ಮುರುಗೇಪ್ಪ ಎಚ್. ಹಣಮನಳ್ಳಿ ಅವರ ಐದು ಕೃತಿ ಲೋಕಾರ್ಪಣೆ ಹಾಗೂ ಕಂದ ಪ್ರಶಸ್ತಿ ಪ್ರದಾನ ಸಮಾರಂಭ
ಮುರುಗೇಪ್ಪ ಎಚ್. ಹಣಮನಳ್ಳಿ ಅವರ ಐದು ಕೃತಿ ಲೋಕಾರ್ಪಣೆ ಹಾಗೂ ಕಂದ ಪ್ರಶಸ್ತಿ ಪ್ರದಾನ ಸಮಾರಂಭ
ಸೇಡಂ :ಕೊಡೆಕಲ್ ಶ್ರೀ ಚನ್ನಬಸವಣ್ಣ ಪ್ರಕಾಶನ ಹಣಮನಹಳ್ಳಿ ವತಿಯಿಂದ ಮುರಗೆಪ್ಪ.ಎಚ್. ಹನುಮನಹಳ್ಳಿ ಅವರು ರಚಿಸಿದ ಐದು ಕೃತಿಗಳ ಲೋಕಾರ್ಪಣೆ ಹಾಗೂ ಕಂದ ಪ್ರಶಸ್ತಿ ಪ್ರಧಾನ ಸಮಾರಂಭ ಸೇಡಂನ ಕೊತ್ತಲ ಬಸವೇಶ್ವರ ಸಭಾಭವನದಲ್ಲಿ ದಿನಾಂಕ 14.02.2026ರಂದು ಹಮ್ಮಿಕೊಂಡಿದ್ದು ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಸೇಡಂನ ಶಿವಶಂಕರ ಮಠದ ಷ.ಬ್ರ.ಶ್ರೀ ಶಿವಶಂಕರ ಶಿವಾಚಾರ್ಯರು ವಹಿಸಲಿದ್ದು, ಸಾನಿಧ್ಯವನ್ನು ಹಾಲಪ್ಪಯ್ಯ ವಿರಕ್ತಮಠದ ಮ.ನಿ. ಪ್ರ. ಶ್ರೀ ಪಂಚಾಕ್ಷರ ಮಹಾಸ್ವಾಮಿಗಳು ವಹಿಸಲಿರುವ ಕಾರ್ಯಕ್ರಮದ ಉದ್ಘಾಟನೆಯನ್ನು ನೃಪತುಂಗ ಅಧ್ಯಯನ ಸಂಸ್ಥೆ ಶ್ರೀ ಜಗದೀಶ ಕಡಬಗಾoವ್ ಅವರು ನೆರವೇರಿಸಲಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಯುಕ್ತ ಕರ್ನಾಟಕ ಪತ್ರಿಕೆಯ ಸ್ಥಾನಿಕ ಸಂಪಾದಕರಾದ ಶ್ರೀ ಪ್ರಭಾಕರ ಜೋಶಿ ಕ್ಷೇತ್ರ ಶಿಕ್ಷಣಾಧಿಕಾರಿಯಾದ ಶ್ರೀ ಮಾರುತಿ ಹುಜರಾತಿ ಪ್ರೇರಣಾ ಸಾಹಿತ್ಯ ಪರಿಷತ್ತಿನ ಡಾ. ಡಿ.ಫ್ರಾನ್ಸಿಸ್ ಕ್ಷೇವಿಯರ್ ಸಾಹಿತಿಗಳಾದ ಶ್ರೀಮತಿ ಪ್ರಮೀಳಾ ಪಾಟೀಲ್ ಬಿಬ್ಬಳ್ಳಿ ಅವರು ಆಗಮಿಸಲಿದ್ದು, ಕೃತಿಗಳ ಲೋಕಾರ್ಪಣೆಯನ್ನು ಸಾಹಿತಿಗಳಾದ ಡಾ. ಡಾ.ಶರಣಬಸಪ್ಪ ವಡ್ಡನಕೆರಿಯವರು ಮಾಡಲಿದ್ದು, ಕೃತಿ ಸಾಹಿತಿಗಳಾದ ಮಹಿಪಾಲ ರೆಡ್ಡಿ ಮುನ್ನೂರು, ಡಾ.ಜಗನ್ನಾಥ ತರನಳ್ಳಿ ಅವರು ಕೃತಿ ಪರಿಚಯಿಸಲಿದ್ದಾರೆ. ಇದೇ ಸಂದರ್ಭದಲ್ಲಿ 2025 ನೇ ಸಾಲಿನ ಕಂದ ಪ್ರಶಸ್ತಿ ಪ್ರಧಾನ ಸಮಾರಂಭ ಹಮ್ಮಿಕೊಂಡಿದ್ದು ಶ್ರೀ ಭಂಗಿ ದೊಡ್ಡ ಮಂಜುನಾಥ ಅವರ ಬೆಂಕಿಯ ಶೀತ (ಕಾದಂಬರಿ) ಶ್ರೀ ಪ್ರವೀಣ ಕುಮಾರ ಅವರ ಎಡೆ (ಕಥಾ ಸಂಕಲನ )ಶ್ರೀಮತಿ ರೂಪಾ ದೇವಿ ಬಂಗಾರ ಅವರ ಮುಡಿಪು (ಕಾದಂಬರಿ )ಶ್ರೀಮತಿ ಶ್ರೀಮತಿ ಮಲ್ಲಮ್ಮ ಜಂಡಿ ಅವರ ದಿಡಿಗು( ಕಥಾ ಸಂಕಲನ) ಕ್ಕೆ ಪ್ರಶಸ್ತಿ ಲಭಿಸಿದ್ದು ಅದೇ ರೀತಿ ಕಂದ ಗೌರವ ಪ್ರಶಸ್ತಿಯನ್ನು ಶ್ರೀ ಅಪ್ಪಾರಾವ ಅಕ್ಕೋಣೆ, ಶ್ರೀಮತಿ ಪಾರ್ವತಿ ಬಿ. ಸೊನ್ನದ ಅವರಿಗೆ ಲಭಿಸಿದ್ದು, ಹಿರಿಯ ಸಾಹಿತಿಗಳಾದ ಶ್ರೀ ಲಿಂಗಾ ರೆಡ್ಡಿ ಸೇರಿ ಅವರು ಪ್ರಶಸ್ತಿ ಪ್ರಧಾನ ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಂದ ಪ್ರಶಸ್ತಿ ಆಯ್ಕೆ ಸಮಿತಿಯ ಅಧ್ಯಕ್ಷರಾದ ಶ್ರೀ ಸಿದ್ದಪ್ಪ ತಳ್ಳಳ್ಳಿ ಅವರು ವಹಿಸಲಿದ್ದು ಕಾರ್ಯಕ್ರಮದಲ್ಲಿ ಮುರುಗಪ್ಪ ಎಚ್. ಹಣಮನಹಳ್ಳಿ ಉಪಸ್ಥಿತರಿರಲಿದ್ದಾರೆ.
