ರಮಾಬಾಯಿ ಅಂಬೇಡ್ಕರ ಜಯಂತಿ ಆಚರಣೆ

ರಮಾಬಾಯಿ ಅಂಬೇಡ್ಕರ ಜಯಂತಿ ಆಚರಣೆ
ಆಳಂದ :ಪಟ್ಟಣದ ಸಿದ್ಧಾರ್ಥ ದೀಕ್ಷಾಭೂಮಿಯ ಸಮುದಾಯ ಭವನದಲ್ಲಿ ಆಳಂದ ತಾಲೂಕಿನ ಸಮಾನ ಮನಸ್ಕರ ಯುವಕರ ವೇದಿಕೆ ವತಿಯಿಂದ ತ್ಯಾಗ ಮೂರ್ತಿ ಮಾತಾ ರಮಾಬಾಯಿ ಅಂಬೇಡ್ಕರ್ ಅವರ ಜನ್ಮದಿನ ಆಚರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮದ ಉದ್ಘಾಟನೆ ಪ್ರಕಾಶ ಯಾತನೂರ ಸಿಪಿಐ ಆಳಂದ ರವರು ಮಾಡಿದರು ಉಪನ್ಯಾಸಕರಾದ ರಮೇಶ ಮಾಡಿಯಾಳಕರ ರಮಾಬಾಯಿ ಜೀವನ ಮತ್ತು ಸಂಘರ್ಷ ಕುರಿತು ಮಾತನಾಡಿ ಬಾಬಾಸಾಹೇಬ ಅಂಬೇಡ್ಕರ್ ಅವರ ದಾರಿಯಲ್ಲಿ ನಾವೆಲ್ಲರೂ ನಡೆಯೊಣ ಎನ್ನುವ ಸಂದೇಶ ನಿಡಿದರು. ಈ ಸಂದರ್ಭದಲ್ಲಿ ಬಾಬುರಾವ ಅರುಣೊದಯ, ಸುನಿಲ ಹಿರೊಳಿಕರ, ಮಲ್ಲಿಕಾರ್ಜುನ ಶೃಂಗೆರಿ, ಬಾಬುರಾವ ಸುಳ್ಳದ ರಾಜಕುಮಾರ್ ಮುದಗಲೆ ಮಹೇಶ್ ಕಾಂಬಳೆ ಮಹೇಶ್ ಮೋಫಾ ಆತ್ಮಾನಂದ ತೊಳೆ ಅಜಯ್ ಸಿ ಎಂ .ರಜನೇಶ್ ಜಂಗಲೇ ಜೀವನ್ ಕುಮಾರ್ ಸುಳ್ಳದ ಮುತ್ತಣ್ಣ ಜಂಗಲೇ ನಾಗರಾಜ್ ದೇವನೂರ, ದೀಪಕ್ ತೊಳೆ ಲಾಡಪ್ಪ ಚಿಚಕೋಟಿ ಮಹಾದೇವ್ ಜಿಡ್ಡೆ ,ಜೈ ಭೀಮ್ ದೊಡ್ಮನಿ ಅಖಿಲೇಶ್ ಜಂಗಲೇ ಓಂ ಪ್ರಕಾಶ್ ದೇವನೂರ,
ಅಂಬರೀಶ್ ಕಾಂಬಳೆ ದಿನೇಶ್ ಆದಿ ದೀಪಕ್ ಮುತ್ತಣ್ಣ
ಶ್ರಾವಣ್ ವಿಠ್ಠಲ ಅಕ್ಷಯ್ ಕುಮಾರ್ ಸಿಎಂ ಮುಂತಾದವರು ಉಪಸ್ಥಿತರಿದ್ದರು.
ಸಿದ್ಧಾರ್ಥ ಹಸೂರೆ ನಿರೂಪಿಸಿದರು. ರಾಜಶೇಖರ ಕಡಗನ ಸ್ವಾಗತಿಸಿದರು. ಸತ್ಯಾನಂದ್ ತೊಳೆ ವಂದಿಸಿದರು.
ವರದಿ ಡಾ .ಅವಿನಾಶ S ದೇವನೂರ