ಸೂಫಿ ಸಾಹಿತ್ಯ ಕುರಿತು ಒಂದು ದಿನದ ವಿಚಾರ ಸಂಕಿರಣ
ಹಮೀದ ಪಿಯಾರೆ ಕಾಲೇಜಿನಲ್ಲಿ
ಸೂಫಿ ಸಾಹಿತ್ಯ ಕುರಿತು ಒಂದು ದಿನದ ವಿಚಾರ ಸಂಕಿರಣ
ಕೇಂದ್ರ ಸಾಹಿತ್ಯ ಅಕಾಡೆಮಿ ನವದೆಹಲಿ ಮಾತೋಶ್ರೀ ಶೈಕ್ಷಣಿಕ ಸಾಮಾಜಿಕ, ಆರ್ಥಿಕ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ವತಿಯಿಂದ ನಗರದ ಹಮೀದ್ ಪಿಯಾರೇ ಶಿಕ್ಷಣ ಮಹಾವಿದ್ಯಾಲಯದಲ್ಲಿ ಸೂಫಿ ಸಾಹಿತ್ಯದ ವಿಷಯದ ಮೇಲೆ ಒಂದು ದಿನದ ವಿಚಾರ ಸಂಕೀರ್ಣ ಹಮ್ಮಿಕೊಂಡಿದ್ದು ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಭಾಷ ನಿಕಾಯದ ಡಿನ್ ಡಾ. ವಿಕ್ರಮ ವಿಸಾಜಿ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದು, ಕೇಂದ್ರ ಸಾಹಿತ್ಯ ಅಕಾಡೆಮಿ ಕನ್ನಡ ಸಲಹಾ ಸಮಿತಿ ಸದಸ್ಯರಾದ ಜಯದೇವಿ ಗಾಯಕ್ವಾಡ್ ಅವರು ಪ್ರಾಸ್ತಾವಿಕ ನುಡಿಗಳನ್ನಾಡಲಿದ್ದು ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಸಿದ್ದಲಿಂಗೇಶ್ವರ ಪ್ರಕಾಶನ ಸಂಸ್ಥೆಯ ಪ್ರಕಾಶಕರಾದ ಡಾ. ಬಸವರಾಜ ಕೊನೆಕ್ ಅವರು ಆಗಮಿಸಲಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಮೀದ ಪಿಯಾರೆ ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷರಾದ ಡಾ. ರಬಿಯಾ ಖಾನಮ್ ವಹಿಸಲಿದ್ದಾರೆ.
ಡಾ. ರೋಲೆಕರ್ ನಾರಾಯಣ ಅವರ ಅಧ್ಯಕ್ಷತೆಯಲ್ಲಿ ನಡೆಯುವ ಮೊದಲ ಗೋಷ್ಠಿಯಲ್ಲಿ ಬೊಡೇ ರಿಯಾಜ್ ಅಹಮದರವರು ಸೂಫಿ ಪರಂಪರೆ ಬಂದೇನವಾಜ ಕುರಿತು ಡಾ. ಗವಿಸಿದ್ದಪ್ಪ ಪಾಟೀಲ ಅವರು ಶರಣರು ಮತ್ತು ಸೂಫಿ ಪರಂಪರೆ ಕುರಿತು ವಿಚಾರ ಮಂಡಿಸಲಿದ್ದು, ಎರಡನೇ ಗೋಷ್ಠಿಯ ಅಧ್ಯಕ್ಷತೆಯನ್ನು ಡಾ. ನಾಗಪ್ಪ ಟಿ.ಗೋಗಿ ವಹಿಸಲಿದ್ದು ಕರ್ನಾಟಕದ ಸೂಫಿ ಪರಂಪರೆ ಕುರಿತು ಡಾ. ಚಿದಾನಂದ ಚಿಕ್ಕಮಠ ಮಾತನಾಡಲಿದ್ದು, ಸೂಫಿ ಪರಂಪರೆ ಮತ್ತು ಮಹಿಳೆ ಕುರಿತು ಡಾ. ಪರ್ವೀನ ಸುಲ್ತಾನ ಮಾತನಾಡಲಿದ್ದಾರೆ.
ಸಂಜೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ ಸಹಾಯಕ ಕುಲ ಸಚಿವರಾದ ಡಾ.ಅಜೀಮ ಪಾಷಾ ಅವರು ಸಮಾರೋಪ ನುಡಿಗಳ ನಾಡಲಿದ್ದು ಅಪ್ಪಾರಾವ ಅಕ್ಕೋಣೆಯವರು ಪ್ರಮಾಣ ಪತ್ರ ವಿತರಣೆ ಮಾಡಲಿದ್ದು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಶರಣಗೌಡ ಪಾಟೀಲ ಪಾಳಾ ಆಗಮಿಸಿರುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾ. ವನಿತಾ ಜಾದವ ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಡಾ. ಜಯದೇವಿ ಗಯಾಕ್ವಾಡ್ ಹಾಗೂ ಡಾ. ಶರಣಬಸಪ್ಪ ವಡ್ಡನಕೇರಿ ತಿಳಿಸಿದ್ದಾರೆ.
