ಜನಪದ ಉತ್ಸವಕ್ಕೆ ಸರ್ಕಾರ ಆದೇಶ : ಸಿ.ಎಸ್.ಮಾಲಿ ಪಾಟೀಲ ಸ್ವಾಗತ

ಜನಪದ ಉತ್ಸವಕ್ಕೆ ಸರ್ಕಾರ ಆದೇಶ : ಸಿ.ಎಸ್.ಮಾಲಿ ಪಾಟೀಲ ಸ್ವಾಗತ

ಜನಪದ ಉತ್ಸವಕ್ಕೆ ಸರ್ಕಾರ ಆದೇಶ : ಸಿ.ಎಸ್.ಮಾಲಿ ಪಾಟೀಲ ಸ್ವಾಗತ 

ಪದವಿ ಕಾಲೇಜುಗಳಲ್ಲಿ ಜನಪದ ಉತ್ಸವ ಆಚರಣೆಗೆ ಸೂಚನೆ

ಕಲಬುರಗಿ : ರಾಜ್ಯದ ಎಲ್ಲಾ ಸರಕಾರಿ ಪದವಿ ಕಾಲೇಜುಗಳಲ್ಲಿ ಮಾರ್ಚ್‌ನೊಳಗೆ 'ಜಾನಪದ ಉತ್ಸವ' ಆಚರಿಸುವಂತೆ ಕಾಲೇಜು ಶಿಕ್ಷಣ ಇಲಾಖೆಯು ಪ್ರಾಂಶುಪಾಲರಿಗೆ ಸೂಚನೆ ನೀಡಿದೆ. ಇಂದಿನ ದಿನಪತ್ರಿಕೆಗಳಲ್ಲಿ ವರದಿಯಾಗಿದೆ ವಿಷಯ ತಿಳಿದು ಕರ್ನಾಟಕ ಜಾನಪದ ಪರಿಷತ್ತು ಕಲಬುರಗಿ ಜಿಲ್ಲಾ ಅಧ್ಯಕ್ಷ ಸಿ.ಎಸ್.ಮಾಲಿ ಪಾಟೀಲ ಸ್ವಾಗತಿಸಿದ್ದಾರೆ.

ಈಗಾಗಲೇ ಕರ್ನಾಟಕ ಜಾನಪದ ಪರಿಷತ್ತು ಕಲಬುರಗಿಯಲ್ಲಿನ ಕಾಲೇಜುಗಳಲ್ಲಿ ಜಾನಪದ ಬಗ್ಗೆ ಹಾಗೂ ವಿದ್ವಾಂಸರ ಕುರಿತು ಅವರ ಬದುಕು ಬರಹ ಕಲೆ ಮುಂತಾದ ವಿಷಯಗಳ ಕುರಿತು ಸರಣಿ ಉಪನ್ಯಾಸಗಳನ್ನು ಮಾಡಿದ್ದೆವೆ ಎಂದು ಹೇಳಿದರು 

ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಅಡಗಿರುವ ಆಯಾ ಪ್ರಾದೇಶಿಕ ಸಾಂಪ್ರದಾಯಿಕ ಕಲೆ ಹಾಗೂ ಕೌಶಲವನ್ನು ಪ್ರದರ್ಶಿಸಲು 'ನಮ್ಮ ಸಂಸ್ಕೃತಿ - ನಮ್ಮ ಹೆಮ್ಮೆ' ಶೀರ್ಷಿಕೆಯಡಿ ಜಾನಪದ ಉತ್ಸವ ಆಚರಿಸುವಂತೆ ಸೂಚನೆ ನೀಡಿದೆ. ಜನಪದ ಸಾಹಿತ್ಯ, ಪರಿಸರ, ಭಾಷೆ, ಸಂಸ್ಕೃತಿ, ಕಲೆ, ಸಾಹಿತ್ಯ ಕುರಿತು ಕಾರ್ಯಾಗಾರ, ಪಾರಂಪರಿಕ ಕರಕುಶಲ ವಸ್ತುಗಳ ತಯಾರಿಕೆ/ ವಸ್ತು ಪ್ರದರ್ಶನ, ಜನಾಂಗೀಯ ಪಾಕ ಪದ್ಧತಿ ಪ್ರದರ್ಶನ ಹಾಗೂ ಸ್ಪರ್ಧೆ, ಸ್ಥಳೀಯ ಕಲಾವಿದರಿಂದ ದೇಸಿ ನೃತ್ಯ- ಸಂಗೀತ, ಆಟೋಟ ಪ್ರದರ್ಶನ ಹಾಗೂ ಸ್ಪರ್ಧೆ ಮುಂತಾದ ಕಾರ್ಯಕ್ರಮಗಳಲ್ಲದೆ, ವಿದ್ಯಾರ್ಥಿಗಳಲ್ಲಿ ಅಡಕವಾಗಿರುವ ವಿಶೇಷವಾದ ಸೃಜನಾತ್ಮಕ/ ಕಲಾತ್ಮಕ ಕೌಶಲಗಳಿದ್ದಲ್ಲಿ ಅಂತವುಗಳನ್ನು ಗುರುತಿಸಿ ಪ್ರದರ್ಶಿಸಲು ವೇದಿಕೆ ಸಿದ್ಧಪಡಿಸುವುದು ಮತ್ತಿತರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಸೂಚಿಸಲಾಗಿದ್ದು, ಸರ್ಕಾರ ಕೈಗೊಂಡಿರುವ ಕ್ರಮ ಒಳ್ಳೆಯದಾಗಿದೆ ಎಂದು ಹೇಳಿದರು.

ಇಂದಿನ ದಿನಮಾನಗಳಲ್ಲಿ ವಿದ್ಯಾರ್ಥಿಗಳು ನಮ್ಮ ಸಂಸ್ಕೃತಿ ಜಾನಪದ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ ಅವರಿಗೆ ವಿವಿಧ ಕಾರ್ಯಕ್ರಮಗಳ ಚಟುವಟಿಕೆ ಮುಖಾಂತರ ಜಾಗೃತಿ ಮೂಡಿಸುವ ಕೆಲಸ ಆಗಬೇಕಾಗಿದೆ ಎಂದು ಹೇಳಿದರು