ಕಲಮೂಡ ಪಿಕೆಪಿಎಸ್ ಗೆ ರಾಜಕುಮಾರ ಕೋಟೆ ಸೇರಿ 12 ಜನ ನಿರ್ದೇಶಕರಾಗಿ ಅವಿರೋಧ ಆಯ್ಕೆ
![ಕಲಮೂಡ ಪಿಕೆಪಿಎಸ್ ಗೆ ರಾಜಕುಮಾರ ಕೋಟೆ ಸೇರಿ 12 ಜನ ನಿರ್ದೇಶಕರಾಗಿ ಅವಿರೋಧ ಆಯ್ಕೆ](https://kalyanakahale.com/uploads/images/202502/image_870x_67a57976d8c19.jpg)
ಕಲಮೂಡ ಪಿಕೆಪಿಎಸ್ ಗೆ ರಾಜಕುಮಾರ ಕೋಟೆ ಸೇರಿ 12 ಜನ ನಿರ್ದೇಶಕರಾಗಿ ಅವಿರೋಧ ಆಯ್ಕೆ
ಕಮಲಾಪುರ: ತಾಲೂಕಿನ ಕಲಮೂಡ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ (ಪಿಕೆಪಿಎಸ್) ಕಚೇರಿಯಲ್ಲಿ 3-2-2025 ರಂದು ನಡೆದ ಸಂಘದ ಆಡಳಿತ ಮಂಡಳಿ ಚುನಾವಣೆಯಲ್ಲಿ 12 ಜನ ನಿರ್ದೇಶಕರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು.
ಅಶೋಕ್ ರಾಮಚಂದ್ರ, ಕಲ್ಯಾಣರಾವ್ ಶೆಂಕ್ರಪ್ಪ, ರಾಜಕುಮಾರ್ ಗುರುಲಿಂಗಪ್ಪ ಕೋಟಿ, ರೇವಣಸಿದ್ದಪ್ಪ ರಾಮಲಿಂಗಪ್ಪ ಬಿರಾದಾರ, ಜಗದೇವಿ ಶಿವಶರಣಪ್ಪ, ಲೋಕರೆಡ್ಡಿ ಮಲ್ಲರೆಡ್ಡಿ ಪೂಲ್ಲಾ, ತುಕಾರಾಮ ಪ್ರಭು, ಮೋನಪ್ಪ ಗುಂಡಪ್ಪ ಬಡಿಗೇರ್, ಅಶೋಕರೆಡ್ಡಿ ಭೀಮರೆಡ್ಡಿ, ಸಿದ್ದಮ್ಮ ರೇವಣಸಿದ್ದಯ್ಯ ಮಠ, ಪ್ರಭಾವತಿ ವಿಲಾಸ ರೆಡ್ಡಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರು.ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯದರ್ಶಿ ಸರ್ವ ಸದಸ್ಯರನ್ನು ಗೌರವಿಸಿ ಸನ್ಮಾನಿಸಿದರು.
ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ನೂತನ ನಿರ್ದೇಶಕ ರಾಜಕುಮಾರ ಕೋಟೆ ಅವರು ರೈತರಿಗೆ ಅನ್ಯಾಯವಾಗದ ರೀತಿಯಲ್ಲಿ ನಡೆದುಕೊಳುತ್ತೇವೆ. ಪಿಕೆಪಿಎಸ ಸಂಘದಿಂದ ಯೋಜನೆಗಳನ್ನು ರೈತರಿಗೆ ತಲುಪಿಸುವಂತೆ ಪ್ರಯತ್ನ ಪಟ್ಟು ಕೆಲಸ ಮಾಡುತ್ತೇವೆ ಎಂದು ಎಲ್ಲರ ಸಹಾಯ ಸಹಕಾರ ಭರವಸೆ ಇರಬೇಕೆಂದು ಮಾತನಾಡಿದರು.
ಕಲಮೂಡ ಗ್ರಾಮದ ರೈತರು ಹಿರಿಯರು ಉಪಸ್ಥಿತಿಯಲ್ಲಿದ್ದರು.