ಕೊಣ್ಣೂರ್ ಗ್ರಾಮದಲ್ಲಿ "ರೈತರ ನಡೆ ಸಾವಯವ ಕೃಷಿ ಕಡೆ" ಕಾರ್ಯಕ್ರಮಕ್ಕೆ ಚಾಲನೆ

ಕೊಣ್ಣೂರ್ ಗ್ರಾಮದಲ್ಲಿ "ರೈತರ ನಡೆ ಸಾವಯವ ಕೃಷಿ ಕಡೆ" ಕಾರ್ಯಕ್ರಮಕ್ಕೆ ಚಾಲನೆ

ಕೊಣ್ಣೂರ್ ಗ್ರಾಮದಲ್ಲಿ "ರೈತರ ನಡೆ ಸಾವಯವ ಕೃಷಿ ಕಡೆ" ಕಾರ್ಯಕ್ರಮಕ್ಕೆ ಚಾಲನೆ

ಯಡ್ರಾಮಿ ತಾಲ್ಲೂಕು, ಆ.6:ಯಡ್ರಾಮಿ ಮತ್ತು ಜೇವರ್ಗಿ ತಾಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕೊಣ್ಣೂರ್ ತಾಂಡಾದಲ್ಲಿ "ರೈತರ ನಡೆ ಸಾವಯವ ಕೃಷಿ ಕಡೆ" ಎಂಬ ವಿಶೇಷ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಯಿತು.

ಈ ಕಾರ್ಯಕ್ರಮದಲ್ಲಿ ಕೊಣ್ಣೂರ್ ತಾಂಡದ ಸಮಸ್ತ ರೈತರು ಸಕ್ರಿಯವಾಗಿ ಭಾಗವಹಿಸಿದ್ದರು. ರೈತರಿಗೆ ಸಾವಯವ ಕೃಷಿಯ ಮಹತ್ವ, ಎರೆಹುಳು ಗೊಬ್ಬರದ ಉಪಯೋಗ, ಮಣ್ಣು ಪರೀಕ್ಷೆ, ಮಾಗಿ ಹುಳುಮೆ, ಬೀಜ ಶುದ್ಧೀಕರಣ, ಬೇವಿನ ಎಣ್ಣೆ ಮತ್ತು ಬುರಾನ್ ಜಿಂಕ್ ಬಳಕೆ, ನೀರು ಸಂರಕ್ಷಣೆ ಮತ್ತು ಮಣ್ಣಿನ ಪಲವತ್ತತೆ ಕಾಪಾಡಲು ಸಂಯುಕ್ತ ಗೊಬ್ಬರಗಳ ಬಳಕೆಯ ಬಗ್ಗೆ ಸಮಗ್ರ ಮಾಹಿತಿ ನೀಡಲಾಯಿತು.

ಈ ಕಾರ್ಯಕ್ರಮವನ್ನು ಸಾವಯವ ಕೃಷಿ ತಂಡ "ಬೇಡ.B.R.C." ಮಾರ್ಗದರ್ಶನದಲ್ಲಿ ನಡೆಸಲಾಯಿತು. ತರಬೇತಿಯನ್ನು ಬಸವರಾಜ್ ಪಾಟೀಲ, ದೇವೇಂದ್ರ ಗಜಕೋಶ, ಸೈದಪ್ಪ ಗುತ್ತೇದಾರ್, CRP ಭೀಮನಗೌಡ ಪಾಟೀಲ ಮತ್ತು ಸಿದ್ದಣ್ಣ ಸೋಮಜಾಳ ನೀಡಿದರು.

ಇದ ಕುರಿತು ಮಾತನಾಡಿದ ಚಂದ್ರಶೇಖರ್ ರಾಥೋಡ್ ಕೊಣ್ಣೂರ್ ಅವರು, "ಈ ಕಾರ್ಯಕ್ರವು ರೈತರಲ್ಲಿ ಸಾವಯವ ಕೃಷಿಯ ಮಹತ್ವದ ಅರಿವು ಮೂಡಿಸಲು ಸಹಾಯ ಮಾಡಲಿದೆ," ಎಂದು ಮಾಧ್ಯಮದವರಿಗೆ ತಿಳಿಸಿದ್ದಾರೆ.

ವರದಿ: ಜೆಟ್ಟಪ್ಪ ಎಸ್. ಪೂಜಾರಿ