ರಮಾಬಾಯಿ ಅಂಬೇಡ್ಕರ್ ಇವರ 127ನೇ ಜಯಂತೋತ್ಸವ

ರಮಾಬಾಯಿ ಅಂಬೇಡ್ಕರ್ ಇವರ 127ನೇ ಜಯಂತೋತ್ಸವ
ಕಲಬುರಗಿ; ನಗರದ ಶಹಾ ಬಜಾರ್‌ನಲ್ಲಿರುವ ನೈರ್ಮಲ್ಯ ನಿರೀಕ್ಷಕರ ಕಾರ್ಯಾಲಯದಲ್ಲಿ ಸ್ಲಂ ಜನರ ಸಂಘಟನೆ ಕರ್ನಾಟಕ ಜಿಲ್ಲಾ ಘಟಕ ಕಲಬುರಗಿ ವತಿಯಿಂದ ತ್ಯಾಗಮಯಿ ಮಾತೋಶ್ರೀ ರಮಾಬಾಯಿ ಅಂಬೇಡ್ಕರ್ ಇವರ 127ನೇ ಜಯಂತೋತ್ಸವ ಕಾರ್ಯಕ್ರಮವನ್ನು ಪೌರಕಾರ್ಮಿಕ ಬಂಧುಗಳೊಂದಿಗೆ ಆಚರಿಸಲಾಯಿತು. ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತರಬೇತಿ ಕೇಂದ್ರದ ಪ್ರಾಂಶುಪಾಲರಾದ ಡಾ.ರವಿಕಾಂತಿ ಶರಣಬಸಪ್ಪ ಕ್ಯಾತ್ನಳ, ಆರೋಗ್ಯ ನಿರೀಕ್ಷಕ ರಾಜಕುಮಾರ್, ಬಾಬುರಾವ್ ದಂಡಿನ್ಕರ್, ಅಲ್ಲಮಪ್ರಭು ನಿಂಬರ್ಗಾ, ವಿಕಾಸ್ ಸವಾರಿಕರ್, ಬ್ರಹ್ಮಾನಂದ ಮಿಂಚಾ,ಮಲ್ಲಿಕಾರ್ಜುನ್ ಸಿಂಗೆ, ಅಂಬರೀಶ್ ಇಟ್ಟಗಿಕರ್, ಕರಣ ಕುಮಾರ್ ಬಂದರ್ವಾಡ್, ಶಿವಕುಮಾರ್ ಚಿಂಚೋಳಿ, ಅನಿಲ್ ಚಕ್ರ, ಮಲ್ಲಿಕಾರ್ಜುನ್ ಬಾಪು ನಗರ, ಕಮಲಬಾಯಿ, ಸತ್ಯಭಾಮ ಹಿರಾಪುರ ಸೇರಿದಂತೆ ಪೌರಕಾರ್ಮಿಕರು, ಮುಖಂಡರು ಇದ್ದರು.