ಮಾಲಗತ್ತಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ

ಮಾಲಗತ್ತಿ: ಸಿಸಿ ರಸ್ತೆ ಕಾಮಗಾರಿಗೆ ಚಾಲನೆ
ಶಹಾಬಾದ: ತಾಲ್ಲೂಕಿನ ಮಾಲಗತ್ತಿ ಗ್ರಾಮದ ಡಾ.ಬಿಆರ.ಅಂಬೇಡ್ಕರ್ ನಗರದ ಬಡಾವಣೆಯಲ್ಲಿ ಕರ್ನಾಟಕ ಸರ್ಕಾರದ ಸಚಿವರು ಹಾಗೂ ಶಾಸಕರಾದ ಪ್ರಿಯಾಂಕ ಖರ್ಗೆ ಜೀ ಯವರ ಅನುದಾನದಲ್ಲಿ 2023-2024 ನೇ ಸಾಲಿನ 5054 ಲೆಕ್ಕ ಸಿಸಿಕೆ ಅಡಿಯಲ್ಲಿ ಮಂಜೂರಾದ 15 ಲಕ್ಷ ರೂ. ಗಳ ವೆಚ್ಚದಲ್ಲಿ ಸಿ.ಸಿ ರಸ್ತೆ ಕಾಮಗಾರಿಗೆ ಗ್ರಾಪಂ ಅಧ್ಯಕ್ಷ ದೀಪಕ ಬೊಮ್ಮನೂರ ಪೂಜಾ ಮಾಡಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಅಭಿವೃದ್ಧಿ ಅಧಿಕಾರಿ ಕವಿತಾ ಹಾಗೂ ಊರಿನ ಕಾಂಗ್ರೆಸ್ ಮುಖಂಡರಾದ ಪ್ರಕಾಶ್ ಜೈನ್, ಮಲ್ಲಣ್ಣ ಅಲ್ಲೂರ, ಚಂದ್ರಶೇಖರ ರಾವೂರ, ವಿಜಯಕುಮಾರ ಕಟ್ಟಿ, ಮಲ್ಲಪ್ಪ ತಳವಾರ, ಸಿದ್ದಣ್ಣ ಸಾವಳಿ ಮತ್ತು ಗುತ್ತಿಗೆದಾರರು ಅಧಿಕಾರಿಗಳಾದ ವಾಹನದ ಜೆಇ ಹಾಗೂ ಗ್ರಾಮದ ಪ್ರಮುಖರು ಉಪಸ್ಥಿತರಿದ್ದರು.
ಶಹಾಬಾದ ಸುದ್ದಿ ನಾಗರಾಜ್ ದಂಡಾವತಿ