ಕನ್ನಡದ ಬಗ್ಗೆ ಕಮಲ ಹಾಸನ್ ಹೇಳಿಕೆ ಖಂಡನೆ : ಪ್ರೊ. ಪಾಲಾಮೂರ್

ಕನ್ನಡದ ಬಗ್ಗೆ ಕಮಲ ಹಾಸನ್ ಹೇಳಿಕೆ ಖಂಡನೆ :  ಪ್ರೊ. ಪಾಲಾಮೂರ್

ಕನ್ನಡದ ಬಗ್ಗೆ ಕಮಲ ಹಾಸನ್ ಹೇಳಿಕೆ ಖಂಡನೆ : ಪ್ರೊ. ಪಾಲಾಮೂರ್

ಕನ್ನಡಿಗರ ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲದಿದ್ದರೆ 'ಆ' 'ಹಾಸನ್' ಆಗುತ್ತೀರಿ

ಚಿಂಚೋಳಿ : ಕನ್ನಡದ ಬಗ್ಗೆ ತಮಿಳು ನಟ ಕಮಲ್ ಹಾಸನ್ ನೀಡಿರುವ ವಿವಾದಾತ್ಮಕ ಹೇಳಿಕೆಯನ್ನು ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ ನಿಕಟಪೂರ್ವ ಅಧ್ಯಕ್ಷ ಪ್ರೊ.ಮಲ್ಲಿಕಾರ್ಜುನ ಪಾಲಾಮೂರ್ ರವರು ತೀವ್ರವಾಗಿ ಖಂಡಿಸಿದ್ದಾರೆ. 

ಈ ಕುರಿತು ಪ್ರಕಟಣೆ ನೀಡಿ, 2011ರ ಜನಗಣತಿಯ ಪ್ರಕಾರ ಜಗತ್ತಿನಲ್ಲಿ 6.4 ಕೋಟಿ ಜನರು ಕನ್ನಡ ಮಾತನಾಡುತ್ತಾರೆ ಎಂದು ತಿಳಿದುಬಂದಿದೆ. ಇವರಲ್ಲಿ 5.5 ಕೋಟಿ ಜನರ ಮಾತೃಭಾಷೆ ಕನ್ನಡವಾಗಿದೆ. ಬ್ರಾಹ್ಮಿ ಲಿಪಿಯಿಂದ ರೂಪುಗೊಂಡ ಕನ್ನಡ ಲಿಪಿಯನ್ನು ಉಪಯೋಗಿಸಿ ಕನ್ನಡ ಭಾಷೆಯನ್ನು ಬರೆಯಲಾಗುತ್ತದೆ. ಕನ್ನಡ ಬರಹದ ಮಾದರಿಗಳಿಗೆ ಸಾವಿರದ ಐನೂರು ವರ್ಷಗಳ ಸಾಹಿತ್ಯ ಪರಂಪರೆ ಚರಿತ್ರೆ ಕನ್ನಡಕ್ಕಿದೆ. ವಿನೋಬಾ ಭಾವೆ ಕನ್ನಡ ಲಿಪಿಯನ್ನು ಲಿಪಿಗಳ ರಾಣಿಯೆಂದು ಹೊಗಳಿದ್ದಾರೆ. ಜಗತ್ತಿನಲ್ಲಿ ಅತ್ಯಂತ ಹೆಚ್ಚು ಮಂದಿ ಮಾತನಾಡುವ ಭಾಷೆಯೆಂಬ ನೆಲೆಯಲ್ಲಿ 29ನೆಯ ಸ್ಥಾನ ಕನ್ನಡಕ್ಕಿದೆ. ಇಂತಹ ಐತಿಹಾಸಿಕ ಕನ್ನಡ ಭಾಷೆಯನ್ನು ಮಾತನಾಡುವ ಭರದಲ್ಲಿ ಅವಮಾನಿಸಿದ ತಮಿಳು ನಟ ಕಮಲ್ ಹಾಸನ್ ರವರ ಹೇಳಿಕೆಯನ್ನು ಖಂಡನೀಯವಾದುದ್ದು. ಕನ್ನಡ ಭಾಷೆಯನ್ನು 45 ದಶಲಕ್ಷ (4.5 ಕೋಟಿ) ಜನರು ಆಡು ನುಡಿಯಾಗಿ ಬಳಸುತ್ತಲಿದ್ದಾರೆ. ಕ್ರಿ.ಶ. ಆರನೆಯ ಶತಮಾನದ ಪಶ್ಚಿಮ ಗಂಗ ಸಾಮ್ರಾಜ್ಯದ ಕಾಲದಲ್ಲಿ ಮತ್ತು ಒಂಬತ್ತನೆಯ ಶತಮಾನದ ರಾಷ್ಟ್ರಕೂಟ ಸಾಮ್ರಾಜ್ಯದ ಕಾಲದಲ್ಲಿ ಹಳಗನ್ನಡ ಸಾಹಿತ್ಯ ಅತ್ಯಂತ ಹೆಚ್ಚಿನ ರಾಜಾಶ್ರಯ ಪಡೆಯಿತು. ದ್ರಾವಿಡ ಭಾಷೆಗಳಲ್ಲಿ ಪ್ರಾಮುಖ್ಯವುಳ್ಳ ಭಾಷೆಯೂ ಭಾರತದ ಪುರಾತನವಾದ ಭಾಷೆಗಳಲ್ಲಿ ಒಂದೂ ಆಗಿರುವ ಕನ್ನಡ ಭಾಷೆಗೆ ನಟ ಕಮಲ್ ಹಾಸನ್ ಅವರು ತಮಿಳಿಗೆ ಲಿಪಿ ಕೊಟ್ಟಿದ್ದು ಕನ್ನಡ ಭಾಷೆ ಎಂದು ಹೇಳಿರುವ ಅವರು, ಕ್ಷಮೆ ಕೇಳಿದರೆ ಕ್ಷಮಾ ಹಾಸನ್ ಆಗುತ್ತೀರಿ. ಇಲ್ಲದಿದ್ದರೆ 'ಆ' 'ಹಾಸನ್' ಆಗುತ್ತೀರಿ ಎಂದು ಪ್ರೊ. ಮಲ್ಲಿಕಾರ್ಜುನ ಪಾಲಾಮೂರ ಎಚ್ಚರಿಸಿದ್ದಾರೆ.