ್ತಲೇ ತಂದೆ ತಾಯಿಯರನ್ನು ಹೊರದಬ್ಬುತ್ತಿರುತ್ತಿದ್ದಾರೆ. ವೃದ್ದಾಶ್ರಮಗಳಿಗೆ ಸೇರಿಸುತ್ತಿರುವುದು ಈ ಸಮಾಜದ ಬಹುದೊಡ್ಡ ದುರಂತವಾಗಿದೆ. ಇತ್ತೀಚಿಗೆ ಯುವ ಜನತೆ ದುಶ್ಚಟಗಳಿಗೆ ಬಲಿಯಾಗಿ ಅವಧಿಗೆ ಮುನ್ನವೇ ತಮ್ಮ ಜೀವನವನ್ನು ಅಂತ್ಯಗೊಳಿಸುತ್ತಿರುವುದು ವಿಷಯದನೀಯ ಎಂದರು.

 ಕಾರ್ಯಕ್ರಮದಲ್ಲಿ ಕಮಲಾಪುರ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಜಿಲ್ಲಾ ಸರಕಾರಿ ನೌಕರರ ಸಂಘದ ನೂತನ ನಿರ್ದೇಶಕ ಮಲ್ಲಿಕಾರ್ಜುನ ಹೆಳವರ, ಉಪನ್ಯಾಸಕ, ಸಮಾಜ ಸೇವಕ ಎಚ್ .ಬಿ .ಪಾಟೀಲ, ಸಮಾಜ ಸೇವಕ ಶಿವಯೋಗೆಪ್ಪಾ ಎಸ್. ಬಿರಾದಾರ, ಈಪಿಎಫ್ ಲೆಕ್ಕಾಧಿಕಾರಿ ವಿಠ್ಠಲ ಮರಗುತ್ತಿ ,ಸಂಜೀವಿನಿ ವೃದ್ಧಾಶ್ರಮದ ಮುಖ್ಯಸ್ಥ ಶರಣು ಎ. ಕಮಠಾಣ, ಶರಣಗೌಡ ನಾಲವಾರ, ಮಾರ್ತಂಡರಾವ ಕುಲಕರ್ಣಿ, ವಿಜಯಕುಮಾರ ಇಂಡಿ, ರವಿ ಕಕ್ಕಳಮೆಲಿ, ಯಲ್ಲಪ್ಪ ಹೆಳವರ, ಬಸವರಾಜ ವೈ. ಹೆಳವರ, ದ್ರಾಕ್ಷಾಯಿಣಿ ಹೆಳವರ, ಕಮಲಾಬಾಯಿ ನಗನೂರ, ಸುವರ್ಣ ಹೆಳವರ, ರೇಖಾ ಹೆಳವರ, ರಾಮವ್ವ ಹೆಳವರ, ವಿದ್ಯಾಶ್ರೀ ಬಿ.ಹೆಳವರ, ಭರತಕುಮಾರ ಹೆಳವರ ಸೇರಿದಂತೆ ಇನ್ನಿತರರು ಭಾಗವಹಿಸಿದ್ದರು.